Sunday, April 13, 2025

Latest Posts

ನಮ್ಮವರ ಸಂಖ್ಯೆ ಕಮ್ಮಿ ಮಾಡಿದಾರೆ ನಾವು ಇದನ್ನು ಒಪ್ಪಲ್ಲ : ಜಾತಿ ಗಣತಿ ವಿರುದ್ಧ ಸಿಡಿದ ಒಕ್ಕಲಿಗರು

- Advertisement -

Political News: ರಾಜ್ಯದಲ್ಲಿ ನಡೆದಿರುವ ಜಾತಿ ಗಣತಿಯು ಅವೈಜ್ಞಾನಿಕವಾಗಿದೆ. ಹತ್ತು ವರ್ಷಗಳ ಬಳಿಕ ಈಗ ಇದನ್ನು ಜಾರಿ ಮಾಡಲು ಮುಂದಾಗಿರುವ ಸರ್ಕಾರದ ನಡೆಗೆ ನಮ್ಮ ತೀವ್ರ ವಿರೋಧವಿದೆ ಎಂದು ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಬಿ.ಕೆಂಚಪ್ಪಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇನ್ನೂ ಸಚಿವ ಸಂಪುಟದಲ್ಲಿ ಜಾತಿ ಗಣತಿ ಮಂಡನೆ ಬಳಿಕ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಮಾತನಾಡಿರುವ ಅವರು, ಸಾಮಾಜಿಕ ಹಾಗೂ ಶೈಕ್ಷಣಿಕ ವರದಿಗೆ ಈಗಾಗಲೇ ಹಳೆಯದಾಗಿದೆ. ಇದರ ಬಗ್ಗೆ ರಾಜ್ಯ ಹಿಂದುಳಿದ ವರ್ಗ ಮಾಡಿರುವ ಸಮೀಕ್ಷೆಯು ವೈಜ್ಞಾನಿಕವಾಗಿಲ್ಲ. ಇದಕ್ಕೆ ನಮ್ಮ ಸಮಾಜದ ಗಣ್ಯರು ಹಾಗೂ ಜನಪ್ರತಿನಿಧಿಗಳೂ ಸಹ ವಿರೋಧಿಸಿಸುತ್ತಿದ್ದಾರೆ. ಹೀಗಾಗಿ ಈ ವರದಿಯ ಬಗ್ಗೆ ಅನುಮಾನಗಳಿವೆ, ಅಲ್ಲದೆ ಇಷ್ಟು ವರ್ಷಗಳ ಕಾಲ ಇದರ ಬಗ್ಗೆ ಯೋಚಿಸದ ಸರ್ಕಾರ ಈಗ ಜಾರಿಗೆ ಮುಂದಾಗಿರುವುದು ರಾಜಕೀಯದ ಉದ್ದೇಶವನ್ನು ಹೊಂದಿದೆ ಎಂದು ಅವರು ಆರೋಪಿಸಿದ್ದಾರೆ.

ಲಿಂಗಾಯತರು, ಒಕ್ಕಲಿಗರ ತೀವ್ರ ವಿರೋಧ..

ಇನ್ನೂ 10 ವರ್ಷಗಳ ಹಿಂದೆ ಮಾಡಿರುವ ಸಮೀಕ್ಷೆಗೆ ಈಗಾಗಲೇ ರಾಜ್ಯದ ಲಿಂಗಾಯತರು ಹಾಗೂ ಒಕ್ಕಲಿಗರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಈ ವರದಿಯು ಅಪ್ರಸ್ತುತವಾಗಿದೆ, ಇದನ್ನು ಪ್ಯಾಕೇಜ್‌ ರೂಪದಲ್ಲಿ ಸಮೀಕ್ಷೆ ಮಾಡಿಸಿದ್ದಾರೆ. 2011ರಲ್ಲಿ ಆಗಿರುವ ವರದಿಯು ನಮಗೆ ಮಾನ್ಯತೆ ಇಲ್ಲ. ಹೀಗಾಗಿ ಮತ್ತೊಮ್ಮೆ ನೂತನ ಸಮೀಕ್ಷೆ ಮಾಡಲಿ, ಅದಕ್ಕೆ ನಮ್ಮ ಯಾವುದೇ ತಕರಾರಿಲ್ಲ ಎನ್ನುವ ಮೂಲಕ ಕೆಂಚಪ್ಪಗೌಡ ನೂತನ ಸರ್ವೇಗೆ ಬೇಡಿಕೆ ಇಟ್ಟಿದ್ದಾರೆ.

ಜಾತಿ ಗಣತಿ ವಿಚಾರದಲ್ಲಿ ರಾಜಕೀಯ ಬೇಡ..!

ಅಲ್ಲದೆ ಈ ವರದಿಯನ್ನು ಸರ್ಕಾರ ಒಪ್ಪಬಾರದು. ಒಂದು ವೇಳೆ ಅನುಷ್ಠಾನಕ್ಕೆ ತರಲು ಮುಂದಾದರೆ, ನಾವು ಮಾತ್ರ ಸುಮ್ಮನೆ ಕುಳಿತುಕೊಳ್ಳಲ್ಲ. ಕಾನೂನಾತ್ಮಕವಾಗಿ, ಸಾಮಾಜಿಕವಾಗಿ ಹೋರಾಟ ಮಾಡುತ್ತೇವೆ. ರಾಜ್ಯದಾದ್ಯಂತ ಲಿಂಗಾಯತರನ್ನು ನಮ್ಮ ಜೊತೆ ಸೇರಿಸಿಕೊಂಡು ಹೋರಾಟ ಮಾಡುತ್ತೇವೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ. ಇನ್ನೂ ಎಲ್ಲ ಜಾತಿ ಸಮುದಾಯದವರು ಪರಸ್ಪರ ಸಹೋದರರಂತೆ ಇರಬೇಕು. ಜಾತಿ ಗಣತಿ ವಿಚಾರದಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಮಾಡಬಾರದು. ಆದರೆ ಮುಖ್ಯಮಂತ್ರಿಗಳು ಇದೇ ವರದಿಯನ್ನು ಮುಂದಿಟ್ಟುಕೊಂಡು ಪದೇ ಪದೇ ಮಾತನಾಡುತ್ತಿದ್ದಾರೆ. ಇದನ್ನು ನಾವು ಯಾವುದೇ ಪರಿಸ್ಥಿತಿಯಲ್ಲಿ ಜಾರಿಗೆ ಬಿಡುವುದಿಲ್ಲ. ಮಾಡುವುದಾದರೆ ವೈಜ್ಞಾನಿಕವಾಗಿ ಸಮೀಕ್ಷೆ ಮಾಡಲಿ ಎಂದು ತಿಳಿಸಿದ್ದಾರೆ.

ಅಲ್ಲಿಂದ ಇಲ್ಲಿಯವರೆಗೆ ಜನ ಹುಟ್ಟಿಲ್ಲವೆ..?

ಹತ್ತು ವರ್ಷಗಳ ನಂತರ ವರದಿಯನ್ನು ಸ್ವೀಕರಿಸುವುದು ಎಷ್ಟರಮಟ್ಟಿಗೆ ಸರಿ ಇದೆ? ಅನಂತರ ಬದಲಾವಣೆಯಾಗಿಲ್ಲವೆ? ಅಲ್ಲಿಂದ ಇಲ್ಲಿಯವರೆಗೆ ಯಾವುದೇ ಜಾತಿಯಲ್ಲಿ ಜನ ಹುಟ್ಟಿಲ್ಲವೇ? ಜನಸಂಖ್ಯೆ ಜಾಸ್ತಿಯಾಗಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಜಾತಿ ಜನಗಣತಿ ಮಾಡಿದಾಗ ಒಕ್ಕಲಿಗರಲ್ಲಿ ಸಾಕಷ್ಟು ಉಪಜಾತಿಗಳಿವೆ. ಅವರು ಈ ಜಾತಿ ಅಲ್ಲ , ಬೇರೆ ಜಾತಿ ಅಂತ ಮಾಡಿದ್ದಾರೆ. ಒಕ್ಕಲಿಗರಲ್ಲಿ 115 ಪಂಗಡಗಳಿವೆ, ಅವರೆಲ್ಲರೂ ಒಕ್ಕಲಿಗರೇ. ಅವುಗಳಲ್ಲಿ ಮತ್ತೆ ಉಪಪಂಗಡಗಳಿವೆ. ಅವರನ್ನು ಬೇರೆ ಮಾಡಿ ಒಕ್ಕಲಿಗರು ಕಡಿಮೆ ಇದ್ದಾರೆ ಅಂತ ತೋರಿಸಿದ್ದಾರೆ. ಕಂಪ್ಯೂಟರ್ ಮತ್ತು ಡಿಜಿಟಲ್ ಯುಗದಲ್ಲಿ ಬೇಗ ವರದಿ ಪಡೆಯುವ ಅವಕಾಶವಿದೆ ಎಂದಿದ್ದಾರೆ.

ಸಮೀಕ್ಷೆ ಮಾಡುವಾಗ ನಮ್ಮ ಮನೆಗೆ ಯಾರೂ ವರದಿ ಮಾಡಲು ಬಂದಿಲ್ಲ. ಮನೆಗೆ ಬಂದು ನಿಮ್ಮ ಮನೆಯಲ್ಲಿ ಎಷ್ಟು ಜನ ಇದೀರಾ? ಯಾವ ಜಾತಿಗೆ ಸೇರಿದವರು ಅಂತ ಯಾರೂ ನಮ್ಮನ್ನು ಪ್ರಶ್ನೆ ಮಾಡಿಲ್ಲ. ಬಹುತೇಕರು ಇದೇ ಮಾತನ್ನು ಹೇಳುತ್ತಿದ್ದಾರೆ. ಪ್ರತಿ ಗ್ರಾಮದ ಮನೆ ಮನೆಗೆ ಹೋಗಿ ವರದಿ ತಯಾರಿಸಬೇಕು. ಆ ರೀತಿ ಆಗಿಲ್ಲ ಎಂಬ ಆರೋಪಗಳಿವೆ ಎಂದು ಅವರು ಹೇಳಿದ್ದಾರೆ.

ಅತುರದ ನಿರ್ಧಾರವಿಲ್ಲ..!

ಇನ್ನೂ ಜಾತಿ ಗಣತಿಗೆ ವಿಪಕ್ಷ ಬಿಜೆಪಿಯು ವಿರೋಧಿಸಿಲ್ಲದೆ. ಇದನ್ನು ಕಟುವಾಗಿ ಟೀಕಿಸಿದೆ, ಸಿದ್ದರಾಮಯ್ಯ ತಮ್ಮ ಕುರ್ಚಿ ಉಳಿಸಿಕೊಳ್ಳಲು ಈ ವರದಿ ಮಂಡನೆ ಮಾಡಲು ಮುಂದಾಗಿದ್ದಾರೆ ಎಂದು ಬಿಜೆಪಿ ನಾಯಕರು ಕಿಡಿ ಕಾರಿದ್ದಾರೆ. ಇನ್ನೂ ಈ ವಿಚಾರದಲ್ಲಿ ಕಾಂಗ್ರೆಸ್‌ ಸರ್ಕಾರದ ಶಾಸಕರು ಹಾಗೂ ಸಚಿವರ ನಡುವೆಯೇ ಭಿನ್ನರಾಗ ಕೇಳಿ ಬರುತ್ತಿದ್ದು, ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಕಾದು ನೋಡುವ ತಂತ್ರ ಅನುಸರಿಸುವ ಮೂಲಕ ಅಸಮಾಧಾನಿತರ ಮನವೊಲಿಸುವ ಪ್ರಯತ್ನಕ್ಕೆ ಮುಂದಾಗಿದ್ದಾರೆ. ಅಲ್ಲದೆ ಈಗಾಗಲೇ ಕಾನೂನು ಸಚಿವರು ತಮ್ಮ ವರದಿಯನ್ನು ಮಂಡಿಸಿದ್ದಾರೆ. ಅ ವರದಿಯಲ್ಲಿ ಏನೆಲ್ಲ ಅಂಶಗಳಿವೆ ಎನ್ನುವುದು ಯಾರಿಗೂ ಗೊತ್ತಿಲ್ಲ. ಹೀಗಾಗಿ ಈ ಬಗ್ಗೆ ಅತುರದ ನಿರ್ಧಾರ ಮಾಡುವುದಿಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದ್ದಾರೆ.

- Advertisement -

Latest Posts

Don't Miss