Web Story: ಚೀನಾದಲ್ಲಿ ಜನಕ್ಕೆ ಟೈಮೇ ಇಲ್ಲ : ಫಾರಿನರ್ಸ್‌ ಹೆಚ್ಚು ಸೋಮಾರಿಗಳು

Web Story: ಚೀನಾ ದೇಶಕ್ಕೆ ಹೋಗಿ, ಅಲ್ಲಿ ವಿದ್ಯಾಭ್ಯಾಸ ಮುಗಿಸಿ, ಅಲ್ಲೇ ತನ್ನ ಸ್ವಂತ ಕಂಪನಿ ನಿರ್ಮಿಸಿ, ಯೂಟ್ಯೂಬ್ ವ್ಲಾಗರ್ ಆಗಿರುವ ಸಾಹಿಲ್ ಅವರು ಸಂದರ್ಶನದಲ್ಲಿ ಮಾತನಾಡಿದ್ದಾರೆ.

ಚೀನಾದವರ ಜೀವನ ಅತೀ ಉತ್ತಮವಾಗಿದೆ. ಅಲ್ಲಿನ ಜನರಿಗೆ ಸಮಯ ವ್ಯರ್ಥ ಮಾಡುವಷ್ಟು ಸಮಯವೇ ಇಲ್ಲ. ಫಾರಿನರ್ಸೇ ತುಂಬಾ ಸೋಮಾರಿ ಅಂತಾರೆ ಸಾಹಿಲ್. ಯಾಕಂದ್ರೆ ಅವರು ತಮ್ಮನ್ನು ತಾವು ಬೇರೆ ಬೇರೆ ಉತ್ತಮ ಕೆಲಸಗಳಲ್ಲಿ ತಮ್ಮನ್ನು ತಾವು ತ“ಡಗಿಸಿಕ`ಂಡಿದ್ದಾರೆ.

ನಾವು ಭಾರತೀಯರು ಊಟ ಮಾಡಿ, ಚಹಾ ಸೇವಿಸಿ, ನಿದ್ದೆ ಮಾಡಿ, ಡಿನ್ನರ್ ಮಾಡಿ, ಹರಟೆ ಇದೇ ಆಗಿರತ್ತೆ. ಆದರೆ ಚೀನಾದಲ್ಲಿ ನಿದ್ದೆ ಮಾಡೋಕ್ಕೂ ಸಮಯವಿರೋದಿಲ್ಲ. ಆ ರೀತಿ ಬ್ಯುಸಿ ಇರುತ್ತಾರೆ. ಸಂಜೆ 6.30ಕ್ಕೆ ಊಟ ಸೇವಿಸಿ, ರಾತ್ರಿ ಬೇಗ ಮಲಗಿ ಬೇಗ ಏಳುತ್ತಾರೆ. ಆ ರೀತಿ ಆರೋಗ್ಯಕರ ಜೀವನ ನಡೆಸುತ್ತಾರೆ ಚೀನಾದವರು ಅಂತಾರೆ ಸಾಹಿಲ್.

ಇನ್ನು ಚೀನಾದಲ್ಲಿ ವಧು ದಕ್ಷಿಣೆ ನೀಡಿ ಮದುವೆಯಾಗಬೇಕು. ಭಾರತದ ರೀತಿ ವರ ದಕ್ಷಿಣೆ ನೀಡುವಂತಿಲ್ಲ. ವಧುವಿನ ಮನೆಯವರಿಗೆ ಹಣ ನೀಡಿ, ಮದುವೆಯಾಗಬೇಕು. ಅದರಲ್ಲೂ ವರನಿಗೆ ಉತ್ತಮ ಕೆಲಸವಿರಬೇಕು. 20ನೇ ವಯಸ್ಸಿಗೆ ಬರುವಾಗ, ಜವಾಬ್ದಾರಿ ನಿಭಾಯಿಸಲು ಸಿದ್ಧರಾಗಿರಬೇಕು. ವರನ ಬಳಿ ಜೀವನ ನಡೆಸುವ ಜವಾಬ್ದಾರಿ ಇಲ್ಲದಿದ್ದಲ್ಲಿ, ಅವನಿಗೆ 40 ದಾಟಿದರೂ ಮದುವೆ ಮಾಡಲಾಗುವುದಿಲ್ಲ. ಇಂಥ ಇನ್ನೂ ಹೆಚ್ಚಿನ ಕುತೂಹಲಕಾರಿ ಮಾಹಿತಿಗಾಗಿ ವೀಡಿಯೋ ನೋಡಿ.

About The Author