ಸಿಎಂ ಸಿದ್ದರಾಮಯ್ಯ- ಡಿ.ಕೆ.ಶಿವಕುಮಾರ್ ನಾಯಕತ್ವದ ಬಗ್ಗೆ ಶೆಟ್ಟರ್ ಹೇಳಿದ್ದೇನು..?

Political News: ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್‌, ಮತ್ತೆ ಮರಳಿ ಬಿಜೆಪಿ ಸೇರಿದ್ದಾರೆ. ಈ ಬಗ್ಗೆ ಶೆಟ್ಟರ್ ಜೊತೆ ಕರ್ನಾಟಕ ಟಿವಿ ಸಂದರ್ಶನ ನಡೆಸಿದ್ದು, ಇದರಲ್ಲಿ ಶೆಟ್ಟರ್ ಕೆಲವೊಂದು ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಮತ್ತು ಡಿಕೆಶಿ ನಾಯಕತ್ವದ ಬಗ್ಗೆ ಶೆಟ್ಟರ್‌ ತಮ್ಮ ಅನಿಸಿಕೆ ತಿಳಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ ಅವರು ಒಳ್ಳೆಯ ನಾಯಕರು. 14 ಬಾರಿ ಹಣಕಾಸು ಸಚಿವರಾಗಿ, 14 ಬಜೆಟ್ ಮಂಡನೆ ಮಾಡಿದ್ದಾರೆ. ಅವರ ಕೆಲಸವನ್ನು ನಾನು ಅಪ್ರಿಶಿಯೇಟ್ ಮಾಡುತ್ತೇನೆ. ಇನ್ನು ಡಿ.ಕೆ.ಶಿವಕುಮಾರ್ ಒಂದು ಪಕ್ಷದ ಅಧ್ಯಕ್ಷರಾಗಿದ್ದರು. ಉತ್ತಮವಾಗಿ ಪೈಪೋಟಿ ಕೊಡುವ ನಾಯಕರಾಗಿದ್ದಾರೆ. ಪಕ್ಷ ಕಟ್ಟುವಲ್ಲಿ ಚೆನ್ನಾಗಿ ಕಾರ್ಯನಿರ್ವಹಿಸಿದ್ದಾರೆ. ಪಕ್ಷ ಅಧಿಕಾರಕ್ಕೆ ತರಬೇಕು ಎನ್ನುವ ಅವರ ಹಠ, ಸಿದ್ದರಾಮಯ್ಯರ ನಾಯಕತ್ವ, ಹಲವಾರು ಬೆಂಬಲಿಗರ ಕಾರಣಕ್ಕೆ ಇಂದು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ. ಹೀಗಾಗಿ ಒಂದು ಪಕ್ಷಕ್ಕೆ ನಾಯಕರಾಗಿ ಏನೇನು ಕೆಲಸ ಮಾಡಬೇಕೋ, ಅದನ್ನು ಮಾಡಿದ್ದಾರೆಂದು ಶೆಟ್ಟರ್ ಹೇಳಿದ್ದಾರೆ.

ಕರ್ನಾಟಕದ ರಾಜಕಾರಣ ಬೇರೆ, ದೇಶದ ರಾಕಾರಣ ಬೇರೆ, ನರೇಂದ್ರ ಮೋದಿಯವರ ಪ್ರಭಾವ ಇಡೀ ದೇಶದಲ್ಲಿದೆ. ರಾಜ್ಯದಲ್ಲೇ ಯಾವುದೇ ಪಕ್ಷವಿದ್ದರೂ ಕೂಡ, ಕಳೆದ ಎರಡು ಲೋಕಸಭೆ ಚುನಾವಣೆಯಲ್ಲೂ ರಾಜ್ಯದ ಜನ, ಮೋದಿಯವರಿಗೇ ಜೈ ಎಂದಿದ್ದಾರೆ. ಈ ಚುನಾವಣೆಯಲ್ಲೂ ಕೂಡ ಅದೇ ರೀತಿಯಾಗುತ್ತದೆ ಎಂದು ಶೆಟ್ಟರ್ ಭವಿಷ್ಯ ನುಡಿದಿದ್ದಾರೆ.

ಶೆಟ್ಟರ್ ವಿಷಯದಲ್ಲಿ ಡಿಕೆಶಿ- ಸಿದ್ದರಾಮಯ್ಯ ಮಾಡಿದ ತಪ್ಪೇನು..? ಶೆಟ್ಟರ್ ಹೇಳಿದ್ದೇನು..?

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಯಲ್ಲಿ ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ

ಸಂತೋಷ್‌ ಲಾಡ್‌ ಫೌಂಡೇಶನ್‌ನಿಂದ 26 ಎಲೆಕ್ಟ್ರಿಕ್‌ ಆಟೋ ವಿತರಣೆ

About The Author