ಕೇಕ್ ಅಂದ್ರೆ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಹಲವರಿಗೆ ಅಚ್ಚುಮೆಚ್ಚು. ಕೆಲವರಂತೂ ಮನೆಯಲ್ಲಿ ನಡೆಯುವ ಪ್ರತೀ ಸಮಾರಂಭದಲ್ಲೂ ಕೇಕ್ ಕಟ್ ಮಾಡಸ್ತಾರೆ. ವಾರಕ್ಕೊಮ್ಮೆಯಾದರೂ ಕೇಕ್ ತಿನ್ನಬೇಕು ಅನ್ನುವವರಿದ್ದಾರೆ. ಜೊತೆಗೆ ಪ್ರತಿದಿನ ಕೇಕ್ ತಿನ್ನುವವರೂ ಇದ್ದಾರೆ. ಆದ್ರೆ ಪ್ರತಿದಿನ ಕೇಕ್ ತಿನ್ನೋದು ಎಷ್ಟು ಡೇಂಜರ್ ಅನ್ನೋ ಬಗ್ಗೆ ನಾವಿವತ್ತು ಹೇಳಲಿದ್ದೇವೆ..
ಯಾವತ್ತಾದರೂ ಒಂದು ದಿನ ಕೇಕ್ ತಿಂದರೆ ಪರ್ವಾಗಿಲ್ಲಾ. ಆದ್ರೆ ಪ್ರತೀ ದಿನ ಕೇಕ್ ತಿನ್ನುವ ಚಟ ಇದೆಯಲ್ಲ, ಅದಕ್ಕಿಂತ ಡೇಂಜರ್ ಇನ್ಯಾವುದು ಇಲ್ಲ. ಕೆಲವರು ಪ್ರತಿದಿನ ಸ್ವೀಟ್ ತಿನ್ನುವ ಚಟ ಹೊಂದಿರುತ್ತಾರೆ. ಪ್ರತಿದಿನ ಸ್ವೀಟ್ ತಿಂದರೂ, ಸ್ವಲ್ಪ ಸ್ವಲ್ಪ ತಿನ್ನಬೇಕು. ಮತ್ತು ಆ ಸ್ವೀಟ್ ಮನೆಯಲ್ಲೇ ತಯಾರಿಸಿದ್ದರೆ ಇನ್ನೂ ಒಳ್ಳೆದು. ಆದ್ರೆ ಕೇಕ್ ಅನ್ನೋದು ಸ್ವೀಟ್ ಲೀಸ್ಟ್‌ನಲ್ಲಿ ಬರೋದಿಲ್ಲ. ಬದಲಾಗಿ ಇದು ಬೇಕರಿ ತಿಂಡಿ. ಅದರಲ್ಲೂ ಮೈದಾದಿಂದ ತಯಾರಾದ ತಿನಿಸು.
ಈ ಕೇಕ್‌ನ್ನ ನೀವು ರಾತ್ರಿ ಊಟದ ಬಳಿಕ ತಿನ್ನೋದಂತೂ ಇನ್ನು ಕೆಟ್ಟದ್ದು. ರಾತ್ರಿ ಊಟವಾದ ಬಳಿಕ ನೀವು ಕೇಕ್ ತಿಂದರೆ, ನಿಮ್ಮ ದೇಹದ ತೂಕ ಹೆಚ್ಚುತ್ತದೆ. ಒಂದು ತಿಂಗಳು ಪ್ರತಿದಿನ ರಾತ್ರಿ ಊಟದ ಬಳಿಕ ನೀವು ಕೇಕ್ ತಿಂದಲ್ಲಿ, ನಿಮ್ಮ ದೇಹದ ತೂಕ ಎರಡು ಕೆಜಿ ಹೆಚ್ಚುತ್ತದೆ. ಇದೇ ರೀತಿ ತೀವ್ರಗತಿಯಲ್ಲಿ ನಿಮ್ಮ ದೇಹದ ತೂಕ ಹೆಚ್ಚುತ್ತದೆ. ಅಲ್ಲದೇ, ಮಾನಸಿಕ ಖಿನ್ನತೆ, ಬೊಜ್ಜು, ಉದ್ವೇಗದ ಸ್ವಭಾವವೂ ಉಂಟಾಗುತ್ತದೆ. ಒಟ್ಟಿನಲ್ಲಿ ವೇಗವಾಗಿ ನಿಮ್ಮ ಆರೋಗ್ಯ ಹಾಳಾಗುತ್ತದೆ.
ಇಷ್ಟೇ ಅಲ್ಲದೇ, ಕೇಕ್‌ನಲ್ಲಿ ಹೆಚ್ಚಿನ ಅಂಶ ಫ್ಯಾಟ್ ಇರುತ್ತದೆ. ಇದು ಬೊಜ್ಜು ಮತ್ತು ಹೃದಯ ಸಂಬಂಧಿ ಖಾಯಿಲೆ ಬರಲು ಕಾರಣವಾಗುತ್ತದೆ. ಹಾಗಾಗಿ ರಾತ್ರಿ ಊಟವಾದ ಬಳಿಕ ಕೇಕ್ ತಿನ್ನುವುದು ಯಾಾವುದೇ ಕಾರಣಕ್ಕೂ ಒಳ್ಳೆಯದಲ್ಲ.