Thursday, November 21, 2024

Latest Posts

ಶಿವಮೊಗ್ಗದಿಂದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇವೆ: ಕೆ.ಎಸ್.ಈಶ್ವರಪ್ಪ ಘೋಷಣೆ

- Advertisement -

Political News: ಮಾಜಿ ಸಿಎಂ ಬಸವರಾಜ ಬೊಮ್ಮಾಯಿ, ಸಂಸದೆ ಶೋಭಾ ಕರಂದ್ಲಾಜೆಗೆ ಟಿಕೇಟ್ ಕೊಡಿಸಿರುವ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನನ್ನ ಮಗನಿಗೇಕೆ ಟೀಕೇಟ್ ಕೊಡಿಸಲಾಗಲಿಲ್ಲವೆಂದು, ಮಾಜಿ ಸಿಎಂ ಈಶ್ವರಪ್ಪ ಆಕ್ರೋಶ ಹೊರಹಾಕಿದ್ದರು.

ಬಿಜೆಪಿ ಎರಡನೇ ಲೀಸ್ಟ್‌ನಲ್ಲಿ ಹಾವೇರಿ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಗೆ ತಮ್ಮ ಮಗನಿಗೆ ಟಿಕೇಟ್ ಸಿಗಬಹುದು ಎಂದು ಕಾತುರರಾಗಿದ್ದ ಈಶ್ವರಪ್ಪ ಕುತೂಹಲಕ್ಕೆ ತಣ್ಣೀರು ಎರೆಚಿದಂತಾಗಿತ್ತು. ಹಾಗಾಗಿ ಈಶ್ವರಪ್ಪ ಕಳೆದ ಎರಡು ದಿನಗಳಿಂದ ಬಿಎಸ್‌ವೈ ವಿರುದ್ಧ ಹರಿಹಾಯ್ದಿದ್ದಾರೆ. ಅಲ್ಲದೇ, ಪದೇ ಪದೇ ಈ ಬಗ್ಗೆ ಹಲವರೊಂದಿಗೆ ಸಭೆ ನಡೆಸಿ, ಕೊನೆಗೂ ಒಂದು ನಿರ್ಧಾರಕ್ಕೆ ಬಂದಿದ್ದಾರೆ.

ಈ ಬಾರಿ ಲೋಕಸಭೆ ಚುನಾವಣೆಗೆ ಶಿವಮೊಗ್ಗದಿಂದ ಪಕ್ಷೇತರರಾಗಿ ಚುನಾವಣೆಗೆ ನಿಲ್ಲಲಿದ್ದೇವೆ ಎಂದು ಈಶ್ವರಪ್ಪ ಘೋಷಿಸಿದ್ದಾರೆ. ಆದರೆ ಭಾಷಣದ ವೇಳೆ, ತಾವು ಪಕ್ಷೇತರರಾಗಿ ನಿಲ್ಲುತ್ತೇವೆ ಎಂದಿರುವ ಈಶ್ವರಪ್ಪ, ಇದು ಮೋದಿ ಅಥವಾ ಬಿಜೆಪಿ ವಿರುದ್ಧದ ಸ್ಪರ್ಧೆಯಲ್ಲ ಅಂತಲೂ ಹೇಳಿದ್ದಾರೆ. ಜೊತೆಗೆ ಒಂದು ಕುಟುಂಬದಲ್ಲಿ ಸಿಲುಕಿರುವ ಪಕ್ಷವನ್ನು ಬಿಡಿಸಲು ಸ್ಪರ್ಧಿಸುತ್ತಿದ್ದೇವೆ ಎಂದಿದ್ದಾರೆ. ಹಾಗಾಗಿ ಇದು ಬಿಎಸ್‌ವೈ ವಿರುದ್ಧದ ಸ್ಪರ್ಧೆ ಎಂಬುದು ಎಲ್ಲರೂ ಅಂದಾಜಿಸಿದ್ದಾರೆ.

ನಮ್ಮ ಪಕ್ಷ ಸರಿ ಇಲ್ಲ ಎನ್ನುವುದಾದರೆ ನಮ್ಮ ಪಕ್ಷದ ಬಳಿ ಏಕೆ ಬಂದಿದ್ದರು..?: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ

ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಹಣೆಗೆ ಗಾಯ: ದಯವಿಟ್ಟು ಅವರಿಗಾಗಿ ಪ್ರಾರ್ಥಿಸಿ ಎಂದ ಟಿಎಂಸಿ

ವಾಹನ ಸವಾರರಿಗೆ ಗುಡ್‌ನ್ಯೂಸ್: ಪೆಟ್ರೋಲ್, ಡಿಸೇಲ್ ದರದಲ್ಲಿ ಇಳಿಕೆ

- Advertisement -

Latest Posts

Don't Miss