Friday, November 22, 2024

Latest Posts

‘ಇಂಗ್ಲೀಷ್ ಜೊತೆಗೆ ಕನ್ನಡದಲ್ಲಿ ನಾಮಫಲಕ ಹಾಕಿದರೆ ಏನು ತೊಂದರೆ? ಇದು ಬ್ರಿಟನ್ ಅಥವಾ ಇಂಗ್ಲೆಂಡ್ ಅಲ್ಲ’

- Advertisement -

Political News: ಬೆಂಗಳೂರಿನಲ್ಲಿ ಕನ್ನಡ ನಾಮಫಲಕಗಳನ್ನು ಹಾಕದೇ, ಬರೀ ಇಂಗ್ಲೀಷಿನಲ್ಲಿ ಬೋರ್ಡ್ ಹಾಕಿದವರ ವಿರುದ್ಧ ನಿನ್ನೆ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದರು. ಇದರ ಬಗ್ಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕೂಡ ಹೇಳಿಕೆ ಕೊಟ್ಟಿದ್ದು, ಕರ್ನಾಟಕದಲ್ಲಿರುವ ಪ್ರತಿಯೊಬ್ಬರು ತಮ್ಮ ಅಂಗಡಿಗೆ ಇಂಗ್ಲೀಷ್ ಜೊತೆಗೆ ಕನ್ನಡದ ನಾಮಫಲಕಗಳನ್ನು ಅಳವಡಿಸಬೇಕು. ಏಕೆಂದರೆ ಎಲ್ಲರಿಗೂ ಇಂಗ್ಲೀಷ್ ಬರುವುದಿಲ್ಲ. ಹಾಗಾಗಿ ಕನ್ನಡ, ಇಂಗ್ಲೀಷ್ ಎರಡೂ ಭಾಷೆಯಲ್ಲಿ ನಾಮಫಲಕ ಬಳಸಬೇಕು ಎಂದಿದ್ದಾರೆ.

20-30% ಅಂಗಡಿಯವರು ಕನ್ನಡದಲ್ಲಿ ಬೋರ್ಡ್ ಹಾಕುವುದಿಲ್ಲ. ಇದು ತಪ್ಪು. ಇಂಗ್ಲೀಷ್ ನ ಜೊತೆಗೆ ಕನ್ನಡದಲ್ಲಿ ಹಾಕಿದರೆ ಏನು ತೊಂದರೆ? ಇದು ಬ್ರಿಟನ್ ಅಥವಾ ಇಂಗ್ಲೆಂಡ್ ಅಲ್ಲ. ಸಂಪೂರ್ಣವಾಗಿ ಇಂಗ್ಲಿಷ್ ನಲ್ಲಿ ಏಕೆ ಹಾಕಬೇಕು? ಎಲ್ಲರಿಗೂ ಇಂಗ್ಲಿಷ್ ಭಾಷೆ ತಿಳಿಯುವುದಿಲ್ಲ ಎಂಬುದನ್ನು ಅಂಗಡಿಯವರು ಅರ್ಥಮಾಡಿಕೊಳ್ಳಬೇಕು. ಆದರೆ ಈ ವಿಚಾರವಾಗಿ ನಡೆಯುತ್ತಿರುವ ಹಿಂಸೆಯನ್ನು ನಾನು ಒಪ್ಪುವುದಿಲ್ಲ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನನಗೆ ಬಂದಿರುವ ಮಾಹಿತಿ ಪ್ರಕಾರ ಕೆಲವು ಅಂಗಡಿಯವರು ಉದ್ದೇಶಪೂರ್ವಕವಾಗಿ ಕನ್ನಡ ಬೋರ್ಡ್ ಹಾಕಲು ಬಯಸುವುದಿಲ್ಲ, ಅದನ್ನು ನಾನು ಒಪ್ಪುವುದಿಲ್ಲ. ಬಹುಪಾಲು ಜನತೆ ಕನ್ನಡ ಮಾತನಾಡುವವರು ಇರುವಾಗ, ಆಂಗ್ಲ ಮತ್ತು ಹಿಂದಿಯೊಂದಿಗೆ ಕನ್ನಡವನ್ನು ಸೇರಿಸುವಲ್ಲಿ ಅವರ ಸಮಸ್ಯೆ ಏನು? ಜನರು ಕೇಳಿದಾಗ ಅವರು ದುರಹಂಕಾರದಿಂದ ವರ್ತಿಸಿದರು. ನಾನು ಹಿಂಸಾಚಾರವನ್ನು ಒಪ್ಪುವುದಿಲ್ಲ, ಆದರೆ ಅವರು ಕನ್ನಡ ಬೋರ್ಡ್‌ಗಳನ್ನು ಪ್ರದರ್ಶಿಸಲು ಏಕೆ ಬಯಸುವುದಿಲ್ಲ? ಇದಕ್ಕೆ ನನಗೆ ಉತ್ತರ ಬೇಕು! ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.

ನಾರಾಯಣಗೌಡ ಸೇರಿ 29 ಜನ ಕರವೇ ಕಾರ್ಯಕರ್ತರಿಗೆ 13 ದಿನ ನ್ಯಾಯಾಂಗ ಬಂಧನ

ಬಿಗ್‌ಬಾಸ್ ಮನೆಯಲ್ಲಿ ಬ್ಲ್ಯಾಂಕೇಟ್ ಮುಚ್ಚಿಕೊಂಡು ಸ್ಪರ್ಧಿಗಳ ಸರಸ..

ಅಯೋಧ್ಯೆ ರೈಲು ನಿಲ್ಧಾಣಕ್ಕೆ ‘ಅಯೋಧ್ಯಾ ಧಾಮ್’ ಎಂದು ಮರುನಾಮಕರಣ

- Advertisement -

Latest Posts

Don't Miss