Web News: ಇಂದಿನ ಕಾಲದಲ್ಲಿ ಅದೆಷ್ಟೋ ಹೆಣ್ಣು ಮಕ್ಕಳು ವಿವಾಹವಾಗಿ, ಪತಿಯ ಮೇಲೆ ಸುಳ್ಳು ಆರೋಪ ಹೊರಿಸಿ, ಜೀವನ ನಿರ್ವಹಣಾ ವೆಚ್ಚ ಪಡೆಯಲು ಯತ್ನಿಸುತ್ತಿದ್ದಾರೆ. ಆದರೆ ಇಂಥ ಕೇಸ್‌ಗಳನ್ನು ಕೋರ್ಟ್ ಅಷ್ಟು ಸಲೀಸಾಗಿ ನಂಬುತ್ತಿಲ್ಲ. ಹಾಗಾಗಿಯೇ ಎಷ್ಟೋ ಸುಳ್ಳು ಕೇಸ್‌ಗಳಲ್ಲಿ ಪತಿಯ ಮನೆಯವರಿಗೆ ಗೆಲುವು ಸಿಕ್ಕ ಉದಾಹರಣೆಗಳಿದೆ.
ಈ ಬಗ್ಗೆ ಖ್ಯಾತ ವಕೀಲರಾದ ವಿ.ಮಂಜುನಾಥ್ ವಿವರಿಸಿದ್ದು, ಇತ್ತೀಚೆಗೆ ಮಾಡಿರುವ ರೂಲ್ಸ್ ಪ್ರಕಾರ, ಹಿಂಸೆ ಅನುಭವಿಸಿದ ದಿನ ಅಥವಾ ಅದರ ಮರುದಿನವೇ ಬಂದು, ಪೊಲೀಸರಿಗೆ ಸಾಕ್ಷಿ ಸಮೇತ ದೂರು ನೀಡಬೇಕು. ಅದನ್ನು ಬಿಟ್ಟು ಜಗಳವಾಗಿ ವಾರವಾದ ಬಳಿಕ, ತಿಂಗಳಾದ ಬಳಿಕ ಅಥವಾ ವರ್ಷವಾದ ಬಳಿಕ ಈ ರೀತಿಯಾಗಿ ಬಂದು ದೂರು ನೀಡಿದರೆ, ಅಂಥ ದೂರು ಸ್ವೀಕರಿಸಲಾಗುವುದಿಲ್ಲ.
ಅಲ್ಲದೇ, ಇಂಥ ಸಂದರ್ಭದಲ್ಲಿ ಪತಿಯ ಮನೆಯವರು ಕೂಡ, ಆಕೆ ಮನೆ ಬಿಟ್ಟು ಹೋದ ದಿನವೇ ಪೊಲೀಸ್ ಠಾಣೆಯಲ್ಲೇ ಆಕೆ ಇಂಥ ದಿನ ಈ ವಿಷಯಕ್ಕೆ ಸಂಬಂಧಿಸಿದಂತೆ, ಜಗಳ ಮಾಡಿ, ಮನೆ ಬಿಟ್ಟು ಹೋಗಿದ್ದಾಳೆಂದು ದೂರು ದಾಖಲಿಸಬೇಕು. ಇದರಿಂದ ಆಕೆ ತಿಂಗಳಾದ ಬಳಿಕ ಅಥವಾ ಹಲವು ದಿನಗಳಾದ ಬಳಿಕ ದೂರು ನೀಡಿದರೆ, ಆ ದೂರು ಸ್ವೀಕಾರಕ್ಕೆ ನಿರಾಕರಿಸಲು ಸುಲಭವಾಗುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಈ ವೀಡಿಯೋ ನೋಡಿ.
ವಿ.ಮಂಜುನಾಥ್ ಅವರನ್ನು ಸಂಪರ್ಕಿಸಲು ಈ ನಂಬರ್ಗೆ ಕರೆ ಮಾಡಿ: 8792368759, 9243059248