Sunday, April 13, 2025

Latest Posts

ದುಬೈನಲ್ಲಿ ಹಿಂದೂ- ಮುಸ್ಲಿಂ ಜಗಳವಾಗದಿರಲು ಕಾರಣವೇನು..? ನಮ್ಮಲ್ಲೇಕಿಲ್ಲ ಇಂಥ ನಿಯಮ..?

- Advertisement -

Web News: ಭಾರತದಲ್ಲಿ ಇತ್ತೀಚೆಗೆ ಹಲ್ಲೆ, ದಾಂಧಲೆಗೆ ಕಾರಣವಾಗುತ್ತಿರುವ ವಿಷಯ ಅಂದ್ರೆ ಹಿಂದೂ- ಮುಸ್ಲಿಂ ಜಗಳ. ಸಾಮಾನ್ಯ ಹಿಂದೂ- ಮುಸ್ಲಿಂ ಜನ ಸಾಮರಸ್ಯದಿಂದ ಇದ್ದರೂ, ದೊಡ್ಡವರು ಎನ್ನಿಸಿಕೊಂಡವರು ಮಧ್ಯದಲ್ಲಿ ಬಂದು ಬೆಂಕಿ ಹಚ್ಚಿ ಹೋಗುತ್ತಾರೆ. ಬಳಿಕ ಪ್ರತಿಭಟನೆ, ಹಾರಾಟ, ಹೋರಾಟ ಎಲ್ಲವೂ ಶುರುವಾಗುತ್ತದೆ. ಇದರಿಂದಲೇ, ಭಾರತದಲ್ಲಿ ನೆಮ್ಮದಿ ಶಾಂತಿ ಹಾಳಾಗಿ ಹೋಗಿದೆ. ಅಭಿವೃದ್ಧಿಯೂ ಕುಂಠಿತವಾಗುತ್ತಿದೆ. ರಾಜಕಾರಣಿಗಳು ಇಂಥ ಜಗಳದಲ್ಲಿ ಲಾಭ ಪಡೆಯುತ್ತಿದ್ದರೂ, ಕೆಲವು ಮೂರ್ಖರಿಗೆ ಅದು ಅರ್ಥವಾಗದೇ ಉಳಿದಿರುವುದು ವಿಪರ್ಯಾಸದ ಸಂಗತಿ.

ಇದು ಭಾರತದ ವಿಷಯವಾದರೆ, ದುಬೈನಲ್ಲಿ ನೀವು ಯಾವತ್ತಾದರೂ ಹಿಂದೂ- ಮುಸ್ಲಿಂ ಜಗಳ, ಪ್ರತಿಭಟನೆ ಅನ್ನೋ ನ್ಯೂಸ್ ಯಾವತ್ತಾದರೂ ಕೇಳಿದ್ದೀರಾ. ಅಲ್ಲಿ ಅತೀ ಹೆಚ್ಚು ಪಾಕಿಸ್ತಾನಿಗಳು ಕ್ಯಾಬ್ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದಾರೆ. ಭಾರತದ ಹಿಂದೂಗಳೂ ಇದ್ದಾರೆ. ಆದರೆ, ಅಲ್ಲೆಂದೂ ಹಿಂದೂ ಮುಸ್ಲಿಂ ಜಗಳವಾಗಿಲ್ಲ. ಇದಕ್ಕೆ ಕಾರಣವೇನು ತಿಳಿಯೋಣ ಬನ್ನಿ.

ದುಬೈನಲ್ಲಿ 200ಕ್ಕೂ ಹೆಚ್ಚು ಬೇರೆ ಬೇರೆ ದೇಶದ ಜನರಿದ್ದಾರೆ. ಅವರೆಲ್ಲರದ್ದೂ ಬೇರೆ ಬೇರೆ ಧರ್ಮ, ಬೇರೆ ಬೇರೆ ಪದ್ಧತಿ. 40 ಲಕ್ಷಕ್ಕೂ ಹೆಚ್ಚು ಭಾರತೀಯರಿದ್ದಾರೆ. 20 ಲಕ್ಷಕ್ಕೂ ಹೆಚ್ಚು ಪಾಕಿಸ್ತಾನಿಗಳಿದ್ದಾರೆ. ಆದರೂ ಅಲ್ಲಿ ಯಾರೂ ಹಿಂದೂ – ಮುಸ್ಲಿಂ ಹೆಸರಿನಲ್ಲಿ ದಂಗೆ ಏಳುವುದಿಲ್ಲ. ಗಲಾಟೆ ಮಾಡುವುದಿಲ್ಲ. ಪ್ರತಿಭಟಿಸುವುದಿಲ್ಲ.

ಇದಕ್ಕೆ ಕಾರಣವೇನು ಅಂದ್ರೆ ಅಲ್ಲಿನ ಸರ್ಕಾರ ಅಷ್ಟು ಕಟ್ಟು ನಿಟ್ಟಾಗಿ ನಿಯಮಗಳನ್ನು ಹೇರಿದೆ. ಈ ನಿಯಮಗಳು, ಕಠೋರ ಶಿಕ್ಷೆಗಳ ಪರಿಣಾಮವಾಗಿ ಯಾರೂ ಧರ್ಮಗಳ ವಿಚಾರವಾಗಿ ಜಗಳವಾಡುವುದಿಲ್ಲ. ಅಲ್ಲದೇ, ದುಬೈ ಅರಬ್ ಕಂಟ್ರಿಗಳಲ್ಲಿ ಒಂದಾಗಿದ್ದರೂ ಸಹ, ಅಲ್ಲಿ ಜಾತಿ ಬೇಧವಿಲ್ಲ. ಆ ರೀತಿ ಮಾಡುವವರು ಬೆರಳೆಣಿಕೆಯಷ್ಟು ಜನರಿರಬಹುದೇನೋ.

ಆದರೆ ದುಬೈ ಸರ್ಕಾರ, ಜನರನ್ನು ಎಷ್ಟು ಚೆನ್ನಾಗಿ ನೋಡಿಕರೊಳ್ಳುತ್ತಿದೆ ಎಂದರೆ, ನೀವು ದುಡಿಯಿರಿ, ನೀವು ಜೀವನ ಮಾಡಿ, ನಿಮ್ಮಷ್ಟಕ್ಕೆ ನೀವಿರಿ ಎನ್ನುವ ರೀತಿ ಇದೆ. ಯಾಕಂದ್ರೆ ದುಬೈನಲ್ಲಿ ಯಾವುದೇ ರೀತಿಯ ಟ್ಯಾಕ್ಸ್ ಕಟ್ಟುಿವ ತಲೆಬಿಸಿಯೇ ಇಲ್ಲ. ಹಾಗಾಗಿಯೇ ಭಾರತದ ಕೆಲವು ಕೋಟ್ಯಾಧೀಶ್ವರರು ದುಬೈಗೆ ಶಿಫ್ಟ್ ಆಗುತ್ತಿದ್ದಾರೆ. ಯಾಕಂದ್ರೆ ಇಲ್ಲಿ ಹೆಣ್ಣು ಮಕ್ಕಳು ಸೇಫ್ ಆಗಿ ಇರುವುದಲ್ಲದೇ, ಕೊಲೆ, ಸುಲಿಗೆ, ದರೋಡೆಗಳಿಗೆ ಅವಕಾಶವಿಲ್ಲ. ಪ್ರತಿಭಟಿಸುವುದು ದೂರದ ಮಾತು, ಜೋರಾಗಿ ಕೂಗಾಡಿದರೂ, ನೀವು ಜೈಲು ಪಾಲಾಗುತ್ತೀರಿ. ಅದು ಪರ್ಮನೆಂಟ್ ಆಗಿ.

- Advertisement -

Latest Posts

Don't Miss