ಏನೇ ಅಡೆತಡೆ ಆದರೂ ನಾವು ಜನರ ಧ್ವನಿಯಾಗಿ ಕೆಲಸ ಮಾಡುತ್ತೇವೆ. ಯಾವುದೇ ಕಾರಣಕ್ಕೂ ಮೇಕೆದಾಟು ಯೋಜನೆಯ ಪಾದಯಾತ್ರೆ ಕೈ ಬಿಡುವುದಿಲ್ಲ ಎಂದು ಡಿ ಕೆ. ಶಿವಕುಮಾರ್ ಹೇಳಿಕೆ ನೀಡಿದ್ದಾರೆ.
Kpcc ಕಚೇರಿಯಲ್ಲಿ ನಡೆದ ಸಭೆಯ ಬಳಿಕ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿ ರಾಜ್ಯದಲ್ಲಿ ಅಲ್ಲ ದೇಶದಲ್ಲಿ ಹೋರಾಟ ಮಾಡಲಿ, ಮಂತ್ರಿ ನುಡಿಮುತ್ತುಗಳನ್ನು ಆಡಿದ್ದಾರೆ. ಸಿ ಎಂ ಬಿಜೆಪಿ ಅಧ್ಯಕ್ಷ ಅಶೋಕ್ ಕುಮಾರ್ ಅವರ ಎಲ್ಲ ಮಾತುಗಳನ್ನು ಒಪ್ಪಿಕೊಂಡಿದ್ದಾರೆ. ನಾವು ಅವರ ಯಾವುದೇ ಬೆದರಿಕೆಗೂ ಬಗ್ಗುವುದಿಲ್ಲ, ಅವರು ನಮ್ಮ ಮೇಲೆ ನೂರು ಕೇಸ್ ಹಾಕಿದರೂ ನಾವು ಪಾದಯಾತ್ರೆ ಮಾಡೇ ಮಾಡ್ತೇವೆ.
ಬಿಜೆಪಿ ಅವರ ಎಲ್ಲ ಮುಖವಾಡಗಳು ಬಯಲಾಗಿದೆ. ಸುಧಾಕರ್ ಪಾದಯಾತ್ರೆಯನ್ನು ವಾಪಸ್ ಪಡೆಯುವಂತೆ ಮನವಿ ಮಾಡಿದ್ದಾರೆ. ಆದರೆ ನಾವು ಎಷ್ಟೇ ಬಿಗಿ ಭದ್ರತೆಯನ್ನು ಮಾಡಿದರು ನಾವು ಪಾದಯಾತ್ರೆಯನ್ನು ಮಾತ್ರ ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲಇಂದು ಡಿಕೆ ಶಿವಕುಮಾರ್ ಅವರು ಹೇಳಿದ್ದಾರೆ.
ನಾವು ಪಾದಯಾತ್ರೆಯನ್ನು ಮಾಡಿದರೆ ಮಾತ್ರ ಕೊರೋನ ಹರಡುತ್ತದೆ. ಬಿಜೆಪಿಯವರು ಮೆರವಣಿಗೆ ಮಾಡಿದರೆ, ಕೊರೋಣ ಹರಡುವುದಿಲ್ಲ, ಮೊದಲು ಅವರ ಮೇಲೆ ಕೇಸ್ ಹಾಕಲಿ, ಸಿಎಂ ಮೇಲೆ ಕೇಸ್ ಹಾಕಲಿ ಎಂದು ವಾಗ್ದಾಳಿ ನಡೆಸಿದ್ದಾರೆ.
ನಾವು ಜನರ ಧ್ವನಿಯಾಗಿ ಕೆಲಸ ಮಾಡ್ತಿವಿ: dk shivakumar
- Advertisement -
- Advertisement -