Saturday, May 10, 2025

Latest Posts

ನಾಯಿಗಳು ರಾತ್ರಿ ಹೊತ್ತು, ಹೆಚ್ಚು ಬೊಗಳೋದೇಕೆ..?

- Advertisement -

ಕಾಲ ಭೈರವನ ವಾಹನವಾದ ಶ್ವಾನ, ನಿಯತ್ತಿಗೆ ಹೆಸರಾದದ್ದು. ನಮಗೆ ಕಾಣದ ಶಕ್ತಿ, ದುಷ್ಟ ಶಕ್ತಿಗಳೆಲ್ಲ ನಾಯಿಗಳ ಕಣ್ಣಿಗೆ ಕಾಣುತ್ತದೆ ಅಂತಾ ಹೇಳಲಾಗತ್ತೆ. ಹಾಗಾಗಿಯೇ ಶ್ವಾನಗಳು ರಾತ್ರಿ ಹೊತ್ತು ಹೆಚ್ಚು ಬೊಗಳತ್ತೆ ಅಂತಾ ಹಿರಿಯರು ಹೇಳುತ್ತಾರೆ. ಈ ಬಗ್ಗೆ ಪೂರ್ತಿ ಮಾಹಿತಿಯನ್ನ ತಿಳಿಯೋಣ ಬನ್ನಿ..

ಮನೆ ಮುಂದೆ ನಾಯಿ ಬಂದು ಜೋರಾಗಿ ಬೊಗಳಿದರೆ, ಅಥವಾ ಅಳುವಂತೆ ಕೂಗಿದರೆ, ಹಿರಿಯರು, ಹಿಂದಿನ ಕಾಲದವರು ಅದನ್ನು ಓಡಿಸಿಬಿಡುತ್ತಾರೆ. ಯಾಕೆ ಹಾಗೆ ಓಡಿಸಿದಿರಿ ಅಂತಾ ಕೇಳಿದ್ರೆ, ಅದು ಹಾಗೆ ಕೂಗಿದರೆ ಅಪಶಕುನ ಅಂತಾ ಹೇಳ್ತಾರೆ. ಅಲ್ಲದೇ, ಅದೊಂಥರಾ ಭಯದ ವಾತಾವರಣ ಸೃಷ್ಟಿಸುತ್ತೆ ಅಂತಾನೂ ಹೇಳ್ತಾರೆ. ಯಾಕಂದ್ರೆ ಹಿರಿಯರ ನಂಬಿಕೆ ಪ್ರಕಾರ, ನಾಯಿ ಹಾಗೆ ಕೂಗಿದರೆ, ಯಮರಾಜ ಬರುತ್ತಿದ್ದಾನೆ, ಯಮಕಿಂಕರರು ಬರುತ್ತಿದ್ದಾರೆ. ಯಾರನ್ನೋ ಮರಣ ಸಂಭವಿಸುವ ಸಾಧ್ಯತೆ ಇದೆ ಎಂದು ನಂಬಲಾಗಿದೆ.

ಪುರಾಣದಲ್ಲಿ ಈ ಬಗ್ಗೆ ಹೇಳಲಾಗಿಲ್ಲ ಆದ್ರೆ, ಕೆಲವರ ಪ್ರಕಾರ, ರಾತ್ರಿ ನಾಯಿ ಕೂಗಿದರೆ, ಅದು ಆತ್ಮವನ್ನು ನೋಡಿದೆ ಎಂದರ್ಥ. ಅಥವಾ ಕೆಲ ಹೊತ್ತಿನಲ್ಲೇ ಯಾರದ್ದೋ ಮರಣ ಸಂಭವಿಸಲಿದೆ ಎಂದರ್ಥ. ಅಥವಾ ಯಾವುದೋ ನಕಾರಾತ್ಮಕ ಶಕ್ತಿ ಇರುವುದು ನಾಯಿಗೆ ಗೊತ್ತಾಗಿದೆ ಎಂದು ನಂಬಲಾಗಿದೆ.

- Advertisement -

Latest Posts

Don't Miss