Hubli News: ಹುಬ್ಬಳ್ಳಿ: ಅಂಜಲಿ ಹತ್ಯೆ ಆರೋಪಿಯನ್ನು ಬಂಧಿಸಿದ್ದು, ಆರೋಪಿಗೆ ತೀವ್ರ ಅನಾರೋಗ್ಯ ಉಂಟಾದ ಹಿನ್ನೆಲೆ, ಆತನನ್ನು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಕಿಮ್ಸ್ ಆಸ್ಪತ್ರೆಗೆ ಭೇಟಿ ನೀಡಿದ ಕಮಿಷನರ್ ರೇಣುಕಾ ಸುಕುಮಾರ್, ವಿಚಾರಣೆ ನಡೆಸಿದ್ದಾರೆ.
ಬಳಿಕ ಮಾತನಾಡಿದ ರೇಣುಕಾ, ಬುಧವಾರ ಬೆಂಡಿಗೇರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಒಂದು ಕೊಲೆ ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆಯಲ್ಲಿ ಆರೋಪಿ ಪತ್ತೆಗಾಗಿ ಎಂಟು ತಂಡವನ್ನ ನಾವು ರಚನೆ ಮಾಡಿದ್ವಿ. ನಿನ್ನೆ ರೇಲ್ವೆ ಪೋಲಿಸರ ಸಹಾಯದಿಂದ ಆರೋಪಿ ಸಿಕ್ಕಿದ್ದಾನೆ. ಆರೋಪಿ ಗಿರೀಶ್ ಗೆ ತಲೆ ಮತ್ತು ಬೆನ್ನಿಗೆ ಗಂಭೀರ ಗಾಯವಾಗಿದೆ. ಸದ್ಯ ಕೋಮಾ ಸ್ಟೇಜ್ ನಲ್ಲಿದ್ದಾನೆ. ಟ್ರೈನ್ ನಿಂದ ಯಾಕೇ ಬಿದ್ದ ಅನ್ನೋದನ್ನ ಅವನು ಸ್ಟೇಟ್ ಮೆಂಟ್ ಕೊಡಬೇಕು ಅವಾಗ ಗೊತ್ತಾಗುತ್ತದೆ ಎಂದಿದ್ದಾರೆ.
ಬೆಳಗಿನ ಜಾವ 4.30 ಗೆ ನಮ್ಮ ಕಷ್ಟಡಿಗೆ ಬಂದಿದ್ದಾನೆ. ಮೈಸೂರಿನಿಂದ ಗೋವಾ ಮಹಾರಾಷ್ಟ್ರ ಕಡೆ ತಲೆಮೆರಸಿಕೊಳ್ಳಬೇಕು ಅಂತ ಮಾಡಿಕೊಂಡಿದ್ದ. ಬೈಕ್ ಕಳ್ಳತನ ವಿಚಾರದಲ್ಲಿ 4 ಪ್ರಕಾರಣಗಳು ದಾಖಲು ಆಗಿದೆ ಇವನ ಮೇಲೆ. ವಿಶ್ವಮಾನವ ಟ್ರೈನ್ ಹತ್ತಿದ್ದಾನೆ ಎಂಬ ಮಾಹಿತಿ ಇದೆ. ಅವನ ಹೇಳೋ ಪ್ರಕಾರ ಹುಡುಗಿ ಫೋನ್ ಬ್ಲಾಕ್ ಹಾಕಿದ್ಲು. ನಾವು ಪ್ರೀತಿ ಮಾಡ್ತಿದ್ವಿ ಅಂತ ಹೇಳಿದ್ದಾನೆ. ಅವನಿಗೆ ಪ್ರಜ್ಷೆ ಬಂದರ ನಂತರ ಹೇಳಿಕೆ ಪಡೆದುಕೊಳ್ಳಲಾಗುವುದು ಎಂದು ರೇಣುಕಾ ಸುಕುಮಾರನ್ ಹೇಳಿದ್ದಾರೆ.
ಪ್ರವಾಸಿಯ ಕಳೆದುಹೋಗಿದ್ದ ವಾಚ್ ಹಿಂದಿರುಗಿಸಿದ ಭಾರತೀಯ ಹುಡುಗ: ದುಬೈ ಪೊಲೀಸರಿಂದ ಸನ್ಮಾನ
ಕೊ* ಪ್ರಕರಣಗಳಲ್ಲಿ ಸರ್ಕಾರದ ಲೋಪ ಹೆಚ್ಚಾಗಿ ಕಾಣುತ್ತಿದೆ: ಶಾಸಕ ಟೆಂಗಿನಕಾಯಿ