Thursday, November 7, 2024

Latest Posts

‘ಬಾಂಬ್ ಎಲ್ಲಿ ಸ್ಫೋಟ ಆಗಿದೆ? ಕರೆ ಬಂದ್ರೆ ಏನಾಯ್ತು, ಅಂತಹ ಕರೆಗಳು ಸಾಕಷ್ಟು ಬರ್ತವೆ’

- Advertisement -

Political News: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿಂದು ಮಾತನಾಡಿದ ಸಚಿವ ಸತೀಶ್‌ ಜಾರಕಿಹೊಳಿ, ನಿನ್ನೆ ಬೆಂಗಳೂರಿನ ಶಾಲೆಗೆ ಬಂದ ಬಾಂಬ್ ಬೆದರಿಕೆ ಕರೆಯ ಬಗ್ಗೆ ಮಾತನಾಡಿದ್ದಾರೆ. ಬಾಂಬ್ ಎಲ್ಲಿ ಸ್ಫೋಟ ಆಗಿದೆ? ಕರೆ ಬಂದ್ರೆ ಏನಾಯ್ತು, ಅಂತಹ ಕರೆಗಳು ಸಾಕಷ್ಟು ಬರ್ತವೆ ಎಂದಿದ್ದಾರೆ.

ಏನು ಆಗಿಲ್ಲ ಅಂತಾ ನಿನ್ನೆ ಸ್ಪಷ್ಟೀಕರಣವಾಗಿದೆ. ಅದ್ಯಾವುದೋ ಒಂದು ವಿಷಯಕ್ಕೆ ನಾವು ಇಷ್ಟೆಲ್ಲಾ ಸಮಯ ವ್ಯರ್ಥ ಮಾಡಿದರೆ ಹೇಗೆ? ಅದಕ್ಕೆ ಸರ್ಕಾರ ಪೊಲೀಸ್ ಇಲಾಖೆ ಇದೆ. ಅದನ್ನ ಮಾಡೇ ಮಾಡ್ತಾರೆ. ಬೇರೆ ಸಮಸ್ಯೆಗಳು ಸಾಕಷ್ಟಿದೆ. ಅದರ ಕುರಿತು ನಮಗೂ ಹೇಳೋಕೆ ಬರಲ್ಲ. ವಿರೋಧ ಪಕ್ಷದವರದ್ದು ಸಮಸ್ಯೆ, ನಮ್ಮದು ಸಮಸ್ಯೆ. ಕೊನೆಗೆ ಜನರು ಗೊಂದಲದಲ್ಲಿ ಸಿಲುಕುತ್ತಾರೆ ಎಂದು ಸಚಿವರು ಹೇಳಿದ್ದಾರೆ.

ಲೋಕಸಭಾ ಚುನಾವಣೆ ಸಿದ್ಧತೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸತೀಶ್, ಈಗಾಗಲೇ ನಮ್ಮ ಪಕ್ಷದಿಂದ ಉಸ್ತುವಾರಿಗಳನ್ನು ನೇಮಕ ಮಾಡಿದ್ದಾರೆ. ಆಕಾಂಕ್ಷಿಗಳ ಪಟ್ಟಿ ಕಳಿಸಿದ ನಂತರ ಹೈಕಮಾಂಡ್ ಅಂತಿಮಗೊಳಿಸುತ್ತೆ ಎಂದಿದ್ದಾರೆ.

ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಅಭಿವೃದ್ಧಿ ಬಗ್ಗೆ ಚರ್ಚೆ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸತೀಶ್, ಬರಗಾಲದ ಚರ್ಚೆ ಆಗುತ್ತೆ, ಪ್ರಶ್ನೆಯೆ ಇಲ್ಲ. ತಮ್ಮ ಕ್ಷೇತ್ರದ್ದು ಅಥವಾ ಜಿಲ್ಲೆಯದ್ದು ಚರ್ಚೆ ಮಾಡಿದರೆ ಅದಕ್ಕೆ ಸರ್ಕಾರ ಉತ್ತರ ಕೊಡುತ್ತೆ ಎಂದಿದ್ದಾರೆ.

ಲೋಕೋಪ ಇಲಾಖೆ ಸಂಬಂಧಪಟ್ಟ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಮಲೆನಾಡ ಶಾಲಾ ಮಕ್ಕಳ ಅನುಕೂಲಕ್ಕೆ ಕಾಲುಸಂಕ ಅಂತಾ 100 ಕಿರುಸೇತುವೆಗಳನ್ನ  ಮಾಡ್ತಾ ಇದ್ದಿವಿ. ಮುಂದಿನ ಎರಡು ವರ್ಷಗಳಲ್ಲಿ ಇನ್ನು 400 ಮಾಡ್ತೇವೆ. ಇದು ನಮ್ಮ ಇಲಾಖೆಯ ಬಹಳ ದೊಡ್ಡ ಸಾಧನೆ. ಲೋಕೋಪಯೋಗಿ ಇಲಾಖೆಯ ಬಿಲ್ ಬಾಕಿ ಇದೆ. ಅದಕ್ಕೆ ನಾವು ಹೊಣೆಗಾರರಲ್ಲ.

ಕೊಡುವ ಜವಾಬ್ದಾರಿ ನಮ್ದಿದೆ. ಅದಕ್ಕೆ ನಾವು ಹೊಣೆಗಾರರಲ್ಲ ಕೊಡುತ್ತೇವೆ. 4000 ಕೋಟಿ ಹೆಚ್ಚಿಗೆ ಮಾಡಿಟ್ಟು ಹೋಗಿದ್ದಾರೆ. ಅದಕ್ಕೆ ಎಲ್ಲಿಂದ ತರುವುದು ನಾವು..? ಸರ್ಕಾರಕ್ಕೆ ಮನವಿ ಮಾಡಿಕೊಳ್ಳಬೇಕು. ಹೆಚ್ಚಿಗೆ ಕೊಡಿ ಅಂತ ಕೇಳಿದಾಗ ಅದು ಪರಿಹಾರವಾಗುತ್ತೆ. ಲೋಕೋಪಯೋಗಿ ಇಲಾಖೆ ಸಿಬ್ಬಂದಿ ವೇತನ ಆಗ್ತಾ ಇಲ್ಲ ಅಂತ ಯಾರು ಹೇಳಿದರು? ಬೆಳಗಾವಿ ರಾಜಕಾರಣದಲ್ಲಿ ಯಾರು ಮೂಗು ತೂರಿಸುತ್ತಿದ್ದಾರೆ? ನಾವು ಹೊಂದಾಣಿಕೆಯಿಂದ ಇದ್ದೇವೆ. ಮುಂದೆ ಏನಾದರೂ ಕೂಡ ನಾವು ಅದನ್ನ ಚರ್ಚೆ ಮಾಡಿ ಬಗೆಹರಿಸುತ್ತೇವೆ. ಅದರ ಬಗ್ಗೆ ಸಭೆ ಮಾಡಿ ನಾವು ಹೈಕಮಾಂಡ್ಗೆ ಲಿಸ್ಟ್ ಕೊಡ್ತೇವೆ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ತೆಲಂಗಾಣ ಚುನಾವಣೆ ವೇಳೆ ಕರ್ನಾಟಕದ ಪ್ರಭಾವಿ ಸಚಿವ ಮತ್ತು ಗೋವಾ ಸಿಎಂ ಭೇಟಿ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರು ಇವರೇನು ಶತೃಗಳಲ್ಲ. ಆ ಪಕ್ಷದಿಂದ ಈ ಪಕ್ಷಕ್ಕೆ ಈ ಪಕ್ಷದಿಂದ ಆ ಪಕ್ಷಕ್ಕೆ ಹೋಗಿರುತ್ತಾರೆ. ಈ ಹಿನ್ನೆಲೆಯಲ್ಲಿ ಒಬ್ಬರನ್ನೊಬ್ಬರು ಭೇಟಿಯಾಗಿರುತ್ತಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸುವ ಅಗತ್ಯವಿಲ್ಲ. ಎರಡು ತಾಸು ಏಕೆ ಇಡೀ ರಾತ್ರೀನೇ ಅವರು ಚರ್ಚೆ ಮಾಡಿರಬಹುದು. ಫ್ರೆಂಡ್ಶಿಪ್ ಇದ್ದೇ ಇರುತ್ತೆ. ಗೋವಾ ಕರ್ನಾಟಕಕ್ಕೂ ಮೊದಲಿಂದಲೂ ಫ್ರೆಂಡ್ಶಿಪ್ ಇದೆ. ಗೆಳೆತನದಿಂದಾಗಿ ಭೇಟಿಯಾಗಿರುತ್ತಾರೆ. ಇಲ್ಲಿಯೂ ಬಿಜೆಪಿ ಮತ್ತು ಜೆಡಿಎಸ್ ನಾಯಕರು ನಮ್ಮ ಸ್ನೇಹಿತರಿದ್ದಾರೆ. ಆ ಪಕ್ಷದವರು ನಮ್ಮನ್ನು ಭೇಟಿಯಾಗುತ್ತಾರೆ. ಇದಕ್ಕೆ ಬೇರೆ ಅರ್ಥ ಕಲ್ಪಿಸೋದು ಬೇಡ ಎಂದಿದ್ದಾರೆ.

ಇನ್ನು ಕೊನೆಯದಾಗಿ ಸಚಿವರು ಮತ್ತು ಶಾಸಕನ ನಡುವೆ ತಾಳ ಮೇಳ ಇಲ್ಲದ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನೋಡೋಣ ಅಧಿವೇಶನ ಬಂದಿದೆ. ಅಧಿವೇಶನದಲ್ಲಿ ಅದಕ್ಕೆ ಉತ್ತರ ಸಿಗುತ್ತೆ ಎಂದಿದ್ದಾರೆ.

‘ದೇವೇಗೌಡರು ದೊಡ್ಡ ಆಲದ ಮರ ಇದ್ದಂತೆ, ಅವರ ನೆರಳಲ್ಲಿ ನಾನು ಕೆಲಸ ಮಾಡಿದ್ದೀನಿ’

‘ಕೇಂದ್ರ ಸರಕಾರದ ನೆರವು ಪಡೆದು ಈ ಬಗ್ಗೆ ಕಾರ್ಯಾಚರಣೆ ನಡೆಸಲು ಕಾಂಗ್ರೆಸ್ ಮಿನಾಮೇಷ ಎಣಿಸಬಾರದು’

ಭ್ರೂಣ ಹತ್ಯೆ ವಿಚಾರ: ಪೊಲೀಸ್ ಇಲಾಖೆ, ನಮ್ಮ ಇಲಾಖೆ ಕೈ ಜೋಡಿಸಿ ತನಿಖೆ ಮಾಡಿಸುತ್ತೇವೆ: ಸಚಿವ ಗುಂಡೂರಾವ್

- Advertisement -

Latest Posts

Don't Miss