ನಾವು ಪ್ರತಿದಿನ ನಿಮಗೆ ಹೊಸ ಹೊಸ ಹೆಲ್ತ್ ಟಿಪ್ಸ್ ಕೊಡ್ತಾನೆ ಇರ್ತೀವಿ. ಅದೇ ರೀತಿ ನಾವಿವತ್ತು ಪ್ರತಿದಿನ ಎರಡು ಖರ್ಜೂರ ತಿನ್ನುವುದರಿಂದ ಆಗುವ ಲಾಭಗಳೇನು ಅನ್ನೋ ಬಗ್ಗೆ ಹೇಳ್ತೀವಿ. ಆದ್ರೆ ನೀವಿನ್ನು ನಮ್ಮ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲನ್ನ ಸಬ್‌ಸ್ಕ್ರೈಬ್ ಮಾಡದಿದ್ದಲ್ಲಿ, ಬೇಗ ಸಬ್‌ಸ್ಕ್ರೈಬ್ ಮಾಡಿ ಪಕ್ಕದಲ್ಲಿರುವ ಬೆಲ್ಲ ಐಕಾನ್ ಪ್ರೆಸ್ ಮಾಡಿ..
ಮೊದಲನೇಯದಾಗಿ ಪ್ರತಿದಿನ ಎರಡು ಖರ್ಜೂರ ತಿನ್ನುವುದರಿಂದ ನಮ್ಮ ದೇಹದಲ್ಲಿ ಚೈತನ್ಯ ತುಂಬುತ್ತದೆ. ಶಕ್ತಿ ಬರುತ್ತದೆ. ತಪ್ಪು ಆಹಾರ ಪದ್ಧತಿಯಿಂದ ದಿನಗಳೆದಂತೆ ದೇಹದಲ್ಲಿ ಶಕ್ತಿ ಕುಂದುತ್ತ ಹೋಗುತ್ತಿದೆ. ದಿನಗಳೆದಂತೆ ವೀಕ್ ಆಗುತ್ತಿದ್ದೇವೆಂದು ನಿಮಗೆ ಅನಿಸುತ್ತಿದ್ದರೆ, ಪ್ರತಿದಿನ ಎರಡು ಖರ್ಜೂರ ಸೇವಿಸಿ. ಇದರ ಸೇವನೆಯಿಂದ ನಿಮ್ಮ ದೇಹಕ್ಕೆ ಚೈತನ್ಯ ದೊರಕಿ ನಿಮಗೆ ಆಯಾಸವಾಗದಂತೆ ಸಹಕರಿಸುತ್ತದೆ.
ಎರಡನೇಯದಾಗಿ ನಿಮ್ಮ ತ್ವಚೆಯ ಸೌಂದರ್ಯ ಹೆಚ್ಚುತ್ತದೆ. ನೀವು ಪ್ರತಿದಿನ ಎರಡು ಖರ್ಜೂರ ತಿನ್ನುವುದರಿಂದ ನಿಮ್ಮ ಸ್ಕಿನ್ ಹೆಲ್ದಿಯಾಗಿರುತ್ತದೆ. ಕಪ್ಪು ಕಲೆ, ಮೊಡವೆ, ಮುಖದ ಮೇಲಿನ ನೆರಿಗೆ ಕಡಿಮೆಯಾಗುತ್ತದೆ. ಮತ್ತು ನೀವು ಯಂಗ್ ಆಗಿ ಕಾಣುವಂತೆ ಮಾಡುತ್ತದೆ.
ಮೂರನೇಯದಾಗಿ ನಿಮ್ಮ ಕೂದಲಿನ ಆರೋಗ್ಯ ಕಾಪಾಡುತ್ತದೆ. ನೀವು ಪ್ರತಿದಿನ ಖರ್ಜೂರ ತಿನ್ನುವುದರಿಂದ ನಿಮ್ಮ ಕೂದಲ ಬುಡ ಗಟ್ಟಿಗೊಳ್ಳುತ್ತದೆ. ತಲೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ನಿಮಗೆ ಹಸಿವಾದಾಗ ಅಥವಾ ನಿಮ್ಮಲ್ಲಿ ಚೈತನ್ಯ ಕಡಿಮೆಯಾಗಿದೆ ಎಂದೆನಿಸಿದಾಗ ಎರಡೇ ಎರಡು ಖರ್ಜೂರ ಸೇವಿಸಿ. ನಿಮ್ಮ ಆಯಾಸ ಕ್ಷಣದಲ್ಲೇ ಕಡಿಮೆಯಾಗುತ್ತದೆ.
ನಾಲ್ಕನೇಯದಾಗಿ ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಾಗಿದ್ದರೆ, ಅದನ್ನ ಕಡಿಮೆ ಮಾಡುವುದರಲ್ಲಿ ಖರ್ಜೂರ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಕೊಬ್ಬಿನ ಅಂಶ ಹೆಚ್ಚಿಗೆಯಾದರೆ, ಹೃದಯ ಸಮಸ್ಯೆ ಬಂದೊದಗುತ್ತದೆ. ಎಷ್ಟೋ ಜನ ತಮ್ಮ ಕೊಲೆಸ್ಟ್ರಾಲ್ ಲೆವಲ್ ಚೆಕ್ ಮಾಡಿಸಿಕೊಳ್ಳದ ಕಾರಣ, ಸಡೆನ್ ಆಗಿ ಬರುವ ಹೃದಯ ಸಮಸ್ಯೆಗೆ ಬಲಿಯಾಗುತ್ತಿದ್ದಾರೆ. ಆದ ಕಾರಣ ನೀವು ಪ್ರತಿದಿನ ಎರಡು ಖರ್ಜೂರವನ್ನು ತಿಂದರೆ, ನಿಮ್ಮ ದೇಹದಲ್ಲಿನ ಕೊಬ್ಬಿನ ಅಂಶವನ್ನು ಸಮತೋಲನದಲ್ಲಿರಿಸಬಹುದು.
ಐದನೇಯದಾಗಿ ಜೀರ್ಣಕ್ರಿಯೆ ಸಮಸ್ಯೆ ಮತ್ತು ಮಲಬದ್ಧತೆ ಸಮಸ್ಯೆಗೆ ಇದು ರಾಮಬಾಣವಾಗಿದೆ. ನೀವು ಪ್ರತಿದಿನ ಎರಡು ಖರ್ಜೂರ ತಿಂದರೆ, ಜೀರ್ಣಕ್ರಿಯೆ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಮತ್ತು ಮಲಬದ್ಧತೆೆ ಸಮಸ್ಯೆ ಇದ್ದಲ್ಲಿ ಅದು ಕೂಡ ನಿವಾರಣೆಯಾಗುತ್ತದೆ.