Political News: ಹುಬ್ಬಳ್ಳಿಯಲ್ಲಿ ಸಚಿವ ಜಮೀರ್ ಅಹ್ಮದ್ ಖಾನ್ ಮಾಧ್ಯಮದೊಂದಿಗೆ ಮಾತನಾಡಿದ್ದು, ಪವರ್ ಶೇರಿಂಗ್ ಚರ್ಚೆ ಬಗ್ಗೆ ಅಡ್ಡ ಗೋಡೆ ಮೇಲೆ ದೀಪವಿಟ್ಟ ಹಾಗೆ ಹೇಳಿಕೆ ಕೊಟ್ಟಿದ್ದಾರೆ.
ನಾನು ಯಾವತ್ತೂ ಸಿದ್ಧರಾಮಯ್ಯನವರ ಪರವಾಗಿದ್ದೇನೆ. ಸದ್ಯಕ್ಕೆ ಸಿದ್ದರಾಮಯ್ಯನವರೇ ಸಿಎಂ ಆಗಿದ್ದಾರೆ, ಅವರೇ ಇರುತ್ತಾರೆ ಎಂದರು. ಆದರೆ ಎರಡೂವರೆ ವರ್ಷದ ನಂತರ ಡಿ.ಕೆ. ಶಿವಕುಮಾರ್ ಸಿಎಮ್ ಆಗುತ್ತಾರಾ ಎಂಬ ಪ್ರಶ್ನೆಗೆ ಸರಿಯಾಗಿ ಉತ್ತರಿಸದ ಜಮೀರ್, ಸದ್ಯಕ್ಕೆ ಖುರ್ಚಿ ಖಾಲಿ ಇಲ್ಲಾ ಎಂಬ ಮಾತತನ್ನು ರಿಪೀಟ್ ಮಾಡಿದ್ದಾರೆ. ಅಲ್ಲದೇ, ಪ್ರತೀ ಬಾರಿ ಸಿಎಂ ಸಿದ್ದರಾಮಯ್ಯ ಪರ ಸ್ಪಷ್ಟವಾಗಿ ಬ್ಯಾಟ್ ಬೀಸುತ್ತಿದ್ದ ಜಮೀರ್, ಸಿದ್ಧರಾಮಯ್ಯ ಐದು ವರ್ಷ ಪೂರ್ಣಗೊಳಿಸುತ್ತಾರೆಂಬ ವಿಚಾರಕ್ಕೆ ಕೂಡ ಜಮೀರ್ ಸ್ಪಷ್ಟ ಪ್ರತಿಕ್ರಿಯೆ ನೀಡಿಲ್ಲ.
ಇನ್ನು ತೆಲಂಗಾಣದ ಹೇಳಿಕೆಯನ್ನು ಜಮೀರ್ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ. ಸ್ಪೀಕರ್‌ಗೆ ನಾವು ಸೇರಿದಂತೆ ಬಿಜೆಪಿಯವರೂ ಕೈ ಮುಗಿಯಬೇಕು ಅಂದಿದ್ದೆ. ಸ್ಪೀಕರ್‌ಗೆ ಸಿಎಮ್ ಸೇರಿದಂತೆ ಎಲ್ಲರೂ ಕೈಮುಗೀತಾರೆ, ಅದರಲ್ಲಿ ತಪ್ಪೇನಿದೆ..? ಸ್ವಾತಂತ್ರ ಸಿಕ್ಕು ಇಷ್ಟು ವರ್ಷದಲ್ಲಿ ಮುಸ್ಲೀಮ್ ಸ್ಪೀಕರ್ ಆಗಿರಲಿಲ್ಲ. ಕಾಂಗ್ರೆಸ್ ಪಕ್ಷ ಮುಸ್ಲೀಮರಿಗೆ ಅವಕಾಶ ಮಾಡಿಕೊಟ್ಟಿದೆ. ಬಿಜೆಪಿಯವರು ಯಾಕೆ ನನ್ನನ್ನು ಟಾರ್ಗೆಟ್ ಮಾಡ್ತಾರೆ ಗೊತ್ತಿಲ್ಲ. ಚರ್ಚೆಗೆ ಬೇರೆ ವಿಷಯಗಳಿಲ್ಲ ಹೀಗಾಗಿ ನನ್ನನ್ನು ಟಾರ್ಗೆಟ್ ಮಾಡಿದ್ದಾರೆ. ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ. ಹಿಂದೂ, ಮುಸ್ಲೀಮ್ ಗಲಾಟೆ ಮಾಡಿಸೋದೆ ಬಿಜೆಪಿ ಕೆಲಸ. ಸಿದ್ದರಾಮಯ್ಯ ಮುಸ್ಲೀಮರಿಗೆ 10 ಸಾವಿರ ಕೋಟಿ ಕೊಡ್ತೀನಿ ಅಂದಿದ್ದಾರೆ, ಇದು ಸ್ವಾಗತಾರ್ಹ. ಬಿಜೆಪಿಯವರು ಸಬ್ ಕಾ ವಿಕಾಸ್ ಅಂತಾ ಹೇಳಿ ಮುಸ್ಲೀಮರ ಅನುದಾನ ಕಡಿತ ಮಾಡಿದ್ರು ಎಂದು ಬಿಜೆಪಿ ವಿರುದ್ಧ ಜಮೀರ್ ವಾಗ್ದಾಳಿ ನಡೆಸಿದ್ರು.
‘ವಿಮಾನ ನಿಲ್ದಾಣಕ್ಕೆ ಕ್ರೂರಿಗಳು, ಕೊಲೆ ಕಡುಕರ ಹೆಸರಿಟ್ಟರೆ ಬಿಜೆಪಿ ಉಗ್ರ ಹೋರಾಟ ಮಾಡಲಿದೆ’
‘ನಾನು ಸಚಿವನಾಗಿ ನನಗೆ ಇನ್ನೂ ಲೋಕಸಭೆಗೆ ಹೋಗಲು ಆಗಿಲ್ಲ. ಹಾಗಾದರೆ ಇವನು ಹೇಗೆ ಹೋದ?’