Sunday, September 8, 2024

Latest Posts

ಹೆಂಗಿದ್ದ ಹಾಸ್ಯನಟಿ ವಿದ್ಯುಲ್ಲೇಖಾ ಹೆಂಗಾದ್ರು ನೋಡಿ..!

- Advertisement -

ಸೌತ್‌ಸಿನಿ ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ಹಾಸ್ಯ ನಟಿಯಾಗಿರುವ ವಿದ್ಯುಲ್ಲೇಖಾ ರಾಮನ್ ಲಾಕ್‌ಡೌನ್ ಟೈಮನ್ನ ವೇಯ್ಟ್ ಲಾಸ್ ಮಾಡೋಕ್ಕೆ ಬಳಸಿದ್ದಾರೆ.

ತೆಲುಗು ,ತಮಿಳು, ಕನ್ನಡ ಚಿತ್ರದಲ್ಲೂ ನಟಿಸಿರುವ ವಿದ್ಯುಲ್ಲೇಖಾ, ತಮ್ಮ ಹಾಸ್ಯದಿಂದಲೇ ಫ್ಯಾನ್ ಫಾಲೋವರ್ಸ್ ಹೊಂದಿದ್ರು. ಎಂಟು ವರ್ಷದ ಹಿಂದೆ ಸಿನಿರಂಗಕ್ಕೆ ಕಾಲಿಟ್ಟ ವಿದ್ಯುಲ್ಲೇಖಾಗೆ ಅವರ ತೂಕ ಕೂಡ ಹಾಸ್ಯನಟನೆಗೆ ಸಹಾಯವಾಗಿತ್ತು. ಆದ್ರೀಗ ವಿದ್ಯುಲ್ಲೇಖಾ ಬರೋಬ್ಬರಿ 20 ಕೆಜಿ ತೂಕ ಇಳಿಸಿದ್ದಾರೆ.

ಈ ಬಗ್ಗೆ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಹೇಳಿಕೊಂಡಿರು ನಟಿ, ನಾನು ದಪ್ಪವಿದ್ದಾಗ, ನೀನು ಇಷ್ಟು ಕಾನ್ಫಿಡೆಂಟ್ ಹೇಗೆ ಇದ್ದಿಯ ಎಂದು ಕೇಳುತ್ತಿದ್ದರು. ಆದ್ದರಿಂದ ತೂಕ ಇಳಿಸುವ ಯೋಚನೆ ಬಂತು. ಊಟ ತಿಂಡಿ ಹಿಡಿತದಲ್ಲಿಟ್ಟು, ಜಿಮ್ ವರ್ಕೌಟ್, ಡಯಟ್ ಮಾಡಿ 20 ಕೆಜಿ ತೂಕ ಕಳೆದುಕೊಂಡಿದ್ದೇನೆ ಎಂದಿದ್ದಾರೆ.

ಕೆಲ ತಿಂಗಳ ಹಿಂದಷ್ಟೇ, ಹಾಟ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿದ್ದ ವಿದ್ಯುಲ್ಲೇಖಾರನ್ನ ಟ್ರೋಲ್ ಮಾಡಲಾಗಿತ್ತು. ಆಗ ನಾನು ಹಾಸ್ಯ ನಟಿಯಾದ್ರೂ, ದಪ್ಪಗಿದ್ರು ಗ್ಲಾಮರ್, ಫ್ಯಾಷನ್ ಬಗ್ಗೆ ನನಗೆ ತಿಳುವಳಿಕೆ ಇದೆ. ನಾನು ಯಾವ ದಿರಿಸಿನಲ್ಲೂ ಸುಂದರವಾಗಿ ಕಾಣುತ್ತೇನೆ. ಜನ ನಿಮ್ಮ ಬಗ್ಗೆ ನೂರಾರು ಹೇಳುತ್ತಾರೆ.ಆದ್ರೆ ಅದಕ್ಕೆಲ್ಲ ಗಮನ ಕೊಡದೇ, ನಿಮ್ಮನ್ನು ನೀವು ಪ್ರೀತಿಸಿ ಎಂದು ಕರೆನೀಡಿದ್ರು.

ಇನ್ನು ವಿದ್ಯುಲ್ಲೇಖಾ ತೆಲುಗು , ತಮಿಳು ಮಾತ್ರವಲ್ಲದೇ ಕನ್ನಡದಲ್ಲೂ ನಟಿಸಿದ್ದಾರೆ. ಜಾಗ್ವಾರ್ ಮತ್ತು ರ್ಯಾಂಬೋ 2 ಚಿತ್ರದಲ್ಲಿ ವಿದ್ಯುಲ್ಲೇಖಾ ತಮ್ಮ ಹಾಸ್ಯದಿಂದ ಗಮನ ಸೆಳೆದಿದ್ದಾರೆ.

- Advertisement -

Latest Posts

Don't Miss