Sunday, April 20, 2025

Latest Posts

ಹಿಜಬ್ ವಿಚಾರದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದೇನು..?

- Advertisement -

Political News: ಹಿಜಬ್ ವಿಚಾರದ ಬಗ್ಗೆ ಕೊನೆಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಮೌನ ಮುರಿದಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಬ್ ನಿಷೇಧ ಆದೇಶವನ್ನು ಇದುವರೆಗೂ ಸಿಎಂ ವಾಪಸ್ ಪಡೆದಿಲ್ಲ. ಆ ಬಗ್ಗೆ ಚರ್ಚೆಯೇ ನಡೆದಿಲ್ಲ. ನೀವೇ ಅದನ್ನು ದೊಡ್ಡದು ಮಾಡುತ್ತಿದ್ದೀರಿ. ಅವರು ಆ ಬಗ್ಗೆ ಮಾತನಾಡಿದ್ದಾರೆ ಅಷ್ಟೇ. ಆ ವಿಷಯದ ಬಗ್ಗೆ ಚರ್ಚೆಯೇ ನಡೆದಿಲ್ಲವೆಂದು ಹೇಳಿದ್ದಾರೆ.

ಮೈಸೂರಿನ ಕಾರ್ಯಕ್ರಮ ನಡೆಯುವಾಗ, ಸಿಎಂ ಸಿದ್ದರಾಮಯ್ಯ, ಹಿಜಬ್ ನಿಷೇಧ ಆದೇಶವನ್ನು ವಾಪಸ್ ತೆಗೆದುಕೊಳ್ಳುತ್ತೇನೆ. ನೀವಿನ್ನು ಹಿಜಬ್ ಧರಿಸಬಹುದು. ಉಡುಪು ಅವರವರ ಇಷ್ಟ. ನಾನು ಪಂಚೆ ಶರ್ಟು ಧರಿಸುತ್ತೇನೆ ಅದು ನನ್ನಿಷ್ಟ. ಇನ್ನೊಬ್ಬನು ಪ್ಯಾಂಟು ಶರ್ಟು ಧರಿಸುತ್ತಾನೆ. ಅದು ಅವನಿಷ್ಟ. ಬಟ್ಟೆ ಅವರವರ ಇಷ್ಟ. ಅದನ್ನ ನಾನ್ಯಾಕೆ ತಡಿಯಲಿ ಎಂದು ಹೇಳಿದ್ದರು.

ಈ ಬಗ್ಗೆ ಹಿಂದೂಗಳು ಸೇರಿ, ಹಲವು ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದರು. ಅವರು ಹಿಜಬ್ ಧರಿಸಿ ಬಂದರೆ, ಹಿಂದೂ ವಿದ್ಯಾರ್ಥಿಗಳು ಕೇಸರಿ ಶಾಲು ಹೊದ್ದು ಹೋಗಲಿ, ಉಡುಪು ಅವರವರ ಇಷ್ಟವಲ್ಲವೇ ಎಂದು ಹೇಳಿದ್ದರು. ಇದೀಗ ಡಿಸಿಎಂ ಡಿ.ಕೆ.ಶಿವಕುಮಾರ್ ಈ ಬಗ್ಗೆ ಮಾತನಾಡಿದ್ದು, ಈ ಬಗ್ಗೆ ಚರ್ಚೆಯೇ ಆಗಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ.

‘ಮೋದಿಜಿ ಅವರನ್ನು ಪ್ರಧಾನಿಯನ್ನಾಗಿಸಲು ಕರ್ನಾಟಕದ ಗೆಲುವಿನ ಕಿರೀಟ ಸಮರ್ಪಿಸುವ ಶಪಥ ಮಾಡೋಣ’

ಬಿ.ಕೆ.ಹರಿಪ್ರಸಾದ್ ಮಾನಸಿಕ ಸ್ಥಿತಿ ಸರಿಯಲ್ಲ: ಮಾಜಿ ಡಿಸಿಎಂ ಗೋವಿಂದ ಕಾರಜೋಳ

‘ನನ್ನ ಮೇಲೆ ನಂಬಿಕೆ ಇಟ್ಟು, ನನಗೆ ಈ ಜವಾಬ್ದಾರಿ ವಹಿಸಿದ್ದಕ್ಕೆ, ವಿನಮ್ರ ಕೃತಜ್ಞತೆಗಳು’

- Advertisement -

Latest Posts

Don't Miss