Health tips:
ರಕ್ತ ಕಣಗಳಲ್ಲಿ ಕೆಂಪು ರಕ್ತ ಕಣಗಳು ,ಬಿಳಿ ರಕ್ತ ಕಣಗಳು, ಪ್ಲೇಟ್‌ಲೆಟ್ ಎಂಬ ಮೂರುವಿಧವಾದ ಕಣಗಳು ಇರುತ್ತದೆ ಇವು ಮೂಳೆಯ ಮಧ್ಯಭಾಗ (ಬೋನ್ ಮ್ಯಾರೋ) ದಿಂದ ಉತ್ಪತ್ತಿ ಯಾಗುತ್ತದೆ. ಬಿಳಿ ರಕ್ತಕಣಗಳು ರೋಗನಿರೋಧಕವಾಗಿ ಮನುಷ್ಯನ ಶರೀರದಲ್ಲಿ ಕಾರ್ಯ ನಿರ್ವಹಿಸುತ್ತದೆ ಹಾಗು ಮನುಷ್ಯನ ದೇಹವನ್ನು ರೋಗಗಳಿಂದ ರಕ್ಷಿಸುತ್ತದೆ .ಕೆಂಪುರಕ್ತಕಣಗಳು ರಕ್ತಕಣಗಳಲ್ಲಿರುವ ಹಿಮೋಗ್ಲೋಬಿನ್ ನಿಂದ ಇಡೀ ದೇಹಕ್ಕೆ ಬೇಕಾದ oxyigen ಅನ್ನು ಪುರೈಸುತ್ತದೆ.ಹಾಗು ಪ್ಲೇಟ್‌ಲೆಟ್‌ಗಳು ದೇಹದಲ್ಲಿ ಗಾಯವಾದಾಗ ರಕ್ತವನ್ನು ಹೆಪ್ಪುಗಟ್ಟಲು ಸಹಾಯ ಮಾಡುತ್ತಾದೆ . ಪ್ರತಿಯೊಬ್ಬ ವ್ಯಕ್ತಿಯಲ್ಲೂ ಇದು ಭಿನ್ನಭಿನ್ನವಾಗಿರುತ್ತದೆ .ಸಾಮಾನ್ಯವಾಗಿ, ಒಬ್ಬ ವ್ಯಕ್ತಿಯಲ್ಲಿ 1.5 ಲಕ್ಷದಿಂದ 4.5 ಲಕ್ಷದವರೆಗೆ ಪ್ಲೇಟ್‌ಲೆಟ್ ಇರುತ್ತದೆ. ಇದು ಒಂದೊಂದು ದಿನ ಒಂದೊಂದು ರೀತಿಯಾಗಿ ಬದಲಾಗುತ್ತಿರುತ್ತದೆ ಪ್ಲೇಟ್ಲೆಟ್ ಜೀವಕೋಶದ ಜೀವಿತಾವಧಿಯು ಏಳರಿಂದ ಹತ್ತು ದಿನಗಳು ಮಾತ್ರ ನಂತರ ಅದು ಸಾವನ್ನಪ್ಪಿ ಹೊಸದಾಗಿ ರೂಪುಗೊಳ್ಳುತ್ತದೆ .
ದೇಹದ ಯಾವ ಭಾಗದಲ್ಲೇ ಆಗಲಿ ಗಾಯವಾದಾಗ ಸ್ವಲ್ಪ ಸಮಯದವರೆಗೆ ರಕ್ತಸ್ರಾವವಾಗುತ್ತದೆ ನಂತರ ತನ್ನಷ್ಟಕ್ಕೆ ತಾನೇ ರಕ್ತ ಹೆಪ್ಪುಗಟ್ಟುತ್ತದೆ ಹೀಗೆ ರಕ್ತ ಹೆಪ್ಪು ಗಟ್ಟುವಿಕೆಗೆ ಪ್ಲೇಟ್‌ಲೆಟ್‌ಗಳು ಸಹಾಯ ಮಾಡುತ್ತದೆ ಹಾಗು ದೇಹದಲ್ಲಿ ತುಂಬಾ ಕಡಿಮೆ ಪ್ಲೇಟ್‌ಲೆಟ್‌ಗಳು ಇದ್ದಾಗ ಅವು ತಮ್ಮ ಕಾರ್ಯವನ್ನು ಸರಿಯಾಗಿ ನಿರ್ವಹಿಸದಿದ್ದರೆ ಯಾವುದೇ ಗಾಯವಿಲ್ಲದಿದ್ದರು ರಕ್ತಸ್ರಾವ ಆರಂಭವಾದರೆ ನಿಲುವುದಿಲ್ಲ. ದೇಹದಲ್ಲಿ ಪ್ಲೇಟ್ ಲೆಟ್ ಕಡಿಮೆಯಾಗಲು ಹಲವು ಕಾರಣಗಳಿದೆ ಡೆಂಗ್ಯೂ, ಮಲೇರಿಯಾ, ವೈರಲ್ ಸೋಂಕುಗಳು ಇತ್ಯಾದಿಗಳಿಂದ ದೇಹದಲ್ಲಿ ಪ್ಲೇಟ್‌ಲೆಟ್‌ಗಳು ಕಡಿಮೆಯಾಗುತ್ತವೆ. ಕೆಲವರಲ್ಲಿ ಪ್ಲೇಟ್‌ಲೆಟ್‌ಗಳು ಹುಟ್ಟಿನಿಂದಲು ಕಡಿಮೆ ಇರುತ್ತದೆ ಹಾಗು ಇನ್ನು ಕೆಲವರಲ್ಲಿ ಕೆಲವು ಔಷಧಿಗಳ ಬಳಕೆಇಂದ ಪ್ಲೇಟ್‌ಲೆಟ್‌ಗಳ ಸಂಖ್ಯೆಯು ಕಡಿಮೆ ಯಾಗುತ್ತದೆ ಸಾಮಾನ್ಯವಾಗಿ ಹೃದಯ ಸಂಬಂದಿ ರೋಗಿಗಳು ರಕ್ತ ತೆಳುವಾಗುವುದ್ದಕ್ಕೆ ಉಪಯೋಗಿಸುವ ಮೆಡಿಸಿನ್ ಗಳಿಂದ ಪ್ಲೇಟ್‌ಲೆಟ್‌ಗಳ ಉತ್ಪತ್ತಿ ಕಡಿಮೆಯಾಗುವ ಸಾಧ್ಯತೆಗಳಿರುತ್ತದೆ,
ಪ್ಲೇಟ್‌ಲೆಟ್‌ಗಳ ಸಂಖ್ಯೆ ಕಡಿಮೆಯಾದರೆ ಅವರಲ್ಲಿ ಕಾಣಿಸುವ ಲಕ್ಷಣಗಳು :
ಸಾಮಾನ್ಯವಾಗಿ ಪ್ಲೇಟ್ ಲೆಟ್ ಸಂಖ್ಯೆ ಹತ್ತು ಸಾವಿರಕ್ಕಿಂತ ಕಡಿಮೆಯಾಗುವವರೆಗೆ ವ್ಯಕ್ತಿಗೆ ಯಾವುದೇ ರೋಗಲಕ್ಷಣಗಳು ಕಂಡುಬರುವುದಿಲ್ಲ ಒಂದುವೇಳೆ ಅದಕ್ಕಿಂತ ಕಡಿಮೆಯಾದರೆ ದೇಹದ ವಿವಿಧ ಅಂಗಗಳ ಒಳಪದರಗಳಿಂದ ರಕ್ತಸ್ರಾವ ಪ್ರಾರಂಭವಾಗುತ್ತದೆ. ಬಾಯಿಯ ಒಳಪದರ, ಒಸಡುಗಳು ಮತ್ತು ಮೂಗಿನ ಒಳಪದರದಿಂದ ರಕ್ತಸ್ರಾವ ಸಂಭವಿಸಬಹುದು. ಪ್ಲೇಟ್ ಲೆಟ್ ಸಂಖ್ಯೆ ಕಡಿಮೆಯಾದರು ಕೆಲವರಲ್ಲಿ ಯಾವುದೇ ರೀತಿಯ ರೋಗಲಕ್ಷಣಗಳಿರುವುದಿಲ್ಲ .ಡೆಂಗ್ಯೂ ಇದ್ದಾಗ ತೀವ್ರ ಜ್ವರ ಮತ್ತು ಮೈ ಕೈ ನೋವು ಇರುತ್ತದೆ ಆ ಸಂದರ್ಭದಲ್ಲಿ, ಪ್ಲೇಟ್‌ಲೆಟ್‌ಗಳ ಸಂಖ್ಯೆಯನ್ನು ಪರೀಕ್ಷಿಸಿ ವೈದ್ಯರ ಬಳಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಬೇಕು.
ಸಕ್ಕರೆ ಸ್ಲೋ ಪಾಯಿಸನ್..?! ಸಕ್ಕರೆ ಬಳಸೋಕು ಮುನ್ನ ಈ ವಿಷಯದ ಬಗ್ಗೆ ತಿಳಿದುಕೊಳ್ಳಿ..!