Political News: ಧಾರವಾಡ: ಬೆಂಗಳೂರಿನಲ್ಲಿ ಹಲವು ಶಾಲೆಗಳಿಗೆ ಒಟ್ಟಿಗೆ ಬಾಂಬ್ ಬೆದರಿಕೆ ಹಾಕಿದ್ದಕ್ಕೆ ಸಶಕ್ತ ನಾಯಕತ್ವದ ಕೊರತೆ ಕಾರಣವೆಂದು ಮಾಜಿ ಡಿಸಿಎಂ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು ಏಕಕಾಲಕ್ಕೆ ಇಷ್ಟೊಂದು ಶಾಲೆಗಳಿಗೆ ಬೆದರಿಕೆ ಬರುತ್ತದೆ ಎಂದರೆ ಏನು? ಜನರನ್ನು ಭಯದ ವಾತಾವರಣದಲ್ಲಿಟ್ಟು ಆಡಳಿತ ಮಾಡುವ ಹುನ್ನಾರ ಇದು. ಯಾವ ಕಾರಣಕ್ಕೂ ಅಂತಹ ದೇಶದ್ರೋಹಿಗಳ ಬಿಡಬಾರದು. ಆಡಳಿತ ಪಕ್ಷದಲ್ಲಿನ ಸಶಕ್ತ ನಾಯಕತ್ವದ ಕೊರತೆಯಿಂದ ಅಂಥವರನ್ನು ಇನ್ನೂ ಮಟ್ಟಹಾಕಲು ಆಗಿಲ್ಲ ಎಂದಿದ್ದಾರೆ.
ಪಂಚರಾಜ್ಯ ಚುನಾವಣೆ ಕುರಿತು ಮಾತನಾಡಿ, ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವಷ್ಟು ಬೆಳೆದಿಲ್ಲ. ಕಳೆದ ಬಾರಿಗಿಂತ ಈ ಸಲ ಬಿಜೆಪಿ ಮತಬ್ಯಾಂಕ್ ಹೆಚ್ಚಳವಾಗಿದೆ. ಛತ್ತೀಸಗಢದಲ್ಲಿ ಪ್ರಬಲ ಪೈಪೋಟಿ ಒಡ್ಡಿದ್ದೇವೆ. ಉಳಿದ ಕಡೆಗಳಲ್ಲಿ ನಾವು ಅಧಿಕಾರಕ್ಕೆ ಬರುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ ಎಂದು ತಿಳಿಸಿದರು.
‘ಡಯಾಲಿಸಿಸ್ ಸಮಸ್ಯೆಗೆ ಹಿಂದಿನ ಸರ್ಕಾರದಲ್ಲಾದ ಎಡವಟ್ಟುಗಳು ಕಾರಣವೇ ಹೊರತು, ನಮ್ಮ ಸರ್ಕಾರದ್ದಲ್ಲ’
‘ನನ್ನ ವಯಸ್ಸು ಮಜಾ ಮಾಡುವ ವಯಸ್ಸಲ್ಲ. ಮತ್ತು ಮಜಾ ಮಾಡುವ ವ್ಯಕ್ತಿಯು ನಾನಲ್ಲ’
ಇಸ್ರೇಲ್- ಪ್ಯಾಲೇಸ್ತಿನ್ ಸಮಸ್ಯೆ ಬಗ್ಗೆ ಇಸ್ರೇಲ್ ಅಧ್ಯಕ್ಷರ ಬಳಿ ಪ್ರಧಾನಿ ಮೋದಿ ಮಾತು