ಶೆಟ್ಟರ್ ಅವರನ್ನು ಇಕ್ಕಟ್ಟಿಕೆ ಸಿಲುಕಿಸಿದ ವಿಚಾರವಾದರೂ ಏನು..?

Political News: ಬಿಜೆಪಿಯಿಂದ ಕಾಂಗ್ರೆಸ್‌ಗೆ ಹೋಗಿದ್ದ ಮಾಜಿ ಸಿಎಂ ಜಗದೀಶ್ ಶೆಟ್ಟರ್‌, ಮತ್ತೆ ಮರಳಿ ಬಿಜೆಪಿ ಸೇರಿದ್ದಾರೆ. ಈ ಬಗ್ಗೆ ಶೆಟ್ಟರ್ ಜೊತೆ ಕರ್ನಾಟಕ ಟಿವಿ ಸಂದರ್ಶನ ನಡೆಸಿದ್ದು, ಇದರಲ್ಲಿ ಶೆಟ್ಟರ್ ಕೆಲವೊಂದು ರಾಜಕೀಯ ವಿಚಾರದ ಬಗ್ಗೆ ಮಾತನಾಡಿದ್ದಾರೆ. ಯಾವ ವಿಚಾರ ಅವರನ್ನು ಇಕ್ಕಟ್‌ಟಿಗೆ ಸಿಲುಕಿಸಿತ್ತು ಅನ್ನೋ ಬಗ್ಗೆ ಶೆಟ್ಟರ್ ಹೇಳಿಕೆ ನೀಡಿದ್ದಾರೆ.

ಬಿಜೆಪಿ ಬಿಟ್ಟು ಕಾಂಗ್ರೆಸ್‌ಗೆ ತೆರಳಿದ ಬಳಿಕ, ಬಿಜೆಪಿ ನಾಯಕರು, ಕಾರ್ಯಕರ್ತರು ಮರಳಿ ನೀವು ಬಿಜೆಪಿಗೆ ಬರಲೇಬೇಕು ಎಂದು ಒತ್ತಾಯಿಸುತ್ತಿದ್ದರು.  ಖಂಡಿತವಾಗಿಯೂ ನನಗೆ ಆ ರೀತಿಯ ಒತ್ತಡವಿತ್ತು. ಇದೇ ವಿಷಯ ನನ್ನನ್ನು ಇಕ್ಕಟ್ಟಿಗೆ ಸಿಲುಕಿಸಿತ್ತು. ರಾಷ್ಟ್ರೀಯ ನಾಯಕರು ಕೂಡ ನನಗೆ ಬಿಜೆಪಿ ಬರಲು ತುಂಬಾ ಒತ್ತಾಯಿಸಿದ್ದರು. ಅವರ ಮಾತಿಗೆ ಮಣಿದು ನಾನು ಇಂದು ಮತ್ತೆ ಬಿಜೆಪಿಗೆ ಬರಬೇಕಾಯಿತು ಎಂದು ಜಗದೀಶ್ ಶೆಟ್ಟರ್ ಹೇಳಿದ್ದಾರೆ.

ಅಲ್ಲದೇ, ಬಿಜೆಪಿಗೆ ಬಂದ ಬಗ್ಗೆ ಮಾತನಾಡಿರುವ ಶೆಟ್ಟರ್, ನಾನು ಬಿಜೆಪಿಗೆ ಬಂದಿದ್ದೇನೆ. ಪ್ರೀತಿ ವಿಶ್ವಾಸದಿಂದ ನನ್ನನ್ನು ಬರಮಾಡಿಕೊಂಡಿದ್ದಾರೆ. ಮತ್ತು ನಾನು ಕೂಡ ಅನ್‌ಕಂಡಿಶನಲ್ ಆಗಿ ಬಂದಿದ್ದೇನೆ. ಬಿಜೆಪಿಯಿಂದ ಯಾವ ನಿರೀಕ್ಷೆಯನ್ನೂ ಮಾಡಲಿಲ್ಲವೆಂದು ಶೆಟ್ಟರ್ ಹೇಳಿದ್ದಾರೆ. ಆಗ ಸಂದರ್ಶಕರು, ಆ ಪ್ರೀತಿ ವಿಶ್ವಾಸ ಕಾಂಗ್ರೆಸ್‌ನಲ್ಲೂ ಇತ್ತಲ್ಲವಾ ಎಂದು ಕೇಳಿದಾಗ ಉತ್ತರಿಸಿದ ಶೆಟ್ಟರ್, ಹಲವು ವರ್ಷಗಳಿಂದ ನನ್ನ ಮೇಲೆ ಪ್ರೀತಿ ವಿಶ್ವಾಸವಿಟ್ಟಿದ್ದ ಜನರ ನಂಬಿಕೆ ಉಳಿಸಿಕೊಳ್ಳಲು, ಅವರ ಪ್ರೀತಿ, ವಿಶ್ವಾಸ ಮತ್ತೆ ಪಡೆಯಲು ನಾನು ಈ ಕೆಲಸ ಮಾಡಿದ್ದೇನೆ ಎಂದು ಹೇಳಿದ್ದಾರೆ.

34 ವರ್ಷಗಳಿಂದ ಈ ಮನೆಯಲ್ಲಿ ನಾನು ಬೆಳೆದು ಬಂದಿದ್ದೇನೆ. ಅನಿವಾರ್ಯ ಕಾರಣಗಳಿಂದ ನಾನು ಮನೆ ಬಿಟ್ಟು ಹೋಗುವ ಪರಿಸ್ಥಿತಿ ಬಂತು. ಆದರೆ ಈಗ ಮತ್ತೆ ಅದೇ ಪ್ರೀತಿ, ವಿಶ್ವಾಸ, ಗೌರವ ನೀಡುತ್ತೇವೆ ಎಂದು ಕರೆದಾಗ, ನಾನು ಹೇಗೆ ನಿರಾಕರಿಸಲಿ..? ಅದಕ್ಕೆ ಇಲ್ಲಿ ಬಂದಿದ್ದೇನೆ ಎಂದು ಜಗದೀಶ್ ಶೆಟ್ಟರ್‌ ಹೇಳಿದ್ದಾರೆ. ಪೂರ್ತಿ ಸಂದರ್ಶನ ನೋಡಲು ವೀಡಿಯೋ ಕ್ಲಿಕ್ ಮಾಡಿ.

ಶೆಟ್ಟರ್ ವಿಷಯದಲ್ಲಿ ಡಿಕೆಶಿ- ಸಿದ್ದರಾಮಯ್ಯ ಮಾಡಿದ ತಪ್ಪೇನು..? ಶೆಟ್ಟರ್ ಹೇಳಿದ್ದೇನು..?

ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಚೇರಿಯಲ್ಲಿ ಪೌರ ಕಾರ್ಮಿಕ ಮಹಿಳೆಯಿಂದ ಧ್ವಜಾರೋಹಣ

ಸಂತೋಷ್‌ ಲಾಡ್‌ ಫೌಂಡೇಶನ್‌ನಿಂದ 26 ಎಲೆಕ್ಟ್ರಿಕ್‌ ಆಟೋ ವಿತರಣೆ

About The Author