Health Tips: ಮೊದಲೆಲ್ಲ ವಯಸ್ಸಾದ ಬಳಿಕ ಬೆನ್ನು ನೋವು ಬರುತ್ತಿತ್ತು. ಆದರೆ ಇಂದಿನ ಕಾಲದ ಯುವ ಪೀಳಿಗೆಯವರಿಗೆ ಮದುವೆಗೂ ಮುನ್ನವೇ ಬೆನ್ನು ನೋವು, ಸೊಂಟ ನೋವು ಬರುತ್ತಿದೆ. ಹಾಗಾದ್ರೆ ಪದೇ ಪದೇ ಬೆನ್ನು ನೋವು ಬರಲು ಕಾರಣವೇನು ಅಂತಾ ಪಾರಂಪರಿಕ ವೈದ್ಯರಾದ ಡಾ.ಪವಿತ್ರಾ ಅವರೇ ಹೇಳಿದ್ದಾರೆ ನೋಡಿ.
ಆಫೀಸ್ ಕೆಲಸ, ಡ್ರೈವಿಂಗ್, ಟೈಲರಿಂಗ, ಮನೆಗೆಲಸ ಇವೆಲ್ಲವೂ ಅತೀಯಾದಾಗ, ಬೆನ್ನು ನೋವು ಬರುವುದು ಸಹಜ. ಹಾಗಾಗಿ ಈ ಕೆಲಸಗಳ ಮಧ್ಯೆ ಕೊಂಚ ಬ್ರೇಕ್ ತೆಗೆದುಕೊಳ್ಳಲೇಬೇಕಾಗುತ್ತದೆ. ಕೆಲಸ ಅತೀಯಾದಾಗಲೇ ಈ ರೀತಿ ಆರೋಗ್ಯ ಹಾಳಾಗಲು ಕಾರಣವಾಗುತ್ತದೆ. ಹಾಗಾಗಿ ಕೆಲಸ ಮಾಡುವಾಗ, ಸ್ವಲ್ಪ ಬ್ರೇಕ್ ತೆಗೆದುಕೊಳ್ಳುವುದು ಉತ್ತಮ.
ವೈದ್ಯರು ಹೇಳುವ ಪ್ರಕಾರ, ಬೆನ್ನುಮೂಳೆಯ ಶಕ್ತಿ ಕಡಿಮೆಯಾಗುತ್ತ ಬಂದಂತೆ, ಬೆನ್ನುನೋವು ಕಾಣಿಸಿಕೊಳ್ಳುತ್ತದೆ. ಇದನ್ನು ಮೂಳೆ ಸವೆತ ಎನ್ನುತ್ತಾರೆ. ವಯಸ್ಸಾದಂತೆ ಈ ರೀತಿ ಹೆಚ್ಚು ನೋವು ಕಾಣಿಸಿಕೊಳ್ಳುತ್ತದೆ. ಆದರೆ ನಿಮಗೆ ಚಿಕ್ಕ ವಯಸ್ಸಿನಲ್ಲಿಯೇ ಈ ರೀತಿ ಅತೀಯಾಗಿ ಬೆನ್ನು ನೋವು ಕಾಣಿಸಿಕೊಳ್ಳುತ್ತಿದೆ ಎಂದರೆ, ನಿಮ್ಮ ಆರೋಗ್ಯ ಕ್ಷೀಣಿಸುತ್ತಿದೆ ಎಂದರ್ಥ.
ಇನ್ನು ನಿಮ್ಮ ಹೊಟ್ಟೆಯ ಬೊಜ್ಜು ಬೆಳೆಯುತ್ತಿದೆ ಎಂದರೆ, ಅದು ಕೂಡ ಬೆನ್ನು ನೋವಿಗೆ ಕಾರಣವಾಗುತ್ತದೆ. ಅಲ್ಲದೇ, ಹೊಟ್ಟೆ ಉಬ್ಬರ, ಜೀರ್ಣಾಂಗ ಸಮಸ್ಯೆ ಇತ್ಯಾದಿ ಇದ್ದಾಗಲೂ, ಬೆನ್ನು ನೋವಿನ ಸಮಸ್ಯೆ ಕಾಡುತ್ತದೆ. ಈ ಬಗ್ಗೆ ಇನ್ನಷ್ಟು ಮಾಹಿತಿಗಾಗಿ ವೀಡಿಯೋ ನೋಡಿ.