Hubballi News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಮಾಜಿ ಸಿಎಮ್ ಜಗದೀಶ್ ಶೆಟ್ಟರ್ ಸುದ್ದಿಗೋಷ್ಠಿ ನಡೆಸಿದ್ದು, ಬಿಜೆಪಿ ನಾಯಕರು ಮಾಡಿದ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ.
ನಾನು ಯಾರನ್ನು ಕರೀತಿಲ್ಲ, ಅವರ ಸ್ವಇಚ್ಛೆಯಿಂದ ನನ್ನ ಸಂಪರ್ಕ ಮಾಡ್ತಿದ್ದಾರೆ. ಜೋಶಿ ಅವರು ಬಹಳ ಜವಾಬ್ದಾರಿ ಸ್ಥಾನದಲ್ಲಿದಾರೆ. ಐಟಿ ರೇಡ್ ಇದೆಲ್ಲ ಮೋದಿ ಅವರ ಕೈಯಲ್ಲಿದೆ. ಜೋಶಿ ಅವರು ಇಂತಹ ಗಂಭೀರ ಆರೋಪ ಮಾಡಿದ್ದಾರೆ ಎಂದು ಶೆಟ್ಟರ್ ಹೇಳಿದ್ದಾರೆ.
ಪಂಚರಾಜ್ಯ ಚುನಾವಣೆ,ಲೋಕಸಭೆ ಚುನಾವಣೆಗೆ 1000 ಕೋಟಿ ಸಂಗ್ರಹ ಮಾಡ್ತಿದ್ದಾರೆ ಅನ್ನೋ ಜೋಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಶೆಟ್ಟರ್, ಇದು ಜೋಶಿ ಅವರಿಗೆ ಶೋಭೆ ತರುವಂತದಲ್ಲ. ಇದು ಬಹಳ ಸೂಕ್ಷ್ಮ ವಿಚಾರ, ಇದಕ್ಕೆ ಎವಿಡೆನ್ಸ್ ಏನಿದೆ..? ರಾಜಕೀಯ ವ್ಯವಸ್ಥೆ ಕುಲಗೆಟ್ಟು ಹೋಗಿದೆ. ಕೇಂದ್ರ ಸರ್ಕಾರ ಬಂದ ಮೇಲೆ ಎಷ್ಟು IT ರೇಡ್ ಆಗಿದೆ. ಅದನ್ನು ಇಲ್ಲಿವರೆಗೂ ಬಹಿರಂಗ ಮಾಡಿಲ್ಲ.
ನಾಲ್ಕು ದಿನ ಸುದ್ದಿಯಾಗತ್ತೆ, ಮುಂದೆ ಏನು..? ಕೊನೆಯ ರಿಸಲ್ಟ್ ಏನ್ ಅದು, ಯಾರಿಗೆ ದಂಡ ಹಾಕೀರಿ..? ಇದನ್ನು ಬಹಿರಂಗ ಮಾಡ್ತೀರಾ, ರಾಜಕೀಯ ಹದಗೆಟ್ಟು ಹೋಗಿದೆ. ಚುನಾವಣೆಯಲ್ಲಿ ಹಣ ಖರ್ಚು ಮಾಡ್ತೀರೀ.. ನಿಮಗೆ ಆತ್ಮಸಾಕ್ಷಿ ಇದ್ರೆ ಹೇಳಿ. ಚುನಾವಣೆಗೆ ಹಣ ಖರ್ಚು ಮಾಡಿಲ್ವಾ..? ನನಗೆ CBI ತನಿಖೆ ಮಾಡಬೇಕು ಅಂತಾರೆ. ನಮಗೆ ಇದು ಅರ್ಥ ಆಗ್ತಿಲ್ಲ.. ನೀವೆನು ನೂರಕ್ಕೆ ನೂರರಷ್ಟು ಸತ್ಯ ಹರಿಶ್ಚಂದ್ರರಾ..? ಎಂದು ಶೆಟ್ಟರ್ ಮರುಪ್ರಶ್ನಿಸಿದ್ದಾರೆ.
ಪ್ರತಿಭಟನೆ ಮಾಡೋಕೆ ನಿಮಗೆ ನೈತಿಕತೆ ಇಲ್ಲ. ಯಾರ ನೇತೃತ್ವದಲ್ಲಿ ಪ್ರತಿಭಟನೆ ಮಾಡ್ತೀರಿ,ನಿಮ್ಮ ರಾಜ್ಯಾಧ್ಯಕ್ಷ ಯಾರು..?ವಿಪಕ್ಷ ನಾಯಕ ಯಾರು? ಯಾಕೆ ಪ್ರತಿಭಟನೆ ಮಾಡ್ತೀರಿ..? ಕಳೆದ ಸರ್ಕಾರದಲ್ಲಿ ಪೇ ಸಿಎಮ್ ಅಭಿಯಾನ ಆಯ್ತು. ಜನ ನಿಮ್ಮನ್ನ ತಿರಸ್ಕಾರ ಮಾಡಿದ್ರು. ಇದೀಗ ಪ್ರತಿಭಟನೆ ಮಾಡ್ತೀರಿ, ಯಾರ ನೇತೃತ್ವದಲ್ಲಿ ಎಂದು ಶೆಟ್ಟರ್ ಪ್ರಶ್ನಿಸಿದ್ದಾರೆ.
ಜನ ತಿರಸ್ಕಾರ ಮಾಡಿ ಮನೆಗೆ ಕಳಸಿದ್ರು, ಭ್ರಷ್ಟಾಚಾರದ ಬಗ್ಗೆ ಮಾತಾಡೋಕೆ ಏನು ನೈತಿಕತೆ ಇದೆ..? ಚುನಾವಣೆಗೆ ಹಣ ಸಂಗ್ರಹ ಮಾಡಿದ್ರು ಅಂದುಕೊಳ್ಳಿ. IT ನಿಮ್ಮ ಕಂಟ್ರೋಲ್ ಇದೆ ಬಹಿರಂಗ ಮಾಡಿ. IT ಅವರ ಏನಾದರೂ ಯಾರ ಹಣ ಅಂತಾ ಹೇಳಿದ್ದಾರೆ. ಇದರಲ್ಲಿ ರಾಜಕಾರಣ ಮಾಡೋದು ಬೇಡಾ. ರಾಜಕಾರಣಕ್ಕಾಗಿ ಮಾತಾಡ್ತಾರೆ ಅಂದ್ರೆ ರಾಜಕಾರಣ ಕುಲಗೆಟ್ಟು ಹೋಗಿದೆ ಎಂದ ಜಗದೀಶ್ ಶೆಟ್ಟರ್.. ಹೆಸ್ಕಾಂ ಬೆಸ್ಕಾಂ ಬಿಜೆಪಿ ಸರ್ಕಾರದಲ್ಲೂ ಪ್ರಾಫಿಟ್ ಅಲ್ಲಿ ಇಲ್ಲ..ೠ ಎಲ್ಲ ಸರಕಾರದಲ್ಲೂ ಲಾಸ್ ನಲ್ಲಿವೆ.. ಮಳೆಯಾಗದ ಕಾರಣ ವಿದ್ಯುತ್ ಅಭಾವ ಸಹಜ. ಬೇರೆ ಮಾರ್ಗದಿಂದ ವಿದ್ಯುತ್ ಖರೀದಿ ಮಾಡ್ತಿದ್ದಾರೆ ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.
‘ಕಾಂಗ್ರೆಸ್ ಗೆದ್ದರೆ ಕರ್ನಾಟಕವನ್ನು ಎಟಿಎಂ ಮಾಡುತ್ತೆ ಅಂತಾ ಹೇಳಿದ್ವಿ. ಅದು ಈಗ ನಿಜವಾಗಿದೆ’
ಮಕ್ಕಳು ಬುದ್ಧಿವಂತರಾಗಿರಬೇಕು ಅಂದ್ರೆ ಇಂಥ ಆಹಾರ ಕೊಡುವುದನ್ನು ನಿಲ್ಲಿಸಿ..