Friday, December 27, 2024

Latest Posts

28 ಸ್ಥಾನವನ್ನು ಗೆದ್ದು ಕರ್ನಾಟಕದಿಂದ ಉಡುಗೊರೆ ಕೊಡುತ್ತೇವೆ : ಯಡಿಯೂರಪ್ಪ ಶಪಥ

- Advertisement -

Political News:ಬೆಂಗಳೂರು : ಮುಂಬರುವ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನು ಗೆದ್ದು ಪ್ರಧಾನಿ ಮೋದಿಯವರಿಗೆ ಕರ್ನಾಟಕದಿಂದ ಉಡುಗೊರೆ ಕೊಡುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಶಪಥ ಮಾಡಿದರು.

ನಾಲ್ಕು ರಾಜ್ಯಗಳ ಚುನಾವಣೆ ಫಲಿತಾಂಶ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾಲ್ಕು ರಾಜ್ಯಗಳ ಪೈಕಿ ಮೂರು ರಾಜ್ಯದಲ್ಲಿ ಜಯಭೇರಿ ಭಾರಿಸಿದೆ. ರಾಜಸ್ಥಾನದಲ್ಲಿ ಕಾಂಗ್ರೆಸ್ ಅಧಿಕಾರ ಇತ್ತು, ಇದೀಗ ಬಿಜೆಪಿ ಅಧಿಕಾರಕ್ಕೆ ಬರಲಿದೆ‌ ಎಂದರು.

ಛತ್ತಿಸ್ಗಡದಲ್ಲಿಯೂ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಮಧ್ಯಪ್ರದೇಶದಲ್ಲಿ ಮತ್ತೆ ನಾವು (ಬಿಜೆಪಿ) ಅಧಿಕಾರಕ್ಕೆ ಬರಲಿದೆ. ಪ್ರಧಾನಿ ನರೇಂದ್ರ ಮೋದಿ, ಅಮಿತ್ ಶಾ, ಜೆ.ಪಿ. ನಡ್ಡಾ ಇದಕ್ಕೆ ಕಾರಣ. ಇದರ ಪರಿಣಾಮ ಲೋಕಸಭೆಯಲ್ಲಿ 28 ಸ್ಥಾನವನ್ನು ಗೆದ್ದು ಕರ್ನಾಟಕದಿಂದ ಉಡುಗೊರೆ ಕೊಡಲಿದೆ ಎಂದು ವಿಶ್ವಾಸ ವ್ಯಕದತಪಡಿಸಿದರು.

ಕಾಂಗ್ರೆಸ್ ಬೂಟಾಟಿಕೆ ಕೆಲಸ ಮಾಡಲ್ಲ

ಬಿ.ವೈ. ವಿಜಯೇಂದ್ರ ಬಂದ ಬಳಿಕ ಕರ್ನಾಟಕದಲ್ಲಿ ಹೊಸ ಉತ್ಸಾಹ ಮೂಡಿದೆ. ಕಾಂಗ್ರೆಸ್ ಉತ್ಸಾಹ ಧೂಳಿಪಟವಾಗಿದೆ. ಉಚಿತ ಘೋಷಣೆಗಳಿಗಿಂತ (ಗ್ಯಾರಂಟಿ) ಹೆಚ್ಚಾಗಿ ನಾಯಕತ್ವ ಪರಿಣಾಮ ಬೀರಿದೆ. ಇದು ಲೋಕಸಭಾ ಚುನಾವಣೆಗೂ ಪರಿಣಾಮ ಬೀರಲಿದೆ. ಈ ಫಲಿತಾಂಶದಿಂದ ಕಾಂಗ್ರೆಸ್ ಪಕ್ಷದ ಬೂಟಾಟಿಕೆ ಕೆಲಸ ಮಾಡಲ್ಲ ಅನ್ನೋದು ಗೊತ್ತಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಯಡಿಯೂರಪ್ಪ ಗುಡುಗಿದರು.

ರಾಜಸ್ಥಾನದ ಮುಂದಿನ ಸಿಎಂ ಬಾಬಾ ಮಹಂತ್ ಬಾಲಕ್‌ನಾಥ್..?

‘ಕಾಂಗ್ರೆಸ್ ಬಿಟ್ಟಿ ಭಾಗ್ಯಗಳ ಆಸೆಯನ್ನು ಮೀರಿ ಜನ ಬಿಜೆಪಿ ಕೈ ಹಿಡಿದಿದ್ದಾರೆ’

ಮಧ್ಯಪ್ರದೇಶದಲ್ಲಿ ಬಿಜೆಪಿ ಗೆಲುವಿನ ಜಯಭೇರಿ: ಶಿವರಾಜ್ ಸಿಂಗ್ ಚೌಹಾಣ್‌ರನ್ನು ಭೇಟಿಯಾದ ಸಿಂಧ್ಯಾ..

- Advertisement -

Latest Posts

Don't Miss