Tuesday, October 22, 2024

Latest Posts

ಬ್ಲಡ್ ಲೈನ್ ಹೀಲಿಂಗ್ ಎಂದರೇನು..? ಪಿತೃದೋಷ, ಶಾಪ ವಿಮೋಚನೆ ಹೇಗೆ ನಿವಾರಣೆ ಮಾಡಲಾಗುತ್ತದೆ..?

- Advertisement -

Spiritual: ಕೆಲವರ ಜೀವನದಲ್ಲಿ ಅದೆಷ್ಟು ಕಷ್ಟ ಉದ್ಭವಿಸುತ್ತದೆ ಎಂದರೆ, ಮನೆಯಲ್ಲಿ ಸಾದಾಕಾಲ ಜಗಳ, ಅತ್ಯಂತ ಕೆಟ್ಟ ಆರ್ಥಿಕ ಪರಿಸ್ಥಿತಿ , ಮನೆಯಲ್ಲಿ ಒಬ್ಬರಾದ ಮೇಲೆ ಒಬ್ಬರಿಗೆ ಆರೋಗ್ಯ ಸಮಸ್ಯೆ. ವಯಸ್ಸಾದರೂ ಮಕ್ಕಳಿಗೆ ಸಿಗದ ಮದುವೆ ಭಾಗ್ಯ. ಮದುವೆಯಾದ ಬಳಿಕ, ಸಂತಾನ ಸಮಸ್ಯೆ. ಹೀಗೆ ಒಂದು ದಿನವೂ ನೆಮ್ಮದಿ ಇಲ್ಲದೇ, ಬದುಕುವ ಪರಿಸ್ಥಿತಿ ಇರುತ್ತದೆ. ಅಂಥವರು ಎಲ್ಲಿ ಹೋದರೂ ಪರಿಹಾರ ಸಿಗದಿದ್ದಲ್ಲಿ, ಬ್ಲಡ್ ಲೈನ್ ಹೀಲಿಂಗ್ ಮಾಡಿಸಿಕೊಳ್ಳುತ್ತಾರೆ. ಹಾಗಾದ್ರೆ ಬ್ಲಡ್ ಲೈನ್ ಹೀಲಿಂಗ್ ಎಂದರೇನು ಅಂತಾ ತಿಳಿಯೋಣ ಬನ್ನಿ..

ಬ್ಲಡ್ ಲೈನ್ ಹೀಲಿಂಗ್ ಎಂದರೆ, ನಿಮ್ಮ ಸಮಸ್ಯೆಯನ್ನು ಕೇಳಿ ಅದಕ್ಕೆ ಪರಿಹಾರ ಒದಗಿಸುವ ಕೆಲಸ. ಈ ವಿದ್ಯೆ ಅರಿತವರು, ನಿಮ್ಮ ಸಮಸ್ಯೆ ಕೇಳಿ, ನಿಮ್ಮ ಬಳಿಯೇ ನಿಮ್ಮ ಪೂರ್ವಜರನ್ನು ಬರಲು ಹೇಳಿ, ಅವರೊಂದಿಗೆ ಮನಸ್ಸಿನಲ್ಲಿಯೇ ಮಾತನಾಡುತ್ತಾರೆ. ಆ ಪೂರ್ವಜರ ಆತ್ಮ ನಿಮ್ಮ ಕಣ್ಣಿಗೆ ಕಾಣದಿದ್ದರೂ, ವಿದ್ಯೆ ಅರಿತವರ ಬಳಿ ಬಂದು ಮಾತನಾಡುತ್ತದೆ.

ಮತ್ತು ನಿಮ್ಮ ಜೀವನ ಸಮಸ್ಯೆಗಳಿಗೆ ಏನು ಕಾರಣ ಅಂತಾ ಹೇಳುತ್ತದೆ. ಅಲ್ಲದೇ, ಅದಕ್ಕೆ ಪರಿಹಾರ ಏನು ಎಂಬುದು ಕೂಡ ಆ ಪೂರ್ವಜರ ಆತ್ಮ ಹೇಳುತ್ತದೆ. ಈ ರೀತಿ ಪರಿಹಾರ ಮಾಡಿಸಿಕೊಂಡರೆ, ಜೀವನದ ಎಲ್ಲ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಅಲ್ಲದೇ, ಕೆಲವರ ಸಾವು ಹೇಗೆ ಸಂಭವಿಸುತ್ತದೆ ಎಂದು ಗೊತ್ತಾಗುವುದಿಲ್ಲ. ಅಂಥವರ ಆತ್ಮದ ಜೊತೆ ಮಾತನಾಡಿದಾಗ, ಅವರ ಸಾವು ಯಾರಿಂದ ಆಗಿದ್ದು, ಅವರು ಇನ್ಯಾರ ಸಾವಿಗೆ ಉಪಾಯ ಹೂಡಿದ್ದಾರೆ. ಏನೇನು ತೊಂದರೆ ಕೊಡುತ್ತಾರೆ ಅಂತಲೂ, ಆ ಆತ್ಮ ಹೇಳುತ್ತದೆ.

ಇನ್ನು ಈ ವಿದ್ಯೆ ಕಲಿತವರು ಆತ್ಮದ ಜೊತೆ ಮಾತನಾಡುತ್ತಾರೆ. ಹಾಗಾಗಿ ಕೆಲವು ಕವಚಗಳನ್ನು ಹಾಕಿಕೊಳ್ಳುತ್ತಾರೆ. ತಮ್ಮ ಮನೆಯಲ್ಲಿ ಮಡಿ ಮೈಲಿಗೆ ಆಚರಿಸುತ್ತಾರೆ. ಮಾಂಸಾಹಾರ ಸೇವನೆ ಮಾಡುವುದಿಲ್ಲ. ಹಲವು ರೀತಿಯ ಮಂತ್ರ ಪಠಣೆ ಮಾಡಿ, ಕೆಲವು ಆಭರಣಗಳನ್ನು ಧರಿಸಿ, ಬಳಿಕ ಬ್ಲಡ್ ಲೈನ್ ಹೀಲಿಂಗ್ ಮಾಡಲು ಶುರು ಮಾಡುತ್ತಾರೆ. ಹಾಗಾಗಿ ಇವರಿಗೆ ಆ ಆತ್ಮಗಳಿಂದ ಯಾವುದೇ ತೊಂದರೆಯುಂಟಾಗುವುದಿಲ್ಲ.

ಇನ್ನು ನಿಮಗೆ ಯಾರಾದರೂ ಶಾಪ ಕೊಟ್ಟಿದ್ದರೂ ಅದು ಅವರಿಗೆ ಗೊತ್ತಾಗುತ್ತದೆ. ಅದಕ್ಕೆ ಕೆಲವು ಬಾರಿ ಕೆಲವು ಪರಿಹಾರಗಳಿದ್ದರೆ, ಇನ್ನು ಕೆಲವು ಬಾರಿ, ಕ್ಷಮೆಯಾಚನೆಯೇ ಪರಿಹಾರವಾಗಿರುತ್ತದೆ. ಪ್ರಪಂಚದಲ್ಲಿ ಇರುವ ಎಲ್ಲಾ ಸಮಸ್ಯೆಗಳಿಗೂ ಹಿಂದೂ ಧರ್ಮದಲ್ಲಿ ಪರಿಹಾರವಿದೆ. ಅದಕ್ಕೆ ಹಿಂದೂ ಧರ್ಮವನ್ನು ಸನಾತನ ಧರ್ಮವೆಂದು ಹೇಳಲಾಗುತ್ತದೆ.

- Advertisement -

Latest Posts

Don't Miss