Hubballi News: ಅಯೋಧ್ಯ ಶ್ರೀರಾಮ ಮಂದಿರದಲ್ಕಿ ಇದೇ ಜನವರಿ 22 ರಂದು ಬಾಲರಾಮ ಮೂರ್ತಿ ಪ್ರತಿಷ್ಠಾನ ನಡೆಯಲಿದ್ದು, ಈ ಕಾರ್ಯಕ್ರಮಕ್ಕೆ ಧಾರವಾಡದ ಪ್ರತಿಷ್ಠಿತ ಖ್ಯಾತ ವೈದರಾದ ಡಾ.ಎಸ್ ಆರ್ ರಾಮನಗೌಡರಿಗೆ ಆಹ್ವಾನ ನೀಡಲಾಗಿದ್ದು, ಈ ಆಹ್ವಾನದಿಂದ ನಮಗೆ ಸಂತಸವಾಗಿದೆ ಎಂದು ಡಾ.ಎಸ್ ಆರ್ ರಾಮನಗೌಡರ ಅವರು ಹರ್ಷ ವ್ಯಕ್ತಪಡಿಸಿದರು. ಈ ಕುರಿತು ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಜನವರಿ 21 ಕ್ಕೆ ಅಯೋಧ್ಯೆಯಲ್ಲಿರುವ ನಿರ್ಧಾರ ಮಾಡಲಾಗಿದೆ.
ಈಗಾಗಲೇ ಅಹ್ವಾನಿತರ ಪೂರ್ಣ ಮಾಹಿತಿಯನ್ನು ಅಯೋಧ್ಯಯ ಕಾರ್ಯಕ್ರಮ ಆಯೋಜಕರಿಗೆ ನೀಡಲಾಗಿದೆ. ಅಧಾರ ಕಾರ್ಡ್ ನಂಬರ್ ನೀಡಿ ರಿಜಿಸ್ಟರೇಶನ್ ಮಾಡಿಸಲಾಗಿದೆ. ಪ್ರಸ್ತುತ ನನಗೆ ವಿ ಎಚ್ ಪಿ ಉತ್ತರ ಪ್ರಾಂತದ ಅಧ್ಯಕ್ಷರನ್ನಾಗಿ ಮಾಡಲಾಗಿದೆ. ನಮ್ಮೊಟ್ಟಿಗೆ ಶಂಕ್ರಣ್ಣ ಮುಗದ, ಪ್ರಭಾಕರ್ ಕೋರೆ, ಪ್ರಕಾಶ ನಾಯಕ, ಹನುಮಂತ ನಿರಾಣಿ, ವಿ.ಎಸ್.ಪ್ರಸಾದ ಜೊತೆಗೂಡಿ ಹೋಗುತ್ತಿದ್ದೇವೆ. 22ರಂದು ಕಾರ್ಯಕ್ರಮ ಮುಗಿಸಿದ ಬಳಿಕ ಮರಳುವ ಯೋಜನೆ ಹಾಕಿಕೊಂಡಿದ್ದೇವೆ. ಆದರೆ ನೋಡಬೇಕು. ಈ ಹಿಂದೆ ನಾನು ಒಂದೆರಡು ಬಾರಿ ಹೋಗಿ ಬಂದಿದ್ದೇನೆ. ಈಗ ಬಾಲರಾಮನ ಮೂರ್ತಿಪ್ರತಿಷ್ಠಾನ ಕಾರ್ಯಕ್ರಮಕ್ಕೆ ಹೋಗುತ್ತಿರುವುದು ತುಂಬಾ ಸಂತೋಷವಾಗಿದೆ ಎಂದರು.
ಈ 2 ಗುಣವಿರುವವರು ಎಂದಿಗೂ ಉದ್ಧಾರವಾಗಲು ಸಾಧ್ಯವೇ ಇಲ್ಲ ಅಂತಾರೆ ಚಾಣಕ್ಯರು..