Health Tips: ಸೊಪ್ಪುಗಳು ಆರೋಗ್ಯಕ್ಕೆ ಎಷ್ಟು ಉತ್ತಮ ಎನ್ನುವುದು ಎಲ್ಲರಿಗೂ ಗೊತ್ತು. ಬಸಳೆ, ಪಾಲಕ್, ಸಬ್ಬಸಿಗೆ, ಮೆಂತ್ಯೆ ಸೊಪ್ಪು ಸೇರಿ ಹಲವು ಸೊಪ್ಪುಗಳ ಸೇವನೆಯಿಂದ ನಮ್ಮ ಆರೋಗ್ಯದಲ್ಲಿ ಅತ್ಯುತ್ತಮ ಬದಲಾವಣೆಗಳಾಗುತ್ತದೆ. ಇನ್ನು ಹರಿವೆ ಸೊಪ್ಪಿನ ಸೇವನೆ ಕೂಡ ಜೀವಕ್ಕೆ ಅತ್ಯುತ್ತಮ. ಹಸಿರು ಹರಿವೆ ಸೊಪ್ಪು, ಕೆಂಪು ಹರಿವೆ ಸೊಪ್ಪು ಸೇವಿಸುವುದರಿಂದಲೂ ನಮ್ಮ ಆರೋಗ್ಯ ಚೆನ್ನಾಗಿ ಅಭಿವೃದ್ಧಿಯಾಗುತ್ತದೆ. ಹಾಗಾದ್ರೆ ಹರಿವೆ ಸೊಪ್ಪಿನ ಸೇವನೆಯಿಂದಾಗುವ ಪ್ರಯೋಜನಗಳೇನು ಅಂತಾ ತಿಳಿಯೋಣ ಬನ್ನಿ..
ಹರಿವೆ ಸೊಪ್ಪನ್ನು ಸೇವಿಸುವುದರಿಂದ ನಮ್ಮ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಲಬದ್ಧತೆ ಸಮಸ್ಯೆ, ತಿಂದ ಆಹಾರ ಸರಿಯಾಗಿ ಜೀರ್ಣವಾಗದಿರುವುದು, ಈ ಎಲ್ಲ ಸಮಸ್ಯೆ ಇದ್ದಾಗ, ಹರಿವೆ ಸೊಪ್ಪಿನ ಪಲ್ಯ, ಸಾರು ಮಾಡಿ ಸೇವಿಸಿ. ಇದರಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮಲಬದ್ಧತೆ ಸಮಸ್ಯೆಗೂ ಮುಕ್ತಿ ಸಿಗುತ್ತದೆ.
ಕೊಂಚ ಕೆಲಸ ಮಾಡಿದ್ರೂ ನಿಮ್ಮ ಮೂಳೆ ನೋವಾಗುತ್ತದೆ. ಕೈ ಕಾಲು ನೋವಾಗುತ್ತದೆ. ಅಥವಾ ಮೂಳೆ ಸವೆಯುವ ಹೆದರಿಕೆ ಇದ್ದಲ್ಲಿ, ಅಂಥವರು ಹರಿವೆ ಸೊಪ್ಪಿನ ಸೇವನೆ ಮಾಡಿ. ಇದರಿಂದ ಮೂಳೆಗಳು ಗಟ್ಟಿಗೊಳ್ಳುತ್ತದೆ. ಏಕೆಂದರೆ, ಹರಿವೆ ಸೊಪ್ಪಿನಲ್ಲಿ ಕ್ಯಾಲ್ಸಿಯಂ, ಮ್ಯಾಗ್ನಿಷಿಯಂ, ಸತು, ತಾಮ್ರದಂಥ ಅಂಶಗಳಿದ್ದು, ಇವುಗಳು ಮೂಳೆಯ ಆರೋಗ್ಯ ಕಾಪಾಡುವಲ್ಲಿ ಸಹಾಯಕವಾಗಿದೆ.
ಹರಿವೆ ಸೊಪ್ಪಿನಲ್ಲಿ ವಿಟಾಮಿನ್ ಸಿ ಮತ್ತು ಬಿ9 ಇದ್ದು ರಕ್ತಹೀನತೆ ಸಮಸ್ಯೆ, ಆಯಾಸವಾಗುವುದನ್ನು ತಪ್ಪಿಸಲು ಇದು ಸಹಕಾರಿಯಾಗಿದೆ. ನಿಮ್ಮ ದೇಹದಲ್ಲಿ ಶಕ್ತಿಹೀನತೆಯುಂಟಾಗಿದೆ. ಯಾವುದೇ ಕೆಲಸ ಮಾಡಲು ಆಲಸ್ಯ ಉಂಟಾಗುತ್ತಿದೆ ಎಂದಲ್ಲಿ, ಹರಿವೆ ಸೊಪ್ಪಿನ ಆಹಾರದ ಸೇವನೆ ಮಾಡಿ. ಇದರಿಂದ ಕೆಲಸ ಮಾಡುವ ಚೈತನ್ಯ ಬರುತ್ತದೆ.
ಇನ್ನು ಹೃದಯದ ಆರೋಗ್ಯ ಸಮಸ್ಯೆ, ಶುಗರ್ ಇದ್ದಲ್ಲಿ, ನೀವು ಹರಿವೆ ಸೊಪ್ಪಿನ ಸೇವನೆ ವಾರಕ್ಕೊಮ್ಮೆಯಾದರೂ ಮಾಡಿ. ಇದರಿಂದ ಹೃದಯದ ಆರೋಗ್ಯ ಚೆನ್ನಾಗಿರುತ್ತದೆ. ರಕ್ತನಾಳದಲ್ಲಿ ರಕ್ತ ಸಂಚಾರ ಉತ್ತಮವಾಗಿ, ನಿಮ್ಮ ಆರೋಗ್ ಚೆನ್ನಾಗಿರುತ್ತದೆ. ಶುಗರ್ ಕಂಟ್ರೋಲ್ ಮಾಡುವಲ್ಲಿಯೂ ಇದು ಸಹಕಾರಿಯಾಗಿದೆ.