Hassan Political News: ಹಾಸನ: ಹಾಸನದಲ್ಲಿ ಮಾತನಾಡಿದ ಸಚಿವ ರಾಜಣ್ಣ, ರೇವಣ್ಣ ವಿರುದ್ಧ ಕಿಡಿಕಾರಿದ್ದಾರೆ. ಸರ್ ರೇವಣ್ಣ ಅವರು ಜಿಲ್ಲೆಗೆ ಕಾಂಗ್ರೆಸ್ ಏನು ಅಂತ ಕೇಳ್ತಿದ್ದಾರೆ..? ಎಂದು ಮಾಧ್ಯಮದವರು ಕೇಳಿದ್ದಕ್ಕೆ ಉತ್ತರಿಸಿದ ರಾಜಣ್ಣ, ಹೇಮಾವತಿ ಗೊರೂರು ಡ್ಯಾಮ್ ಇವರೇ ಕಟ್ಟಿಸಿದ್ದಂತ.? ಅದಕ್ಕೆ ನಾವು ರಾಜಕಾರಣ ಮಾತಾಡಕ್ ಹೋಗೋದಿಲ್ಲ. ಹಾಸನ ಅಭಿವೃದ್ಧಿಯಾಗಬೇಕು. ಜನ ನೆಮ್ಮದಿಯಿಂದ ಬಾಳಬೇಕು. ಇದು ನಮ್ಮ ಬಯಕೆ. ರೇವಣ್ಣನವರು ಹಾಸನಕ್ಕೆ ವಿಶೇಷವಾಗಿ ಹೆಚ್ಚು ಅಭಿವೃದ್ಧಿ ಮಾಡಿದ್ದಾರೆ. ಹೇಮಾವತಿ ಅಣೆಕಟ್ಟು ಕಾಂಗ್ರೆಸ್ ಅವರು ಕಟ್ಟಿಸಿದ್ರೋ, ರೇವಣ್ಣನವರು ಕಟ್ಟಿಸಿದ್ರೋ, ಅವರವರೇ ಆತ್ಮವಿಮರ್ಶೆ ಮಾಡಿಕೊಳ್ಳಿ ಎಂದಿದ್ದಾರೆ.
ಇನ್ನು ರಮೇಶ್ ಜಾರಕಿಹೊಳಿ 50, 60 ಎಂದು ನಂಬರ್ ಹೇಳುತ್ತಿದ್ದಾರೆ ಎಂದಿದ್ದಕ್ಕೆ, ಪ್ರತಿಕ್ರಿಯಿಸಿದ ರಾಜಣ್ಣ, ಅವ್ರೂ ಒಳ್ಳೇ ಜ್ಯೋತಿಷಿಯವರು ಅವರು ಹೇಳ್ತಾರಪ್ಪ. ಅವೆಲ್ಲಾ ಸುಳ್ಳು ರೀ. ಇವಾಗ ನಾನ್ ಹೇಳ್ತೀನಿ ಬಿಜೆಪಿ ಅವರು 20 ಜನ ಬರ್ತಾರೆ ಅಂತ. ಅದಾಗುತ್ತಾ..? ಬೆಳಿಗ್ಗೆ ಸ್ವರೂಪ್ ಅವರು ಕಾಂಗ್ರೆಸ್ ಬರ್ತಾರೆ ಅಂತ ಹೇಳ್ತೀನಿ. ಅದು ಆಗುತ್ತಾ..? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ, ಕಾಂಗ್ರೆಸ್ ಪಕ್ಷ 150 ವರ್ಷ ಇತಿಹಾಸ ಇರುವಂತದ್ದು ಕಾಂಗ್ರೆಸ್ ಜನರ ಪಕ್ಷ. ಅವರವರ ವಿಚಾರಗಳನ್ನು ಪ್ರಸ್ತಾಪ ಮಾಡಿದಾಗ, ಆ ಕ್ಷಣಕ್ಕೆ ಅದು ಮನಸ್ತಾಪವಿದೆ, ಅವಿಶ್ವಾಸವಿದೆ ಎಂಬ ಭಾವನೆ ಮೂಡುವುದು ಸರಿಯಲ್ಲ. ಬಿಜೆಪಿ ಅವರು ಒಬ್ಬನನ್ನು ಅಧ್ಯಕ್ಷ ಮಾಡಿಕೊಳ್ಳಿಕ್ಕೆ ಅವರಿಗೆ ಒಮ್ಮತವಿಲ್ಲ ಅಂದ್ರೆ, ಇಲ್ಲಿ ಅಸಮಾಧಾನ ಇದೆ ಅಂತ ಹೇಳ್ತಿರಲ್ಲ. ಬಿಜೆಪಿಯವರು ಯಾಕೆ ಐದು ತಿಂಗಳಿಂದ ವಿರೋಧ ಪಕ್ಷ ನಾಯಕನನ್ನ ಆಯ್ಕೆ ಮಾಡಲಿಲ್ಲವೆಂದು ಪ್ರಶ್ನಿಸುವ ಮೂಲಕ, ರಾಜಣ್ಣ ಬಿಜೆಪಿಗರಿಗೆ ಟಾಂಗ್ ನೀಡಿದ್ದಾರೆ.
ಇನ್ನು ಸತೀಶ್ ಜಾರಕಿಹೊಳಿ ಮತ್ತು ಲಕ್ಷ್ಮೀ ಹೆಬ್ಬಾಳ್ಕರ್ ಮಧ್ಯೆ ಮನಸ್ತಾಪ ಇರುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ರಾಜಣ್ಣ, ಅವರಿಬ್ಬರಿಗೂ ಮನಸ್ತಾಪ ಇದೆಯಾ ಇಲ್ಲವಾ ಅನ್ನೋದು ನನಗೆ ಗೊತ್ತಿಲ್ಲ. ಅದರಿಂದ ಎಲ್ಲಾ ಉದ್ಭವ ಆಗಿದೆ ಅಂತ ನೀವು ಮಾಧ್ಯಮದವರು ಸೃಷ್ಟಿ ಮಾಡ್ತಾ ಇರೋದು. ಕರ್ನಾಟಕದಲ್ಲಿ ಸರಿಯಾದ ವಿರೋಧ ಪಕ್ಷವೆಂದರೆ ಮಾಧ್ಯಮದವರೆ ಎಂದು ರಾಜಣ್ಣ ಕೊಂಚ ಗರಂ ಆದರು.
ಇನ್ನು ಬೆಳಗಾವಿಯಲ್ಲಿ ಭಿನ್ನಮತ ಶಮನವಾಗಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ರಾಜಣ್ಣ, ಇದ್ರೆ ಅಲ್ವಾ ಶಮನ ಆಗೋದು..? ಇನ್ನು ಐದು ತಿಂಗಳ ಆಗಿಲ್ಲ. ಹನಿಮೂನ್ ಪಿರೆಡ್ ಮುಗಿದಿಲ್ಲ. ಮೆಕ್ಕೆಜೋಳವನ್ನು ಖರೀದಿ ಮಾಡ್ತೀವಿ, ರೇವಣ್ಣವರು ಸಲಹೆ ಕೊಟ್ಟಿದ್ದಾರೆ. KMF ಯಿಂದ ಮಾಡಿ ಅಂತ ಹೇಳಿದ್ದಾರೆ ಎಂದರು.
ಇನ್ನು ಪರಮೇಶ್ವರ್ ಮನೆಯಲ್ಲಿ ಸಿಎಂ ಔತಣ ಕೂಟಕ್ಕೆ ಹೋದ ಬಗ್ಗೆ ಮಾತನಾಡಿದ ರಾಜಣ್ಣ, ನಮ್ಮನೆಗೂ ಬರ್ತಾರಪ್ಪ, ಅದಕ್ಕೆ ರಾಜಕೀಯ ಬಣ್ಣ ಯಾಕೆ ಕಟ್ತೀರಾ..? ಅಸಮಾಧಾನ ಸಂಪೂರ್ಣ ನೂರಕ್ಕೆ ನೂರು ಇಲ್ಲ ಎಂದು ನಾನು ಹೇಳುವುದಿಲ್ಲ. ಅಲ್ಪಸ್ವಲ್ಪ ಇರುತ್ತೆ. ಅದನ್ನು ಹೈಕಮಾಂಡ್ ಕೊಳ್ಳುತ್ತಾರೆ. ಅವರೂ ಸರಿಪಡಿಸುತ್ತಾರೆ ಎಂದು ರಾಜಣ್ಣ ಸ್ಪಷ್ಟನೆ ನೀಡಿದರು.
ಕುಮಾರಸ್ವಾಮಿಯವರು ಆಣೆ ಪ್ರಮಾಣ ಮಾಡಿ, ಸವಾಲ್ ಹಾಕಿದ್ದರ ಬಗ್ಗೆ ಮಾತನಾಡಿದ ಸಚಿವರು, ಆಣೆ ಪ್ರಮಾಣ ಮಾಡುವವರು ಮಾಡ್ಕೊಳ್ಳಿ ನಮ್ಮದೇನು ಅಡ್ಡಿ ಇಲ್ಲ. ರಾಜಕಾರಣದಲ್ಲಿ ಯಾರು ಸತ್ಯಹರಿಶ್ಚಂದ್ರ ಇಲ್ಲ ಎಂದು ರಾಜಣ್ಣ ಹೇಳಿದ್ದಾರೆ.
ಇನ್ನು ಸರ್ ಎರಡುವರೆ ವರ್ಷ ಆದ್ಮೇಲೆ ಸಿಎಂ ಬದಲಾಗ್ತಾರಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ರಾಜಣ್ಣ, ಎರಡುವರೆ ವರ್ಷ ನೋಡೋಣ. ಅಲ್ಲಿವರೆಗೆ ಬದುಕೋರು ಯಾರೋ ಸಾಯೋರ್ ಯಾರು..?. ಐದು ವರ್ಷ ಸರ್ಕಾರ ಇದ್ದೇ ಇರುತ್ತೆ. ಐದು ವರ್ಷ ಕೂಡ ಜನರ ಬಯಕೆ ಏನಂದರೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಆಗಿರಬೇಕು ಅಂತ. ಅವರ ಬಯಕೆಯನ್ನು ನಾವು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ಅಂತಿಮವಾಗಿ ಹೈಕಮಾಂಡ್ ನಲ್ಲಿ ತೀರ್ಮಾನ ಮಾಡುತ್ತಾರೆ. ಸಿಎಂ ಆಗಲಿಕ್ಕೆ ಶಿವಕುಮಾರ್ ಅವರಿಗೂ ಎಲ್ಲಾ ಅರ್ಹತೆ ಇದೆ. ಡಿಕೆ ಶಿವಕುಮಾರ್ ಅವರು ಒಳ್ಳೆ ಸಂಘಟನೆ ಮಾಡುತ್ತಾರೆ. ಪಕ್ಷದಲ್ಲಿ ಮೊದಲಿಂದ ನಿಷ್ಠಾವಂತರಾಗಿ ಇದ್ದಾರೆ. ಮುಖ್ಯಮಂತ್ರಿ ಆಗಲು ಕಾಂಗ್ರೆಸ್ ನಲ್ಲಿ ಇನ್ನೂ ಎರಡು ಸ್ವಲ್ಪ ಜನ ಇದ್ದಾರೆ. ಸಿದ್ದರಾಮಯ್ಯ ಇನ್ನು ಐದು ವರ್ಷ ಮುಖ್ಯಮಂತ್ರಿ ಆಗಿ ಮುಂದುವರಿಬೇಕು ಎನ್ನುವುದು ಬಹು ಜನರ ಬಯಕೆ ಎನ್ನುವ ಮೂಲಕ ರಾಜಣ್ಣ, ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದ್ದಾರೆ.
ನನ್ನ ಸರ್ಕಾರದ ತಪ್ಪುಗಳಿದ್ದರೆ ಬರೆಯಿರಿ, ಕಾಗೆ ಸುದ್ದಿ ಬೇಡ: ಮಾಧ್ಯಮಕ್ಕೆ ಸಿಎಂ ಕರೆ
ಕರ್ನಾಟಕ ಕಾಂಗ್ರೆಸ್ನಲ್ಲಿ ಮಹತ್ವದ ರಾಜಕೀಯ ಬೆಳವಣಿಗೆ: ರಾತ್ರೋ ರಾತ್ರಿ ಬೆಂಗಳೂರಿಗೆ ಬಂದ ಹೈಕಮಾಂಡ್ ನಾಯಕರು
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಬಿ.ಸಿ.ಟ್ರಸ್ಟ್‌ನ ಕಳ್ಳತನ ಗೈದ ಬಂಧಿಸಿದ ಪೋಲಿಸರು