Tuesday, January 14, 2025

Latest Posts

Siddaramaiah : ಮುಡಾ ಪ್ರಕರಣಕ್ಕೆ ಹೈಕೋರ್ಟ್ ಡೆಡ್​ಲೈನ್ : ಸೆ.12ಕ್ಕೆ ಸಿದ್ದರಾಮಯ್ಯ ಭವಿಷ್ಯ ನಿರ್ಧಾರ ತೀರ್ಪು

- Advertisement -

ಸಿಎಂ ಸಿದ್ದರಾಮಯ್ಯಗೆ ಸಂಕಷ್ಟ ತಂದೊಡ್ಡಿರುವ ಮುಡಾ ಹಗರಣದ ಬಗ್ಗೆ ಕರ್ನಾಟಕ ಹೈಕೋರ್ಟ್‌ ಡೆಡ್‌ಲೈನ್‌ ನೀಡಿದೆ. ಸಿದ್ದರಾಮಯ್ಯ ವಿರುದ್ಧ ಮುಡಾ ನಿವೇಶನ ವಿಚಾರವಾಗಿ ತನಿಖೆಗೆ ಅನುಮತಿ ನೀಡಿರುವ ರಾಜ್ಯಪಾಲರ ಕ್ರಮದ ಕುರಿತು ಹೈಕೋರ್ಟ್‌ನಲ್ಲಿ ದೂರು- ಪ್ರತಿದೂರಿನ ವಿಚಾರಣೆ ಮುಂದುವರಿದಿದೆ. ಗುರುವಾರಕ್ಕೆ ವಿಚಾರಣೆ ಮುಂದೂಡಿಕೆಯಾಗಿದ್ದು, ಸಿದ್ದರಾಮಯ್ಯ ಪರ ವಕೀಲರು ಅಂದೇ ಹೇಳಿಕೆ ದಾಖಲಿಸಲಿದ್ದಾರೆ. ಬಹುತೇಕ ಅಂದೇ ವಿಚಾರಣೆ ಅಂತ್ಯವಾಗಿದ್ದು, ಸಿಎಂ ಭವಿಷ್ಯ ನಿರ್ಧರಿಸಲಿದೆ.

ಸೋಮವಾರ ವಾದ ಮಂಡಿಸಿದ್ದ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ಇದು 22 ವರ್ಷಗಳ ಹಳೆಯ ಪ್ರಕರಣವಾಗಿದ್ದು, ಪ್ರಾಥಮಿಕ ತನಿಖೆ ನಡೆಸಬೇಕು. ಸರ್ಕಾರಕ್ಕೆ ನೋಟಿಸ್‌ ನೀಡುವ ಬದಲು ರಾಜ್ಯಪಾಲರು ತನಿಖಾಧಿಕಾರಿಯಿಂದ ವರದಿ ಪಡೆಯಬೇಕಿತ್ತು. 17ಎ ಅಡಿಯಲ್ಲಿ ಅನುಮತಿ ನೀಡುವಾಗ ಕೃತ್ಯ ಕರ್ತವ್ಯದ ಭಾಗವಾಗಿತ್ತೇ ಎಂದು ಪರಿಗಣಿಸಬೇಕು ಎಂದು ಚಂದ್ರಬಾಬು ನಾಯ್ಡು ಮತ್ತು ಆಂಧ್ರಪ್ರದೇಶದ ಪ್ರಕರಣವನ್ನು ಉಲ್ಲೇಖಿಸಿದರು. ಇಂತಹ ಪ್ರಕರಣಕ್ಕೆ ಅನುಮತಿ ನೀಡಿದರೆ ಪ್ರತಿದಿನವೂ ನೂರಾರು ಪ್ರಕಣಗಳು ದಾಖಲಾಗುತ್ತವೆ. ಇಂತಹ ಎಲ್ಲ ಪ್ರಕರಣಗಳನ್ನು ತನಿಖೆ ಮಾಡಲಾಗದು ಎಂದೂ ವಾದಿಸಿದ್ದರು.

ಕೆಲ ಕಾಲ ವಾದ ಆಲಿಸಿದ ಬಳಿಕ ಮೊದಲೇ ನಿಗದಿಯಾಗಿದ್ದಂತೆ ದೂರುದಾರರ ವಾದಕ್ಕೆ ಅರ್ಜಿದಾರರ ಪರ ಹಿರಿಯ ನ್ಯಾಯವಾದಿ ಅಭಿಷೇಕ್‌ ಮನು ಸಿಂಘ್ವಿ ಉತ್ತರಿಸಲು ವಿಚಾರಣೆಯನ್ನು ಸೆಪ್ಟೆಂಬರ್‌ 12ಕ್ಕೆ ಮುಂದೂಡಿದೆ. ಅಂದೇ ವಿಚಾರಣೆ ಮುಕ್ತಾಯಗೊಳಿಸಲಾಗುವುದು ಎಂದು ನ್ಯಾಯಪೀಠ ಹೇಳಿತು. ಅಲ್ಲದೆ, ಯಾವುದೇ ಬಲವಂತದ ಕ್ರಮ ಕೈಗೊಳ್ಳಬಾರದೆಂಬ ಮಧ್ಯಂತರ ಆದೇಶವನ್ನು ಮುಂದುವರಿಸಿದೆ.

ಹಿರಿಯ ವಕೀಲರ ಅಭಿಪ್ರಾಯದ ಪ್ರಕಾರ, ಸೆ.12ಕ್ಕೆ ವಿಚಾರಣೆ ಮುಗಿಯಲಿದ್ದು, ಆದೇಶ ಪ್ರಕಟಿಸಲು ಜಡ್ಜ್ ಮತ್ತಷ್ಟು ದಿನಗಳ ಸಮಯ ಪಡೆಯಬಹುದು ಎನ್ನಲಾಗಿದೆ. ಒಟ್ನಲ್ಲಿ ಸಿದ್ದರಾಮಯ್ಯ ಪಾಲಿಗೆ ಸೆಪ್ಟಂಬರ್ 12 ಮಹತ್ವದ ದಿನವಾಗಿದೆ. ಹೈಕೋರ್ಟ್ ತೀರ್ಪು ಸಿಎಂ ಪರ ಬರುತ್ತೋ? ಅಥವಾ ವಿರುದ್ಧ ಬರುತ್ತೋ ಎಂಬುದು ಕುತೂಹಲ ಮೂಡಿಸಿದೆ.

- Advertisement -

Latest Posts

Don't Miss