Tuesday, September 23, 2025

Latest Posts

‘ಯಾವ ಸೀಮೆಯ ನೈತಿಕತೆ ಸ್ವಾಮಿ ನಿಮ್ಮದು? ಇಂತಹ ಇನ್ಯಾವ ಬಗೆಯ ಕಳ್ಳ ದಂಧೆಗಳಿವೆ ನಿಮ್ಮದು?’

- Advertisement -

Political News: ಸಂಸದ ಪ್ರತಾಪ್ ಸಿಂಹ ತಮ್ಮ ವಿಕ್ರಮ್ ಸಿಂಹ ಅವರನ್ನು ಅರಣ್ಯಾಧಿಕಾರಿಗಳು ಬಂಧಿಸಿದ್ದು, ಈ ಬಗ್ಗೆ ಟ್ವೀಟ್ ಮಾಡಿ, ವ್ಯಂಗ್ಯವಾಡಿದೆ.

ಪಾರ್ಲಿಮೆಂಟ್ ದಾಳಿಕೋರರಿಗೆ ಪಾಸ್ ನೀಡಿದ್ದ ಬ್ಯಾರಿಕೆಡ್ ಶೂರ ಪ್ರತಾಪ್ ಸಿಂಹ ಅವರ ಸಹೋದರ ಕಾಡಿನ ಕಳ್ಳ ವಿಕ್ರಮ್ ಸಿಂಹರ ಬಂಧನವಾಗಿದೆ. ಈ ಬಂಧನದ ಮೂಲಕ ನಿಸರ್ಗದ ಶೋಕಕ್ಕೆ ನ್ಯಾಯ ಸಿಕ್ಕಂತಾಗಿದೆ. ನನ್ನ ತಮ್ಮ ತಪ್ಪೇ ಮಾಡಿಲ್ಲ ಎನ್ನುತ್ತಿದ್ದ ಪ್ರತಾಪ್ ಸಿಂಹ ಅವರೇ, ನಿಮ್ಮ ತಮ್ಮ ತಲೆಮರೆಸಿಕೊಂಡಿದ್ದೇಕೆ? ಈಗ ಬಂಧನವಾಗಿದ್ದೇಕೆ? ಕಾಡುಗಳ್ಳ ವೀರಪ್ಪನ್ ಸ್ಥಾನ ತುಂಬುವಂತೆ ನಿಮ್ಮ ಸಹೋದರನನ್ನು ತಯಾರು ಮಾಡುತ್ತಿದ್ರಾ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಬ್ಯಾರಿಕೆಡ್ ವೀರ ಪ್ರತಾಪ್ ಸಿಂಹ ಅವರೇ, ಪ್ರಭಾವ ಬೀರಿದ ಮಾತ್ರಕ್ಕೆ ಸಂಸತ್ ದಾಳಿಕೋರರಿಗೆ ಪಾಸ್ ನೀಡಿದ ಪ್ರಕರಣದಿಂದ ತಪ್ಪಿಸಿಕೊಳ್ಳಬಹುದು ಎಂದು ನಂಬಿದ್ದೀರಿ, ಆದರೆ ನಿಮ್ಮ ಸಹೋದರನ ಮರಗಳ್ಳತನದ ದಂಧೆಯಲ್ಲಿ ಕಾನೂನಿನ ಕುಣಿಕೆಯಿಂದ ತಪ್ಪಿಸಲಾರಿರಿ. ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಮರಗಳನ್ನು ಯಾವುದೇ ಅಂಜಿಕೆ ಇಲ್ಲದೆ ಕಡಿದು ಕಳ್ಳಸಾಗಣೆಗೆ ಮುಂದಾಗಿದ್ದು ಯಾವ ಸೀಮೆಯ ನೈತಿಕತೆ ಸ್ವಾಮಿ ನಿಮ್ಮದು? ಇಂತಹ ಇನ್ಯಾವ ಬಗೆಯ ಕಳ್ಳ ದಂಧೆಗಳಿವೆ ನಿಮ್ಮದು? ಎಂದು ಕಾಂಗ್ರೆಸ್ ಪ್ರತಾಪ್ ಸಿಂಹ ಅವರಿಗೆ ಪ್ರಶ್ನಿಸಿದೆ.

‘ಪ್ರಣವಾನಂದ ಸ್ವಾಮೀಜಿ ಅಲ್ಲ ಸ್ವಾಮೀಜಿನೇ ಅಲ್ಲ. ನಾನು ತಲೆಕಟ್ಟೋರಿಗೆ ಉತ್ತರ ಕೊಡಲ್ಲ’

ಕೊಬ್ಬರಿಗೆ ಬೆಲೆ ಏರಿಕೆ: ಪ್ರಧಾನಿ ನರೇಂದ್ರ ಮೋದಿಗೆ ಧನ್ಯವಾದ ತಿಳಿಸಿದ ಮಾಜಿ ಸಿಎಂ ಕುಮಾರಸ್ವಾಮಿ

2023ರಲ್ಲಿ ನಿಧನರಾದ ಸ್ಯಾಂಡಲ್‌ವುಡ್‌ ಸೆಲೆಬ್ರಿಟಿಗಳು ಇವರು

- Advertisement -

Latest Posts

Don't Miss