Sandalwood News: ನಿರೂಪಕಿ, ಸಕಲ ಕಲಾ ವಲ್ಲಭೆ ಅಪರ್ಣಾ (57) ಕ್ಯಾನ್ಸರ್‌ನಿಂದ ಬಳಲಿ ಸಾವನ್ನಪ್ಪಿದ್ದಾರೆ. ಎರಡೂವರೆ ವರ್ಷಗಳಿಂದ ಕ್ಯಾನ್ಸರ್ ಅವರನ್ನು ಕಾಡುತ್ತಿತ್ತು. ತಾವು ಕ್ಯಾನ್ಸರ್‌ನ 4ನೇ ಸ್ಟೇಜ್‌ನಲ್ಲಿ ಇದ್ದೇನೆ ಎಂದು ಗೊತ್ತಾಗುವಷ್ಟೊತ್ತಿಗೆ, ಸಮಯ ಮೀರಿತ್ತು. ನೀವು ಬರೀ 6 ತಿಂಗಳು ಬದುಕಬಹುದು ಎಂದು ವೈದ್ಯರು ಹೇಳಿದ್ದರು.
ಆದರೆ ಅಪರ್ಣಾ ಕ್ಯಾನ್ಸರ್ ಎದುರಿಸಿ, ಎರಡು ವರ್ಷ ಬದುಕಿ, ಕೊನೆಗೆ ಚಿಕಿತ್ಸೆ ಫಲಿಸದೇ, ಕೊನೆಯುಸಿರೆಳೆದಿದ್ದಾರೆ. ಕ್ಯಾನ್ಸರ್ ಬರೀ ಸ್ಮೋಕ್ ಮಾಡುವವರಿಗೆ, ಗುಟ್ಕಾ ಸೇವಿಸುವವರಿಗೆ, ಮದ್ಯಪಾನ ಮಾಡುವವರಿಗಷ್ಟೇ ಬರುತ್ತದೆ ಅನ್ನುವ ಸಮಯ ಹೋಯಿತು. ಈಗ ನಾವು ಸೇವಿಸುವ ನೀರು, ಆಹಾರವೂ ನಮ್ಮ ಜೀವ ತೆಗೆಯಬಹುದು. ಈ ರೀತಿ ಕ್ಯಾನ್ಸರ್ ಬರಲು ಕಾರಣವಾಗಬಹುದು.
ಈಗಾಗಲೇ ಕರ್ನಾಟಕ ಟಿವಿ ಹೆಲ್ತ್‌ನಲ್ಲಿ ವೈದ್ಯರಾದ ಡಾ.ಶಿವಕುಮಾರ್ ಉಪ್ಪಳ ಅವರು ಶ್ವಾಸಕೋಶದ ಕ್ಯಾನ್ಸರ್ ಹೇಗೆ ಬರುತ್ತದೆ ಅನ್ನೋ ಬಗ್ಗೆ ಹೇಳಿದ್ದಾರೆ. ಅಲ್ಲದೇ, ಅನ್ನನಾಳದ ಕ್ಯಾನ್ಸರ್ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ಈ ಕ್ಯಾನ್ಸರ್ ಬಂದಾಗ, ನಮಗೆ ಅನ್ನಾಹಾರ ಸೇವಿಸಲೂ ಸಾಧ್ಯವಾಗುವುದಿಲ್ಲ. ಅಪರ್ಣಾಗೂ ಸಹ ಕೊನೆ ಕೊನೆಗೆ ಅನ್ನಾಹಾರ ಸೇವಿಸುವುದಕ್ಕೂ ತೊಂದರೆಯಾಗುತ್ತಿತ್ತು.
ನಾವು ಬಿಸಿ ಬಿಸಿ ನೀರು ಅಥವಾ ಬಿಸಿ ಬಿಸಿ ಆಹಾರವನ್ನೂ ಅಗತ್ಯಕ್ಕಿಂತ ಹೆಚ್ಚು ಸೇವಿಸಿದಾಗಲೇ, ಇಂಥ ಕ್ಯಾನ್ಸರ್ ಬರುತ್ತದೆ. ಅಪರ್ಣಾ ನಿರೂಪಕಿಯಾದ ಕಾರಣ, ಬಿಸಿ ನೀರು ಸೇವಿಸುವುದು ಅಗತ್ಯವಾಗಿತ್ತು. ಆದ ಕಾರಣಕ್ಕೆ ಅವರಿಗೆ ಈ ಶ್ವಾಸಕೋಶದ ಕ್ಯಾನ್ಸರ್ ಬಂದಿರಬಹುದು ಎಂದು ಅಂದಾಜಿಸಲಾಗಿದೆ.