Friday, December 13, 2024

Latest Posts

ಪೂತನಿ ಶ್ರೀಕೃಷ್ಣನಿಗೆ ವಿಷಪೂರಿತ ಸ್ತನಪಾನ ಮಾಡಿಸಲು ಇದೇ ಕಾರಣ.. ಪೂರ್ವಜನ್ಮದ ಕಥೆ

- Advertisement -

Spiritual: ನಮಗೆಲ್ಲರಿಗೂ ಶ್ರೀಕೃಷ್ಣ ಲೀಲೆಯಲ್ಲಿ ಬರುವ ಪೂತನಿ ಸಂಹಾರದ ಬಗ್ಗೆ ಗೊತ್ತು. ಪೂತನಿ ಚೆಂದದ ರೂಪ ಧರಿಸಿ, ಶ್ರೀಕೃಷ್ಣ ರೂಪ ಧರಿಸಲು ಬಂದು, ಅವನಿಗೆ ತನ್ನ ವಿಷಪೂರಿತ ಎದೆ ಹಾಲು ಕುಡಿಸಿ, ಕೊಲ್ಲಲು ಪ್ರಯತ್ನಿಸುತ್ತಾಳೆ. ಕೊನೆಗೆ ಶ್ರೀಕೃಷ್ಣನಿಂದಲೇ ಸಂಹಾರಗೊಳ್ಳುತ್ತಾಳೆ. ಆದರೆ ಪೂತನಿ ಪೂರ್ವ ಜನ್ಮದಲ್ಲಿ ಏನಾಗಿದ್ದಳು. ಆಕೆಯ ಯಾವ ತಪ್ಪಿಗೆ ಆಕೆಗೆ ಪೂತನಿಯ ಜನ್ಮ ಸಿಕ್ಕಿತು ಅನ್ನೋ ಬಗ್ಗೆ ತಿಳಿಯೋಣ ಬನ್ನಿ..

ರಾಜಾ ಬಲೀಂದ್ರನ ಮಗಳು ರತ್ನಮಾಲಾ. ರಾಜಾ ಬಲೀಂದ್ರ ವಿಷ್ಣುವಿನ ಭಕ್ತನಾಗಿದ್ದರೂ ಕೂಡ, ರಾಕ್ಷಸರ ರಾಜನಾಗಿದ್ದ. ಸಮಸ್ತ ಲೋಕವನ್ನು ತನ್ನ ವಶ ಮಾಡಿಕೊಳ್ಳಬೇಕು. ಇಂದ್ರಲೋಕವನ್ನೂ ತನ್ನ ವಶಕ್ಕೆ ಮಾಡಿಕೊಳ್ಳಬೇಕು, ತ್ರಿಲೋಕವನ್ನು ತಾನೇ ಆಳಬೇಕು ಎಂದು ಬಲೀಂದ್ರ ಮುಂದುವರಿಯುತ್ತಾನೆ. ತನ್ನೆಲ್ಲ ಶ್ರಮವನ್ನು ಹಾಕಿ, ಯುದ್ಧ ಗೆಲ್ಲುತ್ತಾನೆ. ಕೊನೆಗೆ ಯಾಗವನ್ನು ಮಾಡಿ, ತ್ರಿಲೋಕ ಪಡೆಯಬೇಕು ಎಂದುಕೊಳ್ಳುತ್ತಾನೆ.

ಆದರೆ ದೇವತೆಗಳೆಲ್ಲ ಸೇರಿ, ದೇವಲೋಕವನ್ನು ಅಸುರರಿಂದ ರಕ್ಷಿಸಬೇಕು ಎಂದು ಬ್ರಹ್ಮ, ವಿಷ್ಣು, ಮಹೇಶ್ವರರಲ್ಲಿ ಕೇಳಿಕೊಳ್ಳುತ್ತಾರೆ. ಆಗ ಶ್ರೀವಿಷ್ಣು ವಾಮನನ ಅವತಾರ ತಾಳಿ, ಬಲೀಂದ್ರನಲ್ಲಿಗೆ ಹೋಗುತ್ತಾನೆ. ಅಲ್ಲಿದ್ದ ಬಲೀಂದ್ರನ ಮಗಳು ರತ್ನಮಾಲಾ, ವಾಮನನ್ನು ನೋಡಿ, ಖುಷಿಯಾಗುತ್ತಾಳೆ. ಅವನ ಮುಖದ ಕಳೆ, ಅವನ ಮುಗ್ಧತೆ ಎಲ್ಲವೂ ಆಕೆಗೆ ಇಷ್ಟವಾಗುತ್ತದೆ. ಆಗ ಅವಳು, ನನಗೂ ಇಂಥ ಮುದ್ದಾದ ಮಗು ಇದ್ದರೆ ಎಷ್ಟು ಚೆಂದವಿರುತ್ತಿತ್ತು ಎನ್ನುತ್ತಾಳೆ. ವಾಮನ ತಥಾಸ್ತು ಎನ್ನುತ್ತಾನೆ.

ಬಳಿಕ ವಾಮನ ಬಲೀಂದ್ರನ ಬಳಿ ಮೂರು ಗಜ ಭೂಮಿ ಬೇಕು ಎಂದು ಕೇಳಿ, ತ್ರಿಲೋಕವನ್ನೇ ತನ್ನ ವಶಕ್ಕೆ ಮಾಡಿಕೊಳ್ಳುತ್ತಾನೆ. ಆಗ ಬಲೀಂದ್ರನ ಮಗಳಿಗೆ ಕೋಪ ಬರುತ್ತದೆ. ಆಕೆ, ಈತನೇನಾದರೂ ನನ್ನ ಮಗನಾಗಿ ಇದ್ದಿದ್ದರೆ, ಇವನು ಮಾಡಿದ ಕೆಲಸಕ್ಕೆ ಇವನಿಗೆ ಹಾಲಿನಲ್ಲಿ ವಿಷ ಬೆರೆಸಿ ಕೊಡುತ್ತಿದ್ದೆ ಎನ್ನುತ್ತಾಳೆ. ಆಗಲೂ ವಾಮನ ತಥಾಸ್ತು ಎನ್ನುತ್ತಾನೆ.

ಇದೇ ಕಾರಣಕ್ಕೆ ರತ್ನಮಾಲಾ, ಮುಂದಿನ ಜನ್ಮದಲ್ಲಿ ಪೂತನಿ ಎಂಬ ರಾಕ್ಷಸಿಯಾಗಿ ಜನ್ಮ ಪಡೆದು, ಕಂಸನ ಆದೇಶದಂತೆ, ಕೃಷ್ಣನಲ್ಲಿಗೆ ಬಂದು, ಆತನನ್ನು ತಾಯಿಯಂತೆ ಆಟವಾಡಿಸುತ್ತಾಳೆ. ಅಲ್ಲಿಗೆ ನನಗೂ ಮುದ್ದಾದ ಮಗು ಬೇಕಿತ್ತು ಎಂಬ ಆಕೆಯ ಆಸೆ ಈಡೇರುತ್ತದೆ. ಬಳಿಕ ಆಡುತ್ತ ಆಡುತ್ತ, ಸ್ತನ ಪಾನ ಮಾಡಿಸಲು ಶುರು ಮಾಡುತ್ತಾಳೆ. ಆದರೆ ಆ ಎದೆಹಾಲಿನಲ್ಲಿ ವಿಷವಿರುತ್ತದೆ. ಅಲ್ಲಿಗೆ ಆಕೆಯ ಎರಡನೇಯ ಮಾತು ನಿಜವಾಗುತ್ತದೆ. ಕೊನೆಗೆ ಶ್ರೀಕೃಷ್ಣ ಸ್ತನಪಾನ ಮಾಡುತ್ತಲೇ, ಆಕೆಯ ಸಂಹಾರ ಮಾಡುತ್ತಾನೆ.

- Advertisement -

Latest Posts

Don't Miss