ಐಸೂ ಅಂತಾನೇ ಕನ್ನಡಿಗರಿಂದ ಪ್ರೀತಿಯಿಂದ ಕರೆಸಿಕೊಳ್ಳೋ ಪ್ಯಾಟೆ ಹುಡ್ಗೀರ್ ಹಳ್ಳಿ ಲೈಫು ರಿಯಾಲಿಟಿ ಶೋ ಬ್ಯೂಟಿ ಐಶ್ವರ್ಯ ೨-೩ ವರ್ಷಗಳಿಂದ ಯಾವ ಸಿನಿಮಾದಲ್ಲೂ ಕಾಣಿಸಿಕೊಂಡಿಲ್ಲ. ಅಷ್ಟೇ ಅಲ್ಲ ಕಾಣಿಸಿಕೊಳ್ತಿಲ್ಲ. ಹೌದಾ ಐಶ್ವರ್ಯಾ ಸಿನಿಮಾದಲ್ಲಿ ಕಾಣಿಸಿಕೊಳ್ತಿಲ್ವ ಯಾಕೆ ಈಗ ಏನ್ಮಾಡ್ತಿದ್ದಾರೆ ಅಂತೀರಾ..? ಹೌದು. ರಿಯಾಲಿಟಿ ಶೋ ಸ್ಟಾರ್ ಐಶ್ವರ್ಯ ಬ್ಯುಸಿನೆಸ್‌ಮನ್ ಆಗಿದ್ದಾರೆ.
ತಮ್ಮದೇ ಗೋಲ್ಡನ್ ಕ್ಲಾö್ಯಪ್ ಇವೆಂಟ್ಸ್ ಕಂಪನಿ ಮೂಲಕ ದೇಶಾದ್ಯಂತ ಇವೆಂಟ್ ಮತ್ತು ಹೋಸ್ಟ್ ಮಾಡ್ತಾ ಬ್ಯುಸಿಯಾಗಿದ್ದಾರೆ. ಸಿನಿಮಾ ಯಾಕ್ ಮಾಡ್ತಿಲ್ಲ ಅಂದ್ರೆ ಇವೆಂಟ್ ಮಾಡೋ ಪುಟ್ಟ ಜಗತ್ತು ಕಟ್ಟಿಕೊಂಡಿದ್ದೀನಿ. ಇಲ್ಲಿ ಕರ್ನಾಟಕ, ಆಂಧ್ರ, ತಮಿಳುನಾಡು, ಕೊಲ್ಕತ್ತಾ, ಬಾಂಬೆಗಳಲ್ಲಿ ಇವೆಂಟ್ ಮಾಡ್ತಾ ಅದ್ರಲ್ಲಿ ಹೋಸ್ಟ್ ಆಗಿ ಎಲ್ಲರ ಡ್ರೀಮ್‌ಗಳನ್ನೂ ಡಿಸೈನ್ ಮಾಡ್ತಾ ಖುಷಿಯಾಗಿದ್ದೀನಿ ಅಂತಾರೆ ಐಸೂ. ಸಿನಿಮಾ ಇಲ್ಲ ಅಂತಲ್ಲ, ಟೈಮ್ ಸಿಕ್ತಿಲ್ಲ ಅಂತಾರೆ.
ದೇಶಾದ್ಯAತ ಸುತ್ತುತ್ತಾ ರ‍್ತೀರಾ..? ಕೆಜಿಎಫ್ ಹವಾ ಹೆಂಗಿದೆ ಅಂದ್ರೆ, ಕೇಳ್ತೀರಲ್ಲ, ನಾನು ದೇಶದ ಯಾವ ಮೂಲೆಗೆ ಇವೆಂಟ್‌ಗೆ ಹೋದ್ರೂ ಕೆಜಿಎಫ್ ಅಂದ್ರೆ ಸಾಕು ರೂಫ್ ಕಿತ್ತು ಹೋಗೋ ಹಂಗೆ ಕಿರುಚ್ತಾರೆ ಅಂತಾರೆ ಐಶ್ವರ್ಯ. ಸುದೀಪ್ ಅಂದ್ರೆ ಅವ್ರೆ ಬೇರೆ ಅವ್ರ ಸ್ಟೆöÊಲೇ ಬೇರೆ ಅನ್ನೋ ಐಶ್ವರ್ಯ, ಅಪ್ಪು ನನ್ನ ಲಕ್ಕಿ ಛಾರ್ಮ್ ಅಂತಾರೆ. ಅಪ್ಪು ಗುಣಗಾನವನ್ನ ದೇಶದ ಹಲವು ಕಡೆ ಯಾವುದೇ ಇವೆಂಟ್‌ಗೆ ಹೋದ್ರೂ ಮಾಡ್ತಾರೆ ಅನ್ನೋ ಐಶ್ವರ್ಯ. ನಾನು ಇರೋ ಕೆಲಸದಲ್ಲಿ ಖುಷಿಯಾಗಿದ್ದೀನಿ, ಇದೆಲ್ಲಾ ಮಾಡೋಕೆ ನನ್ನ ಸ್ಟೆçಂತ್ ಅಂದ್ರೆ ಅದು ನನ್ನ ಅಜ್ಜಿ ತಾತ.
ಅಜ್ಜಿ ತಾತ ನನಗೆ ಭಾಷೆ ಕಲಿಸಿಕೊಟ್ರು, ಅವರು ವಚನ, ಕೀರ್ತನೆ, ಶ್ಲೋಕ ಹೇಳಿಕೊಟ್ಟಿದ್ದೇ ನಾನು ಮಾತಾಡೋಕೆ ಮಹಾಶಕ್ತಿ ಅಂತಾರೆ ಐಶ್ವರ್ಯ. ಸದ್ಯ ಒಂದು ಒಳ್ಳೆಯ ಸಿನಿಮಾವನ್ನೂ ಒಪ್ಪಿಕೊಂಡಿದ್ದಾರೆ. ಆದರೆ ದೇಶಾದ್ಯಂತ ಸುತ್ತಾಡ್ತಾ ವಿದೇಶಕ್ಕೂ ಹರ‍್ತಾ ಹಕ್ಕಿ ತರಹ ಹಾರಾಡ್ಕೊಂಡಿದ್ದಾರೆ. ಐಶ್ವರ್ಯ ಹಾರಾಡ್ತಾ ರ‍್ಲಿ ಅವರು ಕನಸುಗಳೆಲ್ಲಾ ನನಸಾಗ್ಲಿ, ೨-೩ ವರ್ಷಗಳ ನಂತ್ರ ಐಸೂ ಟಿವಿಯಲ್ಲಿ ಕಾಣಿಸಿಕೊಳ್ತಿದ್ದಾರೆ. ಸದ್ಯದಲ್ಲೇ ಅವ್ರ ಪೂರ್ತಿ ಮಾತು ಕೇಳೋಕೆ ಕರ್ನಾಟಕ ಟಿವಿ ಯೂಟ್ಯೂಬ್ ಚಾನೆಲ್ ನೋಡ್ತಾ ಇರಿ…
ಓಂ
ಕರ್ನಾಟಕ ಟಿವಿ