Sunday, September 8, 2024

Latest Posts

ತಲೆತಲಾಂತರದಿಂದ ಮಠದ ಭಕ್ತರಾದ ನಾವು ಮುರುಘಾ ಶರಣರ ಜೊತೆ ಇರುತ್ತೇವೆ; ಶಾಸಕ ವಿರೇಂದ್ರ ಪಪ್ಪಿ

- Advertisement -

Davanagere News: ದಾವಣಗೆರೆ : ನಾವು ತಲೆತಲಾಂತರದಿಂದ ಮಠದ ಭಕ್ತರಾದ ಹಿನ್ನೆಲೆ ಇಂದು ಸ್ವಾಮೀಜಿ ಭೇಟಿಗೆ ಬಂದಿದ್ದೇವೆ ಎಂದು ಚಿತ್ರದುರ್ಗ ಶಾಸಕ ವಿರೇಂದ್ರ ಪಪ್ಪಿ ಹೇಳಿದರು.

ಇಂದು ದಾವಣಗೆರೆಯ ವಿರಕ್ತಮಠಕ್ಕೆ ಭೇಟಿ ನೀಡಿ ಮುರುಘಾ ಶರಣರ ಆರೋಗ್ಯ ವಿಚಾರಿಸಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಗಳ ಭೇಟಿ ಕೇವಲ ಔಪಚಾರಿಕವಾಗಿದೆ. ಸದ್ಯ ಸ್ವಾಮೀಜಿಗಳು ಯಾವುದೇ ವಿಚಾರ ಕುರಿತು ಹೆಚ್ಚು ಮಾತನಾಡದೇ ಮೌನಕ್ಕೆ ಶರಣಾಗಿದ್ದಾರೆ. ಅವರು ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿದ್ದಾರೆ. ಆರೋಗ್ಯದಲ್ಲಿ ಯಾವುದೇ ಏರು ಪೇರು ಆಗಿಲ್ಲ. ಅವರೇ ಬಂದು ಭಕ್ತರ ಆರೋಗ್ಯ ಮತ್ತು ಮಠದ ಸೇವೆ ಕುರಿತು ವಿಚಾರಣೆ ಮಾಡುತ್ತಿದ್ದಾರೆ ಎಂದರು.

ಕೇಸ್‌ ಕೋರ್ಟ್‌ನಲ್ಲಿ ಇರೋದು, ಕಾನೂನು ವಿಚಾರ ಸಂಬಂಧ ಭೇಟಿ ವೇಳೆ ಯಾವುದೇ ಚರ್ಚೆ ಮಾಡಿಲ್ಲ. ಭಕ್ತರಿಗೆಲ್ಲಾ ಪೀಠ ಉಳಿಸಿಕೊಳ್ಳುವ ಮಹತ್ತರ ಜವಾಬ್ದಾರಿ ಇದೆ. ಎಲ್ಲರೂ ಶ್ರೀಗಳ ಜೊತೆ ಇರುತ್ತೇವೆ ಎಂದರು.

ಮಠದ ವಸತಿ ನಿಲಯದ ವಿದ್ಯಾರ್ಥಿನಿಯರ ಮೇಲಿನ ಅತ್ಯಾಚಾರದ ಪೋಕ್ಸೋ ಪ್ರಕರಣ ದಲ್ಲಿ 14 ತಿಂಗಳಿಂದ ಜೈಲಿನಲ್ಲಿದ್ದ ಮುರುಘಾ ಸ್ವಾಮೀಜಿ ಬಿಡುಗಡೆಯಾಗಿದ್ದಾರೆ. ಬಿಡುಗಡೆ ಬಳಿಕ ಚಿತ್ರದುರ್ಗ ಮುರುಘಾ ಮಠಕ್ಕೆ ತೆರಳದೇ ದಾವಣಗೆರೆ ವಿರಕ್ತ ಮಠದಲ್ಲಿ ವಾಸ್ತವ್ಯ ಹೂಡಿರುವ ಶ್ರೀಗಳು. ಕಳೆದ ನಾಲ್ಕು ದಿನಗಳ ಹಿಂದೆ ಜಾಮೀನು ಮಂಜೂರು ಮಾಡಲಾಗಿತ್ತು. ಆದರೆ, ಇನ್ನೊಂದು ಅಟ್ರಾಸಿಟಿ ಪ್ರಕರಣದಲ್ಲಿ ಅವರಿಗೆ ಬಾಡಿ ವಾರೆಂಟ್‌ ನೀಡಲಾಗಿದೆ ಹೊರತು ಜೈಲು ಶಿಕ್ಷೆ ಆಗಿರಲಿಲ್ಲ. ಆದ್ದರಿಂದ, ಪೋಕ್ಸೋ ಪ್ರಕರಣದ ಕುರಿತ ಜಾಮೀನು ಸಿಕ್ಕಿದ ಆಧಾರದಲ್ಲಿ ಗುರುವಾರ ಅವರನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ.

ಯತ್ನಾಳ್ ವಿರುದ್ಧ ಒಳಸಂಚು ಮಾಡಿ ವಿಪಕ್ಷ ನಾಯಕ ಸ್ಥಾನ ತಪ್ಪಿಸಿದರು: ಜಯಮೃತ್ಯುಂಜಯ ಸ್ವಾಮೀಜಿ

ಆರ್.ಅಶೋಕ್ ನನ್ನ ಸ್ನೇಹಿತ, ಒಳ್ಳೆಯ ಕೆಲಸ ಮಾಡಲಿ : ಸಚಿವ ಚಲುವರಾಯಸ್ವಾಮಿ

ಹಾಸಿಗೆ ಹಿಡಿದ ಹಿರಿಯ ನಟಿ ಲೀಲಾವತಿ ಮನೆಗೆ ಭೇಟಿ ನೀಡಿದ ನಟ ಅರ್ಜುನ್ ಸರ್ಜಾ

- Advertisement -

Latest Posts

Don't Miss