ಕೂಗುವವರಿಗೆ ವಿಧಾನಸೌಧ ಆದರೇನು? ಬೇರೆ ಎಲ್ಲಾದರೇನು? ಅಪರಾಧ ಅಪರಾಧವೇ: ಸಿಎಂ

Political News: ನಿನ್ನೆ ರಾಜ್ಯಸಭಾ ಚುನಾವಣೆ ಮುಗಿದಿದ್ದು, ಕಾಂಗ್ರೆಸ್ 3 ಸೀಟು ಗೆದ್ದಿದೆ. ಅದರಲ್ಲಿ ನಾಸೀರ್ ಹುಸೇನ್ ಗೆಲುವು ಸಾಧಿಸಿದ್ದು, ವಿಧಾನಸೌಧದಲ್ಲಿ ನಾಸಿರ್ ಅವರಿಗೆ ಹೂಮಾಲೆ ಹಾಕಿ, ಬೆಂಬಲಿಗರು ಸನ್ಮಾನಿಸಿದ್ದಾರೆ. ಆದರೆ ಇದೇ ವೇಳೆ ನಾಸಿರ್ ಬೆಂಬಲಿಗರು ಪಾಕಿಸ್ತಾನ್ ಜಿಂದಾಬಾದ್ ಎಂಬ ಘೋಷಣೆ ಕೂಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಸಿಎಂ ಸಿದ್ದರಾಮಯ್ಯ, ಪಾಕಿಸ್ತಾನದ ಪರವಾಗಿ ಘೋಷಣೆ ನಿಜವೇ ಆಗಿದ್ದರೆ ಅಂಥವರನ್ನು ರಕ್ಷಿಸುವ ಪ್ರಶ್ನೆಯೇ ಇಲ್ಲ. ಎಫ್. ಎಸ್ .ಎಲ್ ವರದಿ ಬಂದ ನಂತರ ಘೋಷಣೆ ಕೂಗಿದ್ದು ನಿಜವೇ ಆಗಿದ್ದರೆ ಈ ಬಗ್ಗೆ ಗಂಭೀರ ಕ್ರಮ ವಹಿಸಲಾಗುವುದು. ಕೂಗುವವರಿಗೆ ವಿಧಾನಸೌಧ ಆದರೇನು? ಬೇರೆ ಎಲ್ಲಾದರೇನು? ಅಪರಾಧ ಅಪರಾಧವೇ. ರಾಷ್ಟ್ರದ ವಿರುದ್ಧ ಘೋಷಣೆ ಕೂಗಿರುವುದು ಸಾಬೀತಾದರೆ ಯಾರೇ ಆಗಲಿ ಅಂಥವರ ಮೇಲೆ ಕಠಿಣ ಕ್ರಮ ವಹಿಸಲಾಗುವುದು.

ದೇಶದ್ರೋಹಿಗಳಿಗೆ ವಿಧಾನಸಭೆಯಲ್ಲಿ ಜಾಗ ಕೊಟ್ಟಿರುವುದು ಆತಂಕಕಾರಿ ಬೆಳವಣಿಗೆ: ಬಸವರಾಜ್ ಬೊಮ್ಮಾಯಿ

ರಾಜ್ಯದ ರಕ್ಷಣೆಗಾಗಿ ಕಾಂಗ್ರೆಸ್ಸಿಗರೇ ವಿಧಾನಸೌಧ ಬಿಟ್ಟು ತೊಲಗಿ: ಬಿಜೆಪಿ ನಾಯಕರ ಆಕ್ರೋಶ

ಪಾಕ್‌ ಪರ ಘೋಷಣೆ ಕೂಗಿದವರನ್ನು ಒದ್ದು ಒಳಗೆ ಹಾಕಿ -ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಆಗ್ರಹ

About The Author