Dharwad political News: ಧಾರವಾಡ: ಡಿಕೆಶಿ ಸಿಬಿಐ ತನಿಖೆ ಹಿಂಪಡೆದ ವಿಚಾರದ ಬಗ್ಗೆ ಸಚಿವ ಸಂತೋಷ್ ಲಾಡ್ ಪ್ರತಿಕ್ರಿಯಿಸಿದ್ದು, ರಾಜ್ಯ ಸರ್ಕಾರಕ್ಕೆ ನಿರ್ಣಯ ತೆಗೆದುಕೊಳ್ಳುವ ಅಧಿಕಾರ ಇದೆ. ಈ ತರ ತೋಗೊಬೇಕು ಅಂತ ರಾಜ್ಯ ಸರ್ಕಾರ ತೆಗೆದುಕೊಂಡಿದೆ. ಸರ್ಕಾರ ನಿರ್ಣಯ ತೆಗೆದುಕೊಂಡ ಮೇಲೆ ವಾದ ವಿವಾದ ಇರ್ತಾವೆ. ಅದಕ್ಕೆ ನಾನೇನು ಜಾಸ್ತಿ ಮಾತನಾಡೋಕೆ ಹೋಗಲ್ಲ. ನನ್ನ ನಿಲುವು ಸರ್ಕಾರದ ಪರ ಇರುತ್ತೆ ಎಂದಿದ್ದಾರೆ.
ಅಲ್ಲದೇ, ಬಹಳಷ್ಟು ಸಿಬಿಐ ಹಾಗೂ ಇಡಿ ಕೇಸ್ ಗಳ ಸಕ್ಸಸ್ ರೇಟ್ ಸಹ ಕಡಿಮೆ ಇದೆ. ಸರ್ಕಾರ ಏನೇ ನಿರ್ಧಾರ ತೆಗೆದುಕೊಂಡರೂ ಅದು ಫೈನಲ್. ನನ್ನ ಪ್ರಕಾರ ಅದೇ ಫೈನಲ್ ಅಂತ. ಅವರು ಲೀಗಲ್ ಆಗಿ ಹೋಗೋಕೆ ಚಾನ್ಸ್ ಇದೆ ಹೋಗೆ ಹೋಗ್ತಾರೆ ಅವರು. ಸಂಪುಟ ಸಭೆಯಲ್ಲಿ ಒತ್ತಡ ಹಕುವಂತದ್ದು ಇಲ್ಲ. ಎಲ್ಲರೂ ಸೇರಿ ತೆಗೆದುಕೊಂಡ ನಿರ್ಧಾರ ಅದು. ಸ್ಪೀಕರ್ ಅನುಮತಿ ಇಲ್ಲ ಎನ್ನುವ ಆರೋಪ ಹಿನ್ನೆಲೆ, ಒಂದು ಬಾರಿ ಕ್ಯಾಬಿನೆಟ್ ನಿರ್ಧಾರ ಮಾಡಿದ್ರೆ ಸ್ಪೀಕರ್ ಅನುಮತಿ ಪಡೆಯಲಾಗುತ್ತದೆ. ಲೀಗಲ್ ಆಗಿಯೇ ನಿರ್ಧಾರ ತೆಗೆದುಕೊಂಡಿದೆ ಎಂದು ಸಚಿವ ಸಂತೋಷ್ ಲಾಡ್, ಡಿಸಿಎಂ ಡಿಕೆಶಿ ಪರ ಬ್ಯಾಟ್ ಬೀಸಿದ್ದಾರೆ.
ರಾಜಕಾರಣ ಯಾವ್ದೇ ಮನೆತನಕ್ಕೆ ಸಿಮೀತವಲ್ಲ – ವಿಜಯೇಂದ್ರ ಆಯ್ಕೆಗೆ ಸೋಮಣ್ಣ ಅಸಮಾಧಾನ