Web News: ಮದುವೆ ಅಂದರೆ ಓರ್ವ ವ್ಯಕ್ತಿಯ ಜೀವನವನ್ನೇ ಬದಲಿಸುವ ಘಟನೆ. ಅದು ಹೆಣ್ಣಿನ ಜೀವನವಾದರೂ ಇರಬಹುದು. ಗಂಡಿನ ಜೀವನವಾದರೂ ಇರಬಹುದು. ಉತ್ತಮ ರೀತಿ ಅಥವಾ ಉತ್ತಮವಲ್ಲದ ರೀತಿಯಿಂದಲೂ ಜೀವನ ಬದಲಾಗಬಹುದು. ಆದರೆ ತಮ್ಮ ಜೀವನ ಇದ್ದ ಹಾಗೇ ಇರಲಿ, ಚೇಂಜ್ ಆಗೋದೇ ಬೇಡಾ ಅಂತಾ ಡಿಸೈಡ್ ಮಾಡಿರುವ ಕೆಲ ವ್ಯಕ್ತಿಗಳು ಮದುವೆಯಾಗದೇ, ಅನ್‌ಮ್ಯಾರೀಡ್ ಜೀವನ ಮಾಡುತ್ತಿದ್ದಾರೆ. ಆದರೆ, ಮದುವೆಯಾದರೂ ಆಗದ ರೀತಿ ಇರಬೇಕು ಎಂದು ಕೆಲವರು ವಸ್ತುಗಳನ್ನೇ ವಿವಾಹವಾಗಿದ್ದಾರೆ. ಇದು ವಿಚಿತ್ರ ಎನ್ನಿಸಿದರೂ ಸತ್ಯ. ಹಾಗಾದ್ರೆ ಯಾರ್ಯಾರು, ಯಾವ ವಸ್ತುಗಳನ್ನು ವಿವಾಹವಾಗಿದ್ದಾರೆ ನೋಡೋಣ ಬನ್ನಿ.
ಮಾರಿಯೋ ಮಾರ್ಸಿಯೋ: ಈತ ತಿಂಡಿಪೋತನಾಗಿದ್ದು, ಈತನಿಗೆ ಬರ್ಗರ್ ಎಂದರೆ ಬಲು ಇಷ್ಟ. ಹಾಗಾಗಿಯೇ ಈತ ದೊಡ್ಡ ಬರ್ಗರ್ ಒಂದನ್ನು ವಿವಾಹವಾಗಿದ್ದಾನೆ. ಕಾನೂನು ಪ್ರಕಾರವಾಗಿ, ಚರ್ಚ್‌ನಲ್ಲಿ ಬರ್ಗರ್ ಜೊತೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದಾನೆ.
ಆ್ಯರೋನ್ ಚೆರ್ವಿನ್ಯಾಕ್: ಈತ ಕೂಡ ಕ್ರಿಶ್ಚಿಯನ್ ಸಂಪ್ರದಾಯದಂತೆ ತನ್ನ ಸ್ಮಾರ್ಟ್ ಫೋನನ್ನೇ ವಿವಾಹವಾಗಿದ್ದಾನೆ.
ಮೇರಿ ರೋಚಾ ಮೋರಾಸ್: ಈಕೆ ಗೊಂಬೆಯೊಂದರ ಜೊತೆ ಚರ್ಚ್‌ನಲ್ಲಿ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದಳು. ಜೊತೆಗೆ ಆ ಗೊಂಬೆ ರೀತಿಯ ಇನ್ನೊಂದು ಪುಟ್ಟ ಗೊಂಬೆ ತಯಾರಿಸಿ. ಇದು ನಾನು ನನ್ನ ಪತಿಯಿಂದ ಪಡೆದಿರುವ ಮಗು ಎಂದು ತೋರಿಸಿದ್ದಳು.
ಪೆಸೆಲ್ ಸೆಲಿಕ್: ಈಕೆ ತಾನು ಮಲಗುವ ಹಾಸಿಗೆಯೊಂದಿಗೆ ವಿವಾಹವಾಗಿದ್ದಾಳೆ.
ಎರಿಕಾ ಲ್ಯಾಬ್ರಿ: ಈಕೆ 2007ರಲ್ಲಿ ಐಫೆಲ್ ಟವರ್‌ನ್ನು ವಿವಾಹವಾಗಿದ್ದಾಳೆ.
ಕ್ಯಾರೋಲ್ ಸ್ಯಾಂಟಾ: ಈಕೆ ಟ್ರೈನ್ ಸ್ಟೇಶನ್ ಅಂದ್ರೆ ರೈಲ್ವೆ ಸ್ಟೇಶನ್ ಒಂದರ ಜೊತೆ ವಿವಾಹವಾಗಿದ್ದಾಳೆ.
ರಿಚರ್ಡ್ ಟೋರಸ್: ರಿಚರ್ಡ್ ಟೋರಸ್ ಮರವೊಂದರ ಜೊತೆ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿದ್ದಾನೆ.
ಇವರೆಲ್ಲ ವಿದೇಶಿಗರಾಗಿದ್ದರೆ, ಎರಡು ವರ್ಷಗಳ ಹಿಂದೆ ಬಂಗಾಲದ ಯುವತಿಯೊಬ್ಬಳು ತನ್ನನ್ನು ತಾನೇ ವಿವಾಹವಾಗಿ, ಗೋವಾಗೆ ಸೋಲೋ ಹನಿಮೂನ್‌ಗೆ ಹೋಗಿ, ಹಲ್‌ಚಲ್ ಎಬ್ಬಿಸಿದ್ದಳು.