Political News: ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಮತ್ತೆ ಮರಳಿ ಬಿಜೆಪಿ ಸೇರಿದ್ದಾರೆ. ಈ ಬಗ್ಗೆ ಶೆಟ್ಟರ್ ಜೊತೆ ಕರ್ನಾಟಕ ಟಿವಿ ಸಂದರ್ಶನ ನಡೆಸಿದ್ದು, ಇದರಲ್ಲಿ ಶೆಟ್ಟರ್ ಕೆಲವೊಂದು ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಹಾಗಾದ್ರೆ ಶೆಟ್ಟರ್ ವಿಷಯದಲ್ಲಿ ಡಿಕೆಶಿ- ಸಿದ್ದರಾಮಯ್ಯ ಮಾಡಿದ ತಪ್ಪೇನು..? ಈ ಬಗ್ಗೆ ಶೆಟ್ಟರ್ ಏನು ಹೇಳಿದ್ದಾರೆ ಕೇಳೋಣ ಬನ್ನಿ..
ಈ ಬಗ್ಗೆ ಮಾತನಾಡಿರುವ ಶೆಟ್ಟರ್, ನಾನು ಎಲೆಕ್ಷನ್ ಸಮಯದಲ್ಲಿ ಕಾಂಗ್ರೆಸ್‌ಗೆ ಸೇರಿದ್ದು, ಅಲ್ಲಿ ಬೇಕಾದಷ್ಟು ಕಡೆ ಕ್ಯಾಂಪೇನ್ ಮಾಡಿದ್ದೇನೆ. ಅಂಥ ಕಷ್ಟಕಾಲದಲ್ಲೂ, ನಾನು ಕಾಂಗ್ರೆಸ್ ಪರ ಕ್ಯಾಂಪೇನ್ ಮಾಡಿದ್ದೇನೆ. ಕಾಂಗ್ರೆಸ್ ಹೆಚ್ಚು ಸೀಟು ಪಡೆದು ಗೆಲುವು ಕೂಡ ಸಾಧಿಸಿದೆ. ಈ ವಿಷಯದಲ್ಲಿ ನಾನು ಏನು ಅನ್ಯಾಯ ಮಾಡಿದ್ದೇನೆ ಎಂದು ಶೆಟ್ಟರ್ ಮರು ಪ್ರಶ್ನಿಸಿದ್ದಾರೆ.
ಅಲ್ಲದೇ, ಜಗದೀಶ್ ಶೆಟ್ಟರ್ ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ಸೇರಿದ್ದರಿಂದ ನನಗಾಗಲಿ ಕಾಂಗ್ರೆಸ್‌ಗಾಗಲಿ ಯಾವುದೇ ಲಾಸ್ ಆಗಲಿಲ್ಲ. ಇಬ್ಬರಿಗೂ ಲಾಭವೇ ಆಗಿದ್ದು. ಘರ್ ವಾಾಪ್ಸಿ ಅನ್ನೋದು ನಮ್ಮ ಕಾರ್ಯಕರ್ತರ ಒತ್ತಾಸೆ, ರಾಜ್ಯ ನಾಯಕರ ಒತ್ತಾಸೆಗೆ ಮಣಿದು ನಾನು ಮತ್ತೆ ಬಿಜೆಪಿ ಸೇರಿದ್ದು. ಇದರಲ್ಲಿ ನನ್ನ ತಪ್ಪೇನಿದೇ..? ನಾನೇನು ಅನ್ಯಾಯ ಮಾಡಿದ್ದೇನೆ..? ಇಲ್ಲಿ ನನಗೂ ಏನೂ ಅನ್ಯಾವಾಗಿಲ್ಲ. ನಾನೂ ಯಾರಿಗೂ ಅನ್ಯಾಯ ಮಾಡಿಲ್ಲ. ಇಲ್ಲ ಯಾರ ತಪ್ಪೂ ಇಲ್ಲವೆಂದು ಶೆಟ್ಟರ್ ಸ್ಪಷ್ಟನೆ ನೀಡಿದ್ದಾರೆ.