Thursday, November 21, 2024

Latest Posts

ಊಟದ ಬಳಿಕ ಸೋಂಪು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭವೇನು..?

- Advertisement -

Health Tips: ನಮ್ಮ ಆಹಾರ ಪದ್ಧತಿ ಹೇಗೆ ಇರುತ್ತದೆಯೋ, ಅದೇ ರೀತಿ ನಮ್ಮ ಆರೋಗ್ಯವಿರುತ್ತದೆ. ನಾವು ಮಿತವಾಗಿ, ಆರೋಗ್ಯಕರ ಆಹಾರ ಸೇವಿಸಿದರೆ, ಕುಡಿಯುವ ಹೊತ್ತಿಗೆ ನೀರು ಕುಡಿದರೆ, ನಿದ್ರಿಸುವ ಹೊತ್ತಿಗೆ ನಿದ್ದೆ ಮಾಡಿದರೆ, ನಮ್ಮ ಆರೋಗ್ಯ ಸರಿಯಾಗಿ ಇರುತ್ತದೆ. ಹಾಗಾಗಿ ನಾವು ಸೇವಿಸುವ ಆಹಾರ ಸರಿಯಾಗಿ ಇರುವುದು ತುಂಬಾ ಮುಖ್ಯ. ಊಟವಾದ ಬಳಿಕ ನಾವು ಸೇವಿಸುವ ಕೆಲ ಪದಾರ್ಥಗಳು ಕೂಡ, ನಮ್ಮ ಆರೋಗ್ಯ ಅಭಿವೃದ್ಧಿಗೆ ಸಹಾಯವಾಗುತ್ತದೆ.

ಅಂಥ ಅತ್ಯುತ್ತಮ ಪದಾರ್ಥಗಳಲ್ಲಿ ಸೋಂಪು ಕೂಡ ಒಂದು. ಹೊಟ್ಟೆ ತುಂಬ ಊಟವಾದ ಬಳಿಕ, ಸೋಂಪು ಸೇವಿಸುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಹಾಗಾಗಿ ಹೊಟೇಲ್‌ಗಳಲ್ಲಿ ಊಟವಾದ ಬಳಿಕ ತಿನ್ನಲು ಸೋಂಪು ಕೊಡುತ್ತಾರೆ. ಹಾಗಾದ್ರೆ ಊಟದ ಬಳಿಕ ಸೋಂಪು ತಿನ್ನುವುದರಿಂದ ಆರೋಗ್ಯಕ್ಕಾಗುವ ಲಾಭಗಳೇನು ಅಂತಾ ತಿಳಿಯೋಣ ಬನ್ನಿ.

ಉಂಡ ಬಳಿಕ ಸೋಂಪಿನ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆ ಅತ್ಯುತ್ತಮವಾಗಿರುತ್ತದೆ. ಇದರ ಸೇವನೆಯಿಂದ ಅಜೀರ್ಣತೆ, ಹೊಟ್ಟೆ ಉಬ್ಬರ, ಹೊಟ್ಟೆ ನೋವು ಯಾವ ತೊಂದರೆಯೂ ಬರುವುದಿಲ್ಲ. ತಿಂದ ಆಹಾರ ಸರಿಯಾಗಿ ಜೀರ್ಣವಾಗುತ್ತದೆ.

ಸೋಂಪಿನ ಸೇವನೆಯಿಂದ ಕಣ್ಣಿನ ದೃಷ್ಟಿ ಉತ್ತಮವಾಗಿರುತ್ತದೆ. ಇದರಿಂದ ಬೇಗ ದೃಷ್ಟಿದೋಷ ಬರುವುದಿಲ್ಲ. ಏಕೆಂದರೆ, ಇದರಲ್ಲಿ ವಿಟಾಮಿನ್ ಎ ಹೆಚ್ಚು ಇರುತ್ತದೆ. ಹಾಗಾಗಿ ಮಕ್ಕಳಿಗೆ ಊಟವಾದ ಬಳಿಕ, ಸ್ವಲ್ಪ ಸ್ವಲ್ಪ ಸೋಂಪು ತಿನ್ನಲು ಕೊಡಿ.

ಪ್ರತಿದಿನ ಖಾಲಿ ಹೊಟ್ಟೆಯಲ್ಲಿ ಸೋಂಪಿನ ಕಶಾಯ ಕುಡಿಯುವುದರಿಂದ ಹಲವು ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ. ಒಂದು ಗ್ಲಾಸ್ ನೀರಿಗೆ, 1 ಸ್ಪೂನ್ ಸೋಂಪು ಹಾಕಿ, ಚೆನ್ನಾಗಿ ಕುದಿಸಿದರೆ ಕಶಾಯ ರೆಡಿ. ಇದರ ಸೇವನೆಯಿಂದ ಚರ್ಮ ಸುಂದರವಾಗುತ್ತದೆ. ಮುಟ್ಟಿನ ಹೊಟ್ಟೆ ನೋವು ಸರಿಯಾಗುತ್ತದೆ. ಹೊಟ್ಟೆಯ ಎಲ್ಲ ಸಮಸ್ಯೆಗಳಿಗೂ ಮುಕ್ತಿ ಸಿಗುತ್ತದೆ.

ಇನ್ನು ನಿಮ್ಮ ಬಾಯಿಯಿಂದ ಹೆಚ್ಚು ದುರ್ವಾಸನೆ ಬರುತ್ತಿದ್ದರೆ, ಸೋಂಪಿನ ಸೇವನೆ ಮಾಡಿದ್ದಲ್ಲಿ, ದುರ್ವಾಸನೆ ಹೋಗುತ್ತದೆ. ಮಕ್ಕಳಿಗೆ ಸರಿಯಾಗಿ ಮಲ ವಿಸರ್ಜನೆಯಾಗದಿದ್ದಲ್ಲಿ, ಸೋಂಪಿನ ಕಶಾಯ ಮಾಡಿ ಕುಡಿಸಿದರೆ, ಮಲ ವಿಸರ್ಜನೆ ಸರಿಯಾಗಿ ಆಗುತ್ತದೆ.

- Advertisement -

Latest Posts

Don't Miss