Sunday, September 8, 2024

Latest Posts

Virat Kohli: ಭಾರತ ತೊರೆಯಲಿದ್ದಾರಾ ವಿರಾಟ್; ಕಾರಣವೇನು?

- Advertisement -

ವಿರಾಟ್ ಕೊಹ್ಲಿ, ಕ್ರಿಕೆಟ್ ಜಗತ್ತು ಕಂಡ ಅದ್ಭುತ ಪ್ರತಿಭೆ. ಸಚಿನ್ ತೆಂಡೂಲ್ಕರ್ ನಂತರ ವಿಶ್ವಕ್ರಿಕೆಟ್ ಆಳಿದ ಭಾರತದ ಹೆಮ್ಮೆಯ ಪುತ್ರ. ಆಧುನಿಕ ಕ್ರಿಕೆಟ್ ನ ದೇವರು, ರನ್ ಮಷೀನ್, ಕಿಂಗ್ ಕೊಹ್ಲಿ, ರೆಕಾರ್ಡ್ ಬ್ರೇಕರ್ ಹೀಗೆ ಅಭಿಮಾನಿಗಳ ಸಾಲು ಸಾಲು ಪ್ರೀತಿಯ ಬಿರುದುಗಳನ್ನು ಪಡೆದ ವಿರಾಟ್ ಭಾರತೀಯ ಕ್ರಿಕೆಟ್ ಗೆ ನೀಡಿದ ಕೊಡುಗೆ ಹಾಗೂ ಬರೆದ ದಾಖಲೆಗಳು ಅಪಾರ. ಇಂತಹ ವಿರಾಟ್ ಕೊಹ್ಲಿ ಇದೀಗ ದೇಶ ಬಿಡ್ತಾರಾ? ಬೇರೆ ದೇಶದಲ್ಲಿ ನೆಲೆಯೂರ್ತಾರಾ? ಎನ್ನುವ ಹಲವು ಅನುಮಾನ ಮೂಡಿಸುವ ಪ್ರಶ್ನೆಗಳು ಅಭಿಮಾನಿಗಳನ್ನ ಕಾಡುತ್ತಿದೆ.

ಟೀಂ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ, ಇತ್ತೀಚೆಗಷ್ಟೇ ನಡೆದ ಐಸಿಸಿ ಟಿ20 ವಿಶ್ವಕಪ್ ಗೆಲುವಿನ ಬಳಿಕ, ಭಾರತ ತಂಡದ ಜತೆ ತವರಿಗೆ ಆಗಮಿಸಿದ್ದರು. ಭಾರತಕ್ಕೆ ಬಂದು ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿ, ಮುಂಬೈನಲ್ಲಿ ನಡೆದ ರೋಡ್‌ ಷೋನಲ್ಲಿ ಪಾಲ್ಗೊಂಡ ಮರುದಿನವೇ ತಮ್ಮ ಪತ್ನಿ ಹಾಗೂ ಮಕ್ಕಳಿಬ್ಬರನ್ನು ಭೇಟಿ ಮಾಡಲು ಲಂಡನ್‌ಗೆ ಪ್ರಯಾಣ ಬೆಳೆಸಿದ್ದರು. 17ನೇ ಆವೃತ್ತಿಯ ಐಪಿಎಲ್ ಟೂರ್ನಿಯ ವೇಳೆಯಲ್ಲಿ ಕೊಹ್ಲಿ ಅಚ್ಚರಿಯ ಹೇಳಿಕೆ ನೀಡಿದ್ದರು. ” ಓರ್ವ ಕ್ರೀಡಾಪಟುವಾಗಿ ಪ್ರತಿಯೊಬ್ಬರಿಗೂ ಕೊನೆಯ ದಿನ ಅಂತ ಇದ್ದೇ ಇರುತ್ತದೆ. ಯಾರೂ ಕೂಡಾ ಜೀವಿತಾವಧಿವರೆಗೂ ಆಡಲು ಸಾಧ್ಯವಿಲ್ಲ. ಹಾಂಗಂತ ನಾವು ನಿವೃತ್ತಿಯಾಗುವಾಗ ಯಾವುದೇ ಕೊರಗು ಇರಬಾರದು. ನಾನು ಆಡುವಾಗ ಸರ್ವಸ್ವವನ್ನೂ ನೀಡಿ ಆಡುತ್ತೇನೆ. ಆದರೆ ಒಂದು ದಿನ ಆಟ ನಿಲ್ಲಿಸಿದೆ ಎಂದರೆ, ಮತ್ತೆ ಇಲ್ಲೆಲ್ಲೂ ಕಾಣೋದಿಲ್ಲ” ಎಂದು ಹೇಳಿದ್ದರು.

ಇದೀಗ ಇದೆ ಹೇಳಿಕೆಯೇ ವಿರಾಟ್ ಕೊಹ್ಲಿ ಭಾರತ ಬಿಟ್ಟು ಬೇರೆ ದೇಶದಲ್ಲಿ ನೆಲೆಸ್ತಾರೆ, ಅದರಲ್ಲೂ ಇಂಗ್ಲೆಂಡ್ ನ ಲಂಡನ್ ನಲ್ಲಿ ವಾಸ ಮಾಡ್ತಾರೆ ಎನ್ನುವ ಅನುಮಾನ ಮೂಡಿಸಲು ಮುಖ್ಯ ಕಾರಣವಾಗಿದೆ. ಹಾಗಿದ್ರೆ ಯಾಕೆ ವಿರಾಟ್-ಅನುಷ್ಕಾ ದಂಪತಿ ದೇಶ ತೊರೆಯೊ ಬಗ್ಗೆ ಚಿಂತಿಸಿರಬಹುದು ಎಂದು ನೋಡುವುದಾದರೆ, ತಮ್ಮ ಮಗಳು ವಮಿಕಾ ಎಲ್ಲಿಯವರೆಗೆ ಸೋಷಿಯಲ್ ಮೀಡಿಯಾ ಅಂದ್ರೆ ಏನು ಎನ್ನುವುದನ್ನು ಅರ್ಥ ಮಾಡಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಆಕೆಯನ್ನು ಸೋಷಿಯಲ್ ಮೀಡಿಯದಲ್ಲಿ ತೋರಿಸಬಾರದು ಎಂಬ ದೃಢ ಸಂಕಲ್ಪವನ್ನು ವಿರಾಟ್ ತಮ್ಮ ಪತ್ನಿ ಅನುಷ್ಕಾ ಜೊತೆ ಸೇರಿ ಈ ಮುಂಚೆಯೇ ತೀರ್ಮಾನಿಸಿದ್ದಾರೆ. ಆದ್ದರಿಂದ ಭಾರತದಲ್ಲಿ ಮಗಳ ಗೌಪ್ಯತೆಗೆ ದಕ್ಕೆ ಬರಬಾರದು ಎಂಬ ಕಾರಣ ಮತ್ತು ಈ ಮುಂಚೆ ವಿರಾಟ್ ಮಗಳು ವಮಿಕಾ ಬಗ್ಗೆ ಬಂದ ಅತ್ಯಾಚಾರದ ಬೆದರಿಕೆಯ ಕಾರಣದಿಂದಲೂ ಬೇಸತ್ತು ವಿರಾಟ್ ದಂಪತಿ ವಿದೇಶದಲ್ಲಿ ನೆಲೆಯೂರುವ ಬಗ್ಗೆ ಚಿಂತಿಸಿರಬಹುದು ಎಂದು ಹೇಳಲಾಗ್ತಿದೆ.

ಇದೀಗ ಸದ್ಯಕ್ಕೆ ವಿರಾಟ್ ಕೊಹ್ಲಿ, ಲಂಡನ್‌ನಲ್ಲಿ ತನ್ನ ಕುಟುಂಬದ ಜತೆ ಅಮೂಲ್ಯ ಸಮಯವನ್ನು ಕಳೆಯುತ್ತಿದ್ದು, ಇದೇ ತಿಂಗಳ ಕೊನೆಯಲ್ಲಿ ನಡೆಯಲಿರುವ ಭಾರತ ಹಾಗೂ ಶ್ರೀಲಂಕಾ ನಡುವಿನ ಸೀಮಿತ ಓವರ್‌ಗಳ ಸರಣಿಗೂ ಅಲಭ್ಯರಾಗುವ ಸಾಧ್ಯತೆ ಇದೆ. ಹೀಗಾಗಿ ವಿರಾಟ್ ಕೊಹ್ಲಿ ಮುಂಬರುವ ಸೆಪ್ಟೆಂಬರ್‌ನಲ್ಲಿ ನಡೆಯಲಿರುವ ಬಾಂಗ್ಲಾದೇಶ ಎದುರಿನ ಸರಣಿಯ ವೇಳೆಗೆ ಭಾರತ ತಂಡವನ್ನು ಕೂಡಿಕೊಳ್ಳುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

- Advertisement -

Latest Posts

Don't Miss