Information: ಮದ್ಯಪಾನ ಮಾಡುವಾಗ ಹೆಚ್ಚಾಗಿ ಚೀಯರ್ಸ್ ಅನ್ನೋ ಪದವನ್ನು ಬಳಸುವುದನ್ನು ನಾವು ನೀವು ನೋಡಿರುತ್ತೇವೆ. ಆದ್ರೆ ಇತ್ತೀಚಿನ ದಿನಗಳಲ್ಲಿ ಬರೀ ಮದ್ಯಪಾನ ಮಾಡುವಾಗ ಮಾತ್ರವಲ್ಲದೇ, ಜ್ಯೂಸ್ ಕುಡಿಯುವಾಗಲೂ ಚೀಯರ್ಸ್ ಎಂದು ಹೇಳುತ್ತಾರೆ. ಹಾಗಾದ್ರೆ ಚಿಯರ್ಸ್ ಎಂದು ಹೇಳಲು ಕಾರಣವೇನು ಅಂತಾ ತಿಳಿಯೋಣ ಬನ್ನಿ..
ಚಿಯರ್ಸ್ ಎಂದರೆ ಹರ್ಷೋದ್ಗಾರ. ಖುಷಿಯಾದಾಗ ಹೇಳುವ ಪದ. ಇದನ್ನು ಮೊದಲೆಲ್ಲ ಮದ್ಯಪಾನ ಮಾಡುವಾಗ ಮಾತ್ರ ಬಳಸುತ್ತಿದ್ದರು. ಇದಕ್ಕೊಂದು ಕಾರಣವೂ ಇದೆ. ಯಾವ ವಸ್ತು ನಿಮ್ಮ ಪಂಚೇಂದ್ರಿಯಗಳನ್ನು ತೃಪ್ತಿಗೊಳಿಸುತ್ತದೆಯೋ, ಅದು ನಿಮ್ಮ ಮನಸ್ಸನ್ನು ತೃಪ್ತಿಗೊಳಿಸುತ್ತದೆ ಎಂದರ್ಥ. ಅಂದರೆ, ಮೂಗು, ಬಾಯಿ, ಕಿವಿ, ಚರ್ಮ, ಕಣ್ಣು. ಇವಿಷ್ಟನ್ನೂ ಒಂದು ವಸ್ತು ತೃಪ್ತಿಗೊಳಿಸಿದರೆ. ಅದು ಸಂಪೂರ್ಣ ಸ್ವಾದ ನೀಡಿತು ಎಂದರ್ಥ.
ಅಂದರೆ ನೀವು ಬಳಸುವ ವಸ್ತು ಮುಟ್ಟವಂತಿರಬೇಕು, ನೋಡುವಂತಿರಬೇಕು, ಕೇಳುವಂತಿರಬೇಕು, ಕಾಣುವಂತಿರಬೇಕು, ಅದರ ಪರಿಮಳ ತೆಗೆದುಕೊಳ್ಳುವಂತಿರಬೇಕು. ಹೀಗಿದ್ದಾಗ ಮಾತ್ರ ಆ ವಸ್ತು ನಿಮಗೆ ತೃಪ್ತಿಗೊಳಿಸುತ್ತದೆ ಎಂದರ್ಥ. ಅದೇ ರೀತಿ ಮದ್ಯ ಪಾನ ಮಾಡುವಾಗ, ನೀವು ಗ್ಲಾಸ್ ಹಿಡಿಯಬಹುದು. ಅದರ ಸ್ಮೆಲ್ ತೆಗೆದುಕೊಳ್ಳಬಹುದು. ಆ ಮದ್ಯವನ್ನು ಕಣ್ಣಿಂದ ನೋಡಬಹುದು. ಅದನ್ನು ಕುಡಿದು ರುಚಿ ನೋಡಬಹುದು. ಆದರೆ ಅದನ್ನು ಕೇಳಿಸಿಕೊಳ್ಳುವುದು ಅಸಾಧ್ಯ.
ಹಾಗಾಗಿ ಆ ಪಂಚೇಂದ್ರಿಯಗಳ ತೃಪ್ತಿಯನ್ನು ಪೂರ್ಣಗೊಳಿಸಲು, ಮದ್ಯಪಾನ ಮಾಡುವ ಮುನ್ನ ಚಿಯರ್ಸ್ ಎಂದು ಹೇಳುತ್ತಾರೆ. ಚಿಯರ್ಸ್ ಎನ್ನುವ ಪದ ಕಿವಿಗೆ ಬಿದ್ದಾಕ್ಷಣ ಅಲ್ಲಿ ಮದ್ಯಪಾನ ಸೇವನೆ ಮಾಡಲಾಗುತ್ತಿದೆ ಎಂದರ್ಥ.