Thursday, July 31, 2025

Latest Posts

ಭಾರತ ವಿರುದ್ಧದ ಪಂದ್ಯಕ್ಕೆ ನಾವು ಉತ್ತಮವಾಗಿ ತಯಾರಿ ನಡೆಸಿದ್ದೇವೆ; ಬಾಬರ್..!

- Advertisement -

www.karnatakatv.net : ಟಿ20 ವಿಶ್ವಕಪ್ ಟೂರ್ನಿಯ ಸೂಪರ್ 12 ಹಂತದ ಪಂದ್ಯಗಳಿಗೆ ಇಂದು ಚಾಲನೆ ಸಿಗಲಿದೆ.

ಆದರೆ ಎಲ್ಲಾ ಅಭಿಮಾನಿಗಳ ಕಣ್ಣು ಅ.24ರಂದು ನಡೆಯಲಿರುವ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯದ ಮೇಲೆ ಬಿದ್ದಿದ್ದೆ. ಹೌದು..ಇಂಡಿಯಾ-ಪಾಕಿಸ್ತಾನ ಕ್ರಿಕೆಟ್ ಕದನ ಎಂದರೆ ಅದೊಂದು ನಿಜವಾದ ಯುದ್ದದಂತೆ ಇರುತ್ತದೆ. ವಿಶ್ವಕಪ್ ನಲ್ಲಿ ಪಾಕ್ ವಿರುದ್ಧ ಭಾರತ ಎಂದುಗೂ ಸೋಲನ್ನು ಅನುಭವಿಸಿಲ್ಲ. ಏಕದಿನ ವಿಶ್ವಕಪ್‌ನಲ್ಲಿ ಏಳು ಹಾಗೂ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಐದು ಜಯ ಸೇರಿದಂತೆ ಒಟ್ಟು 12 ಬಾರಿ ಗೆಲುವು ದಾಖಲಿಸಿದೆ. ಆದರೆ, ಈ ಬಾರಿ ಹೀಗೆ ಆಗುವುದಿಲ್ಲ ಎಂದು ಪಾಕಿಸ್ತಾನ ತಂಡದ ನಾಯಕ ಬಾಬರ್ ಆಜಮ್ ಹೇಳಿದ್ದಾರೆ.

ಭಾರತ ವಿರುದ್ಧದ ಪಂದ್ಯಕ್ಕೆ ನಾವು ಉತ್ತಮವಾಗಿ ತಯಾರಿ ನಡೆಸಿದ್ದೇವೆ ಹಾಗೂ ಉತ್ತಮ ಕ್ರಿಕೆಟ್ ಆಡುತ್ತೇವೆಂಬ ಬಗ್ಗೆ ನಂಬಿಕೆ ಇದೆ. ದೊಡ್ಡ ಟೂರ್ನಿಗೆ ನೀವು ತೆರಳಿದಾಗ, ನಿಮ್ಮ ಮೇಲಿನ ನಂಬಿಕೆ ಹಾಗೂ ತಂಡದ ಆಟಗಾರರಲ್ಲಿನ ವಿಶ್ವಾಸ ಪ್ರಮುಖ ಸಂಗತಿಯಾಗಿರುತ್ತದೆ. ಹಿಂದೆ ನಡೆದಿರುವುದು ಯಾವುದು ಈಗ ಲೆಕ್ಕಕ್ಕೆ ಬರಲ್ಲ ಹಿಂದೆ ನಡೆದಿರುವದರ ಬಗ್ಗೆ ಯೋಚನೆ ಮಾಡುವುದನ್ನು ಬಿಟ್ಟು ಭವಿಷ್ಯದ ಬಗ್ಗೆ ಯೋಚಿಸುತ್ತಿದ್ದೇವೆ ಎಂದು ಬಾಬರ್ ತಿಳಿಸಿದ್ದಾರೆ.

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿಗೆ ಭಾರತ ಹಾಗೂ ಪಾಕಿಸ್ತಾನ ತಂಡಗಳನ್ನು ಕ್ರಮವಾಗಿ ವಿರಾಟ್ ಕೊಹ್ಲಿ ಹಾಗೂ ಬಾಬರ್ ಆಜಮ್ ಮುನ್ನಡೆಸುತ್ತಿದ್ದಾರೆ. ಹೀಗಾಗಿ ಈ ಪಂದ್ಯ ಒಂದು ಕೈ ಹೆಚ್ಚೇ ರೋಚಕತೆ ಸೃಷ್ಟಿಸಿದೆ. ಅಕ್ಟೋಬರ್ 24 ಭಾನುವಾರದಂದು ಈ ಪಂದ್ಯ ನಡೆಯಲಿದ್ದು, ದುಬೈ ಅಂತರರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂ ಈ ಹೈವೋಲ್ಟೆಜ್ ಮ್ಯಾಚ್ ಗೆ ಸಾಕ್ಷಿಯಾಗಲಿದೆ. ಭಾರತೀಯ ಕಾಲಮಾನದ ಪ್ರಕಾರ ಪಂದ್ಯ ಸಂಜೆ 7:30ಕ್ಕೆ ನಡೆಯಲಿದೆ.

- Advertisement -

Latest Posts

Don't Miss