Hubli Political News: ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವ ಶರಣಬಸಪ್ಪ ದರ್ಶನಾಪೂರ, ದಲಿತ ಸಿಎಂ ಆದ್ರೆ ತಪ್ಪೇನು ಎಂದು ಪ್ರಶ್ನಿಸಿದ್ದಾರೆ..
ಬರೀ ಕಾಂಗ್ರೆಸ್ ನಲ್ಲಿ ಅಲ್ಲ, ಎಲ್ಲ ಪಕ್ಷದಲ್ಲಿ ದಲಿತ ಸಿಎಂ ಆಗಬೇಕು. ಕಾಂಗ್ರೆಸ್ ಪಕ್ಷ ಯಾವಗಲೂ ದಲಿತರಿಗೆ ಅಲ್ಪ ಸಂಖ್ಯಾತರಿಗೆ ಶಕ್ತಿ ಕೊಡೋ ಕೆಲಸ ಮಾಡ್ತಿದೆ. ಮುಖ್ಯಮಂತ್ರಿ ಹುದ್ದೆ ಇವಾಗ ಖಾಲಿ ಇಲ್ಲ. ಹೈಕಮಾಂಡ್ ತೀರ್ಮಾನ ಮಾಡತ್ತೆ ಎಂದು ಶರಣಬಸಪ್ಪ ಹೇಳಿದ್ದಾರೆ.
ಮುಖ್ಯಮಂತ್ರಿ ಆಗೋ ಆಸೆ ಎಲ್ಲರಿಗೂ ಇರತ್ತೆ. ಲಿಂಗಾಯತರು, ಒಕ್ಕಲಿಗರು, ರಾಜಣ್ಣ ಎಲ್ಲರೂ ಅವರು ಸಮಾಜದ ಪರ ಕೇಳ್ತಾರೆ. ಅದರಲ್ಲಿ ತಪ್ಪೇನು ಇಲ್ಲ. ಮುಖ್ಯಮಂತ್ರಿ ಆಗಬೇಕು ಅನ್ನೋ ಆಸೆ ಎಲ್ಲರಿಗೂ ಇರತ್ತೆ.
ಆದ್ರೆ ಮುಖ್ಯಮಂತ್ರಿ ತೀರ್ಮಾನ ಮಾಡೋದು ಹೈಕಮಾಂಡ್. ಕಲ್ಲಪ್ಪ ಮಲ್ಲಪ್ಪ ಜಗಳ ಮಾಡಿದ್ರೆ ಏನೂ ಬರಲ್ಲ. ಇಸ್ಮಾಯಿಲ್ ಕಲ್ಲಪ್ಪ ಜಗಳ ಮಾಡಿದ್ರು ಲಾಭ. ಬಿಜೆಪಿ ಸುಮ್ನೆ ಮುಸ್ಲಿಂ ತುಷ್ಟೀಕರಣ ಬಿಂಬಿಸುತ್ತಿದ್ದಾರೆ.
ತುಷ್ಟೀಕರಣ ಮಾಡಿರೋದಕ್ಕೆ ಉದಾಹರಣೆ ಕೊಡಿ ಎಂದು ಶರಣಬಸಪ್ಪ ಹೇಳಿದ್ದಾರೆ.
ವಿಧಾನಸೌಧದಲ್ಲಿ ಪಾಕಿಸ್ತಾನ ಘೋಷಣೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಅಲ್ಲಿ ನಾಸಿರ್ ಏನ ಘೋಷಣೆ ಕೂಗಿದಾರಾ..? ನಾವ ಕೂಗಿದೇವಾ..? ಬಿಜೆಪಿಯವರೇ ಯಾಕೆ ಕೂಗಿರಬಾರದು..? ಯಾರೇ ಅಂದರೂ ತಪ್ಪು. ಯಾರೇ ಆದರೂ ಒದ್ದು ಒಳಗೆ ಹಾಕಬೇಕು. ಯಾರೇ ಘೋಷಣೆ ಕೂಗಿದ್ರು ಸಂಭಂದ ಏನೂ..? ಸಂಸತ್ ನಲ್ಲಿ ಒಳಗೆ ಹೋಗಿದ್ದು ದೇಶ ವಿರೋಧಿ ಚಟುವಟಿಕೆ ಅಲ್ವಾ. ಯಾಕಂದ್ರೆ ಅವರು ಹಿಂದೂ ಇದ್ರು ಎಂದು ದರ್ಶನಾಪೂರ ಹೇಳಿದ್ದಾರೆ.
ಬಿಜೆಪಿ ಅಭಿವೃದ್ಧಿ ಬಗ್ಗೆ ಮಾತಾಡಿಲ್ಲ. ಎಮೋಷನಲ್ ವಿಚಾರದ ಮೇಲೆ ಚುನಾವಣೆ ಮಾಡ್ತಾರೆ . ಸಂವಿಧಾನ ಬದಲಾವಣೆ ಮಾತಾಡ್ತಾ ಇರೋದು ಕೂಡಾ ದೇಶದ್ರೋಹ ಹೇಳಿಕೆ ಎಂದು ಸಂಸದ ಅನಂತ್ ಕುಮಾರ್ ಹೆಗಡೆ ಹೇಳಿಕೆಗೆ ದರ್ಶನಾಪೂರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಸ್ಲಿಮರ ಬಗ್ಗೆ ಆ ಪೊಲೀಸರಿಗೆ ಎಷ್ಟು ದ್ವೇಷವಿದೆ ಅನ್ನೋದು ಇದರಲ್ಲೇ ಗೊತ್ತಾಗುತ್ತದೆ: ಓವೈಸಿ
ಮಂಡ್ಯದಲ್ಲಿ ಮುಂದಿನ ವರ್ಷದ ಬಜೆಟ್ ಬಗ್ಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ

