Hubli Political News: ಒಂದು ಮನೆಯಿಂದ ಒಂದು ಮನೆಗೆ ಮದುವೆ ಸಂಬಂಧ ಆದ ಕೂಡಲೇ ಎಲ್ಲಾ ಹೊಂದಾಣಿಕೆ ಆಗುವುದಿಲ್ಲ. ಹಾಗೇ ಮಂಡ್ಯ ವಿಚಾರದಲ್ಲಿ ಎಲ್ಲರಿಗೂ ಸಮಾಧಾನವಾಗುವ ಪರಿಹಾರ ಕಂಡುಹಿಡಿಯುವತ್ತೇವೆ ಅಂತ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಈ ಬಗ್ಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಅಧಿವೇಶನದಲ್ಲಿ ಸುಮಲತಾ ಜೊತೆಗೆ ಮಾತನಾಡಿರುವೆ. ದೊಡ್ಡ ಪಾರ್ಟಿಗಳು, ದೊಡ್ಡ ವ್ಯವಸ್ಥೆ ಕೋಟ್ಯಾಂತರ ಜನ, ಲಕ್ಷಾಂತರ ಜನ ಹೊಂದಾಣಿಕೆಗೆ ಸಮಯಬೇಕು. ಕುಮಾರಸ್ವಾಮಿ ಅವರ ಮೇಲೆ ನನಗೆ ಸಂಪೂರ್ಣ ನಂಬಿಕೆಯಿದೆಂದರು.
ಇನ್ನೂ ಅನಂತ್ ಕುಮಾರ್ ಮೇಲೆ ಕೇಸ್ ದಾಖಲು ವಿಚಾರವಾಗಿ ಮಾತನಾಡಿದ ಅವರು, ಹಲವು ಸಂಗತಿಗಳನ್ನು ಸಿದ್ದರಾಮಯ್ಯ ಏಕವಚನದಲ್ಲಿ ಬಾಯಿಗೆ ಬಂದಹಾಗೇ ಬೈತಾರೆ. ಅವರ ಬಗ್ಗೆ ಏನು ಆಗಲ್ಲ. ಆದರೆ ಅನಂತ್ ಕುಮಾರ್ ಬಗ್ಗೆ ಆಗುತ್ತೆ. ಯಾವ ರೀತಿ ಅಧಿಕಾರ ದುರುಪಯೋಗ ಆಗುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದರು..
ಜೈ ಶಂಕರ್ ಮತ್ತು ನಿರ್ಮಲ ಸೀತಾರಾಮ್ ಲೋಕಸಭೆಗೆ ಸ್ಪರ್ಧೆ ಮಾಡೋದು ನಿಶ್ಚಿತ, ಆದ್ರೆ ಯಾವ ರಾಜ್ಯದಿಂದ ಮಾಡತ್ತಾರೆ ಅನ್ನೊದು ಇನ್ನೂ ತೀರ್ಮಾನ ಆಗಿಲ್ಲ. ರೇ ಪ್ರಶ್ನೆಗಳಿಗೆ ಉತ್ತರ ನೀಡಿಲ್ಲ ಎಂದಿದ್ದಾರೆ..
ಇದೇ ವೇಳೆ ಅಕಾಲಿಕ ಮರಣ ಹೊಂದಿರುವ ರಾಜಾ ವೆಂಕಟಪ್ಪ ನಾಯಕರಿಗೆ ಶ್ರದ್ಧಾಂಜಲಿ ಸಲ್ಲಿಸಿದ ಜೋಶಿ 67 ವರ್ಷದಲ್ಲಿ ಮೊನ್ನೆ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದರು.. ರಾಜಾ ವೆಂಕಟಪ್ಪ ನಾಯಕ ಅವರ ಸಾವು ಸಮಾಜಕ್ಕೆ ಮತ್ತು ರಾಜಕೀಯ ವಲಯಕ್ಕೆ ಸಾಕಷ್ಟು ನೋವು ತಂದಿದೆ..ದುಃಖ ಭರಿಸುವ ಶಕ್ತಿ ಅವರ ಕುಟುಂಬಕ್ಕೆ ದೇವರು ನೀಡಲಿ..ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.
ಕಾಂಗ್ರೆಸ್ ಅವನತಿಗೆ ಕಾರಣವೇನು..? ಈ ಬಗ್ಗೆ ಸಿ.ಟಿ.ರವಿ ಹೇಳಿದ್ದೇನು..?
ಸಂವಿಧಾನ ಬದಲಾಯಿಸಲು ಬಂದವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು: ಸಿಎಂ ಸಿದ್ದರಾಮಯ್ಯ




