- Advertisement -
Dharwad News: ಧಾರವಾಡ: ಮುಡಾ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎಂಬ ಅರ್ಜಿಯನ್ನು ಧಾರವಾಡ ಹೈಕೋರ್ಟ್ ತಿರಸ್ಕರಿಸಿದ್ದರ ಬಗ್ಗೆ ಸ್ನೇಹಮಯಿ ಕೃಷ್ಣ ಪರ ವಕೀಲರಾದ ಲಕ್ಷ್ಮಣ್ ಕುಲಕರ್ಣಿ ಮಾಧ್ಯಮದೊಂದಿಗೆ ಮಾತನಾಡಿದ್ದಾರೆ.
ಸುಪ್ರೀಂ ಕೋರ್ಟ್ ಗೆ ಮೇಲ್ಮನವಿ ಸಲ್ಲಿಸುತ್ತೇವೆ. ನಮ್ಮ ಪರ ತೀರ್ಪು ಬರುತ್ತೆ ಅಂತ ನಿರೀಕ್ಷೆ ಇಟ್ಟುಕೊಂಡಿದ್ದೆವು. ಆದ್ರೆ ಘನ ನ್ಯಾಯಾಲಯ ನಮ್ಮ ಅರ್ಜಿಯನ್ನ ತಿರಸ್ಕರಿಸಿದೆ. ಇಂದೇ ನಾವು ಕೋರ್ಟ್ ಆದೇಶದ ಪ್ರತಿ ಪಡೆಯುತ್ತೇವೆ. ಅದನ್ನ ಸ್ಟಡಿ ಮಾಡಿ ನಂತರ ಮೇಲ್ಮನವಿ ಸಲ್ಲಿಸುತ್ತೇವೆ. ಯಾವ ತಳಹದಿ ಮೇಲೆ ತೀರ್ಪು ಕೊಟ್ಟಿದ್ದಾರಂತ ಪರಿಶೀಲನೆ ಮಾಡ್ತೇವೆ. ಸುಪ್ರೀಂ ಕೋರ್ಟ್ ಗೆ ಹೋಗೋದು ಖಚಿತ ಎಂದು ವಕೀಲ ಲಕ್ಷ್ಮಣ್ ಕುಲಕರ್ಣಿ ಹೇಳಿದ್ದಾರೆ.
- Advertisement -