Political News: ರೈತರು ಬರ ಬರಲು ಕಾಯುತ್ತಿರುತ್ತಾರೆ. ಇದರಿಂದ ಅವರ ಸಾಲಮನ್ನಾ ಆಗುತ್ತದೆ ಎನ್ನುವ ರೀತಿ ಕಾಂಗ್ರೆಸ್ ಸಚಿವ ಶಿವಾನಂದ್ ಪಾಟೀಲ್ ಹೇಳಿಕೆ ಕೊಟ್ಟಿದ್ದು. ಈ ಬಗ್ಗೆ ಬಿಜೆಪಿ ನಾಯಕರು ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಶಿವಾನಂದ್ ಪಾಟೀಲ್ ಕ್ಷಮೆಯಾಚನೆ ಮಾಡಲೇಬೇಕು ಎಂದು ಆಗ್ರಹಿಸಿದ್ದರು. ಆದರೆ ತಾನು ರೈತರ ಬಗ್ಗೆ ತಪ್ಪಾಗಿ ಮಾತನಾಡಿಲ್ಲ. ಹೇಳಿಕೆಯನ್ನ ತಿರುಚಿ ಬಿಜೆಪಿ ನಾಯಕರು ಪ್ರಚಾರ ಮಾಡಿದ್ದಾರೆಂದು ಶಿವಾನಂದ್ ಪಾಟೀಲ್ ಟ್ವೀಟ್ ಮಾಡುವ ಮೂಲಕ ತಿರುಗೇಟು ನೀಡಿದ್ದಾರೆ.
ರೈತರ ಪರವಾಗಿ ನಾವು ನಮ್ಮ ಸರ್ಕಾರ ಏನಾದರೂ ಒಳ್ಳೆಯದನ್ನು ಮಾಡಿದರೂ, ಮಾತಾಡಿದರೂ ಅದನ್ನು ತಿರುಚಿ ಕಾಲೆಳೆಯುವಷ್ಟು ನೀಚ ಬುದ್ಧಿ ಬಿಜೆಪಿಗೆ ಇರುವುದು ಹೊಸದೇನಲ್ಲ.
ಬರಗಾಲದ ಪರಿಹಾರಕ್ಕೆ ಕಾಯುವಂತಹ ಪರಿಸ್ಥಿತಿ ನಮ್ಮ ರೈತರಿಗೆ ಬರುವುದಿಲ್ಲ ಎಂಬರ್ಥದ ಮಾತುಗಳನ್ನು ಹೇಳಿದ್ದೇನೆಯೇ ವಿನಃ ಅನ್ನದಾತರನ್ನು ನೋಯಿಸುವಷ್ಟು ಮದ ನನಗೆ ಏರಿಲ್ಲ. ತಮ್ಮದೇ ಪಕ್ಷ ಕೇಂದ್ರದಲ್ಲಿ ಆಳುತ್ತಿದ್ದರೂ ಒಮ್ಮೆಯೂ ರೈತರ ಪರವಾಗಿ ಬಿಜೆಪಿ ಮಾತಾಡುವ ಗೋಜಿಗೆ ಹೋಗಿಲ್ಲ. ಅನ್ನದಾತರ ನೆರವಿಗೆ ನಿಲ್ಲುವ ಕೆಲಸ ಮಾಡಿಲ್ಲ.
ಅನ್ನದಾತರಿಗೆ ನೋವಾಗುವಂತಹ & ಅಪಮಾನಿಸುವಂತಹ ಮಾತುಗಳನ್ನೇನೂ ನಾನು ಆಡಿಲ್ಲ. ನಾನು ಮಾತಾಡಿದ ಒಟ್ಟು ಭಾಷಣವನ್ನು ಕೇಳಿಸಿಕೊಂಡರೆ ಎಂಥವರಿಗೂ ಅದು ಅರ್ಥವಾಗುತ್ತದೆ. ಆದರೆ ವಿರೋಧ ಪಕ್ಷ ಬಿಜೆಪಿ ವಿರೋಧಿಸಲೇಬೇಕೆಂದು ಕೆಲವು ಮಾತುಗಳನ್ನಷ್ಟೇ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ ಎಂದು ಶಿವಾನಂದ ಪಾಟೀಲ್ ಟ್ವೀಟ್ ಮಾಡಿದ್ದಾರೆ.
ಅನ್ನದಾತರಿಗೆ ನೋವಾಗುವಂತಹ & ಅಪಮಾನಿಸುವಂತಹ ಮಾತುಗಳನ್ನೇನೂ ನಾನು ಆಡಿಲ್ಲ. ನಾನು ಮಾತಾಡಿದ ಒಟ್ಟು ಭಾಷಣವನ್ನು ಕೇಳಿಸಿಕೊಂಡರೆ ಎಂಥವರಿಗೂ ಅದು ಅರ್ಥವಾಗುತ್ತದೆ. ಆದರೆ ವಿರೋಧ ಪಕ್ಷ ಬಿಜೆಪಿ ವಿರೋಧಿಸಲೇಬೇಕೆಂದು ಕೆಲವು ಮಾತುಗಳನ್ನಷ್ಟೇ ಇಟ್ಟುಕೊಂಡು ಅಪಪ್ರಚಾರ ಮಾಡುತ್ತಿರುವುದು ಅವರ ಹತಾಶ ಮನಸ್ಥಿತಿಗೆ ಹಿಡಿದ ಕನ್ನಡಿ ಅಷ್ಟೇ. 1/5 pic.twitter.com/UkmNHLzQ4n
— Shivanand Patil (@iShivanandpatil) December 25, 2023
‘ನಿರ್ದಯ ಸರ್ಕಾರ, ದಪ್ಪ ಚರ್ಮದ ಮಂತ್ರಿಗಳನ್ನು ಪೋಷಿಸುತ್ತಿರುವ ಸರ್ಕಾರ’