Bihar Political news: ಬಿಹಾರದಲ್ಲಿ ನಾವು ಅಧಿಕಾರಕ್ಕೆ ಬಂದ್ರೆ, ಮದ್ಯ ನಿಷೇಧವನ್ನು ಅಂತ್ಯಗೊಳಿಸುತ್ತೇವೆ ಎಂದು ಹೇಳುವ ಮೂಲಕ, ಪ್ರಶಾಂತ್ ಕಿಶೋರ್ ಕುಡುಕರಿಗೆ ಬಿಗ್ ಆಫರ್ ನೀಡಿದ್ದಾರೆ.
ಬಿಹಾರದಲ್ಲಿ 2025ರಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಜನ್ ಸೂರಜ್ ಎಂಬ ನಮ್ಮ ಪಕ್ಷವನ್ನು ಗೆಲ್ಲಿಸಿದರೆ, ನಾವು ಅಧಿಕಾರಕ್ಕೆ ಬಂದ ಬಳಿಕ, ಈಗಾಗಲೇ ಇರುವ ಮದ್ಯ ನಿಷೇಧ ಆದೇಶವನ್ನು ಅಂತ್ಯಗೊಳಿಸಿ, ಮದ್ಯ ಮಾರಾಟಕ್ಕೆ ಅವಕಾಶ ಕೊಡುತ್ತೇವೆ ಎಂದು ಪ್ರಶಾಂತ್ ಕಿಶೋರ್ ಹೇಳಿಕೆ ಕೊಟ್ಟಿದ್ದಾರೆ.
ಗೆದ್ದು ಬಂದ ಒಂದು ಗಂಟೆಯೊಳಗೆ ಮದ್ಯ ನಿಷೇಧ ಅಂತ್ಯಗೊಳಿಸುತ್ತೇವೆ. ನಿತೀಶ್ ಕುಮಾರ್ ಮತ್ತು ತೇಜಸ್ವಿ ಯಾದವ್ ಇಬ್ಬರೂ ಆಡಳಿತ ನಡೆಸುವಾಗ, ರಾಜ್ಯಕ್ಕೆ ಹೆಚ್ಚು ನಷ್ಟವಾಗಿದೆ. ಇಷ್ಟು ವರ್ಷಗಳಿಂದ ನೀವು ಇವರಿಬ್ಬರ ಆಡಳಿತವನ್ನು ನೋಡಿದ್ದೀರಿ. ನಾವಂತೂ ಇವರಿಬ್ಬರನ್ನೂ ರಾಜ್ಯ ಬಿಟ್ಟು ಹೋಗುವಂತೆ ಹೇಳಿದ್ದೇವೆ ಎಂದು ವಿಪಕ್ಷಗಳ ವಿರುದ್ಧ ಪ್ರಶಾಂತ್ ಕಿಶೋರ್ ವಾಗ್ದಾಳಿ ನಡೆಸಿದ್ದಾರೆ.