Saturday, October 19, 2024

Latest Posts

ನೀವು ಬೆಳಿಗ್ಗೆ ಎದ್ದತಕ್ಷಣ ನೋಡಬೇಕಾದ ವಸ್ತುಗಳು ಯಾವುವು..? ಹಾಗೂ ನೋಡಬಾರದ ವಸ್ತುಗಳು ಯಾವುವೂ..?

- Advertisement -

ಕೆಲವರಿಗೆ ದಿನವಿಡೀ ಅವರು ಅಂದುಕೊಂಡಿರುವ ಕೆಲಸಗಳು ಜರಾಗದಿದ್ದರೂ , ಅದೃಷ್ಟ ಕೈ ಇಡಿಯ ದಿದ್ದರೂ , ಎಲ್ಲ ಕೆಟ್ಟದ್ದು ಜರುಗುತ್ತಿದ್ದರೂ ಅಬ್ಬಾ..! ಬೆಳಗ್ಗೆ ಎದ್ದು ಯಾರ ಮುಖ ನೋಡಿದೆ ಎಲ್ಲ ಹೀಗೆ ಹಾಗುತ್ತಿದೆ ಅಂತ ಅನಿಸುತ್ತೆ. ಆದರೆ ವಾಸ್ತು ಶಾಸ್ತ್ರ ಮತ್ತು ನಮ್ಮ ಪೂರ್ವಜರ ನಂಬಿಕೆಗಳ ಪ್ರಕಾರ, ನಾವು ಬೆಳಿಗ್ಗೆ ಎದ್ದಾಗ ಕೆಲವು ವಸ್ತುಗಳನ್ನು ಖಂಡಿತವಾಗಿ ನೋಡಬಾರದು. ನೀವು ಅದೃಷ್ಟವನ್ನು ಪಡೆಯಲು ಬಯಸಿದರೆ, ಎದ್ದತಕ್ಷಣ ಕೆಲವುವಸ್ತುಗಳನ್ನು ವೀಕ್ಷಿಸಬೇಕು. ಅವು ಯಾವುದು ಎಂಬುದನ್ನು ಈಗ ತಿಳಿದುಕೊಳ್ಳೋಣ..

ಮೊದಲಿಗೆ ನೀವು ಬೆಳಿಗ್ಗೆ ಎದ್ದತಕ್ಷಣ ನೋಡಬೇಕಾದದ್ದು ತಿಳಿದುಕೊಳ್ಳೋಣ :
1. ನಿದ್ರೆ ಎಚ್ಚರ ಆದನಂತರ ಬ್ರಾಹ್ಮಣರು ವೇದ ಮಂತ್ರಗಳನ್ನು ಪಠಿಸುವುದನ್ನು ನೋಡುವುದು ಅಥವಾ ಕೇಳುವುದು ಒಳ್ಳೆಯದು. ಅವರ ಬುದ್ಧಿ ನಮಗೂ ಬರುತ್ತದೆ ಎನ್ನಲಾಗಿದೆ .
2.ಬೆಳಿಗ್ಗೆ ಎದ್ದಾಗ ಹಸು ಅಥವಾ ತುಳಸಿ ಗಿಡವನ್ನು ನೋಡುವುದು ತುಂಬಾ ಮಂಗಳಕರ. ಏಕೆಂದರೆ ಹಸು ಮತ್ತು ತುಳಸಿ ಗಿಡದಲ್ಲಿ ದೇವತೆಗಳಿರುತ್ತಾರೆ. ಹಾಗಾಗಿ ಇದನ್ನು ಕಂಡರೆ ನಮಗೆ ಎಲ್ಲವೂ ಒಳ್ಳೆಯದಾಗುತ್ತದೆ.
3.ಬೆಳಿಗ್ಗೆ ನಿದ್ರೆ ಎದ್ದಾಗ ಉರಿಯುತ್ತಿರುವ ದೀಪವನ್ನು ನೋಡಬೇಕು. ಹಾಗೆಯೇ ಯಜ್ಞ ಮಾಡುವವರನ್ನು ನೋಡುವುದು ಶುಭವಾಗುತ್ತದೆ. ಅವುಗಳನ್ನು ಮಂಗಳಕರ ಸಂಕೇತವೆಂದು ಪರಿಗಣಿಸಲಾಗುತ್ತದೆ. ಆದ್ದರಿಂದ ನೀವು ಇಂಥದನ್ನು ನೋಡಿದರೆ ಎಲ್ಲವೂ ಒಳ್ಳೆಯದಾಗುತ್ತದೆ .
4.ಬೆಳಗ್ಗೆ ಎದ್ದ ತಕ್ಷಣ ಕನ್ನಡಿಯಲ್ಲಿ ನಮ್ಮ ರೂಪವನ್ನು ನಾವೂ ನೋಡಬಹುದು.
5.ಬಂಗಾರದಂತೆ ಕಾಣುವ ಸೂರ್ಯನನ್ನು ಮತ್ತು ಕೆಂಪು ಚಂದನವನ್ನು ಕಾಣಬಹುದು.ಇದರಿಂದ ಎಲ್ಲಾ ಕೆಲಸಗಳು ಜರುಗುವುದಲದೆ ಅದೃಷ್ಟವನ್ನು ತರುತ್ತದೆ.
6.ಮುಂಜಾನೆ ನಿದ್ರೆ ಎದ್ದಾಗ ಸಮುದ್ರ, ದೇವಸ್ಥಾನದ ಗೋಪುರ, ಪರ್ವತವನ್ನು ನೋಡಿದಾರೆ ನಮಗೆ ಪುಣ್ಯ ಲಭಿಸುತ್ತದೆ .
7.ಕರುವಿರುವ ಜೋತೆ ಇರುವ ಹಸುವನ್ನು ನೋಡುವುದು ಅಥವಾ ಪುರುಷರು ತಮ್ಮ ಹೆಂಡತಿಯನ್ನು ನೋಡುವುದು ಒಳ್ಳೆಯದು.
8.ಬೆಳಗ್ಗೆ ಎದ್ದ ತಕ್ಷಣ ದೇವರ ಚಿತ್ರಗಳು, ನವಿಲು ಕಣ್ಣುಗಳ ಚಿತ್ರಗಳು ಮತ್ತು ಹೂವುಗಳನ್ನು ನೋಡಿದರೆ ಅದೃಷ್ಟ ಬರುತ್ತದೆ.

ಬೆಳಿಗ್ಗೆ ನಿದ್ರೆ ಎದ್ದಾಗ ನೋಡಬಾರದ ವಿಷಯಗಳು:
1.ಬೆಳಿಗ್ಗೆ ಎದ್ದ ತಕ್ಷಣ ಕ್ರಮೇಣ ಪಾಪ ಮಾಡುವವರನ್ನು ನೋಡಬಾರದು. ಹಾಗೆ ನೋಡಿದರೆ ಪಾಪ ನಮಗೂ ಅಂಟಿಕೊಳ್ಳುತ್ತದೆ ಎನ್ನುತ್ತಾರೆ ಹಿರಿಯರು.
2.ಕೂದಲು ಬಿಟ್ಟಿರುವಾ ಹೆಂಗಸರನ್ನು ನೋಡಬಾರದು ಮತ್ತು ಹಣೆಯಮೇಲೆ ಚುಕ್ಕೆ ಇಡದಿರುವ ಹೆಂಗಸರನ್ನು ನೋಡಬಾರದು .
3.ಕ್ರೂರ ಪ್ರಾಣಿಗಳನ್ನು ಅಥವಾ ಅವುಗಳ ಚಿತ್ರಗಳನ್ನು ನೋಡದಿರುವುದು ಉತ್ತಮ.
4.ಮುಂಜಾನೆ ಎದ್ದ ತಕ್ಷಣ ಅಡುಗೆ ಮನೆಯಲ್ಲಿ ಅಶುಚಿಯಾದ ಪಾತ್ರೆಗಳು ಮತ್ತು ಬಟ್ಟಲುಗಳನ್ನು ನೋಡಬಾರದು ಎಂದು ನಮ್ಮ ಪೂರ್ವಜರು ಹೇಳುತ್ತಾರೆ , ಏಕೆಂದರೆ ಅವುಗಳನ್ನು ನೋಡುವುದರಿಂದ ದುರಾದೃಷ್ಟವನ್ನು ನೀಡುತ್ತದೆ.

ವಾಸ್ತು ಶಾಸ್ತ್ರದ ಪ್ರಕಾರ 7 ಕುದುರೆ ವರ್ಣಚಿತ್ರಗಳನ್ನು ಇಡುವ ಪ್ರಯೋಜನಗಳು..!

ನಿಮಗೆ ಹಣಕಾಸಿನ ಸಮಸ್ಯೆಗಳಿದ್ದರೆ ಮಂಗಳವಾರ ಹನುಮಂತನಿಗೆ ಈ ನಾಲ್ಕು ಪರಿಹಾರಗಳನ್ನು ಪ್ರಯತ್ನಿಸಿ..!

ಗರುಡ ಪುರಾಣದಲ್ಲಿರುವ ಸಾವಿನ ರಹಸ್ಯ..! ಮನುಷ್ಯ ಸತ್ತ 13 ದಿನ ಆ ಮನೆಯಲ್ಲಿ ಏನಾಗುತ್ತೆ ಗೊತ್ತಾ..?

 

- Advertisement -

Latest Posts

Don't Miss