Political News: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ, ಹಲವು ರಾಜಕೀಯ ವ್ಯಕ್ತಿಗಳು ಮತಕ್ಕಾಗಿ, ಜನರಿಗೆ ಕೆಲವು ವಸ್ತುಗಳನ್ನು ಹಂಚಿ, ಆಸೆ ತೋರಿಸಿ, ಮತ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡೋದಂತೂ ಗ್ಯಾರಂಟಿ. ಅದೇ ರೀತಿ ಕಾಂಗ್ರೆಸ್ ಪಕ್ಷದವರು ಜನರಿಗೆ ಕುಕ್ಕರ್ ಹಂಚಲು ಮುಂದಾಗಿದ್ದರು ಎಂಬ ಆರೋಪ ಕೇಳಿ ಬಂದಿದೆ. ಈ ಬಗ್ಗೆ ಪ್ರೀತಂ ಗೌಡ ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಕಾಂಗ್ರೆಸ್ ಪಕ್ಷ ಚುನಾವಣಾ ಅಕ್ರಮ ಮಾಡುವುದರಲ್ಲಿ ಎತ್ತಿದ ‘ಕೈ’. ಚುನಾವಣಾ ಅಕ್ರಮ ಎಂಬ ಸುದ್ದಿ ಎಲ್ಲಿ ಕೇಳಿಬಂದರೂ ಅಲ್ಲಿರುವುದು ಅವರದ್ದೇ ಕೈವಾಡ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಬೆಂಗಳೂರು ಗ್ರಾಮಾಂತರ ಲೋಕಸಭೆ ಕ್ಷೇತ್ರದಲ್ಲಿ ಸೋಲು ಕಟ್ಟಿಟ್ಟ ಬುತ್ತಿ ಎಂದು ಬೆದರಿದ ಕಾಂಗ್ರೆಸ್ಸಿಗರು ಮತದಾರರನ್ನು ಓಲೈಸಲು ನಾನಾ ಕಸರತ್ತು ಶುರು ಮಾಡಿದ್ದಾರೆ. ಮಹಿಳೆಯರಿಗೆ ಸೀರೆ, ಕುಕ್ಕರ್ ಹಂಚುವ ಮೂಲಕ ಮತ ಪಡೆಯಬಹುದು ಎಂಬ ದುರಾಲೋಚನೆಯಲ್ಲಿದ್ದಾರೆ ಎಂದು ಪ್ರೀತಂ ಹರಿಹಾಯ್ದಿದ್ದಾರೆ.
ಬಗ್ಗಿದರೆ ಜುಟ್ಟು ಹಿಡಿ, ಎದ್ದರೆ ಕಾಲು ಹಿಡಿ ಎಂಬ ನೀತಿಯ ಕಾಂಗ್ರೆಸ್ಸಿಗರು ತಮ್ಮ ದಬ್ಬಾಳಿಕೆ, ರೌಡಿಸಂ ನಡೆಯಲ್ಲ ಎಂದರಿತು ಈಗ ಸೀರೆ ಕುಕ್ಕರ್ ಹಂಚಲು ಹೊರಟಿದ್ದಾರೆ. ಕ್ಷೇತ್ರದಲ್ಲಿ ಅಕ್ರಮ ನಡೆಸುತ್ತಿರುವ ಕಾಂಗ್ರೆಸ್ಸಿಗರ ಮೇಲೆ ಚುನಾವಣಾ ಆಯೋಗವು ಈ ಕೂಡಲೇ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಪ್ರೀತಂ ಆಗ್ರಹಿಸಿದ್ದಾರೆ.
ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಯಾರು ಅಂದರೆ, ಸಿಎಂ ಸಿದ್ದರಾಮಯ್ಯ ಅಂತ ವಿಧಾನಸೌಧದ ಪ್ರತಿ ಕಂಬಗಳೂ ಹೇಳುತ್ತವೆ. ಸಿಎಂ ವಿರೋಧಿ ಬಣದವರು ಡಿಸಿಎಂ ಡಿ.ಕೆ.ಶಿವಕುಮಾರ್ ಅವರೊಂದಿಗೆ ಸೇರಿ ಸಿದ್ದರಾಮಯ್ಯನವರ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಾ ತೇಜೋವಧೆ ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳಲಾಗದಷ್ಟು ಅಸಹಾಯಕ ಸಿಎಂ ನೀವು. ನಿಮ್ಮದೇ ಶಾಸಕರು ನಿಮ್ಮ ವಿರುದ್ಧ ಮಾತನಾಡಿದರೂ ಹದ್ದುಬಸ್ತಿನಲ್ಲಿಡಲಾಗದೆ ಸಿಎಂ ಕುರ್ಚಿ ಉಳಿಸಿಕೊಳ್ಳಲು ಹೆಣಗಾಡುತ್ತಿರುವ ನೀವು ಈಗ ನಾನೇ ಬಲಶಾಲಿ, ಶಕ್ತಿಶಾಲಿ ಎಂದು ಕೂಗುವುದು ಅರಣ್ಯ ರೋಧನೆ ಎಂಬುದು ನಿಮ್ಮ ಪಕ್ಷದವರಿಗೆ ತಿಳಿದಿದೆ ಬಿಡಿ. ಅಧಿಕಾರಕ್ಕಾಗಿ ಹೈಕಮಾಂಡ್ ಆಡಿಸಿದಂತೆ ಆಡುತ್ತಾ, ರಾಜ್ಯದ ಅಭಿವೃದ್ಧಿಯ ಬಗ್ಗೆ ಒಂದೇ ಒಂದು ಸ್ವಂತ ನಿರ್ಧಾರ ಕೈಗೊಳ್ಳಲಾಗದವರು ಯಾವ ಸೀಮೆ ‘ಸ್ಟ್ರಾಂಗ್ ಸಿಎಂ’ ಬಿಡ್ರೀ ಎಂದು ಪ್ರೀತಂಗೌಡ ವ್ಯಂಗ್ಯವಾಡಿದ್ದಾರೆ.
ರಾಜ್ಯ ಕಂಡ ಅತ್ಯಂತ ದುರ್ಬಲ ಮುಖ್ಯಮಂತ್ರಿ ಯಾರು ಅಂದರೆ, ಸಿಎಂ @siddaramaiah ಅಂತ ವಿಧಾನಸೌಧದ ಪ್ರತಿ ಕಂಬಗಳೂ ಹೇಳುತ್ತವೆ.
ಸಿಎಂ ವಿರೋಧಿ ಬಣದವರು ಡಿಸಿಎಂ @DKShivakumar ಅವರೊಂದಿಗೆ ಸೇರಿ ಸಿದ್ದರಾಮಯ್ಯನವರ ವಿರುದ್ಧ ದಿನಕ್ಕೊಂದು ಹೇಳಿಕೆ ನೀಡುತ್ತಾ ತೇಜೋವಧೆ ಮಾಡಿದರೂ ಅವರ ಮೇಲೆ ಕ್ರಮ ಕೈಗೊಳ್ಳಲಾಗದಷ್ಟು ಅಸಹಾಯಕ ಸಿಎಂ ನೀವು.… https://t.co/M1Ih0mS28Q
— Preetham J Gowda (ಮೋದಿ ಪರಿವಾರ) (@preethamgowda_j) March 20, 2024
ಶಾಲೆಯಿಂದ ಬರುತ್ತಿದ ಬಾಲಕಿ ಮೇಲೆ ರಸ್ತೆಯಲ್ಲೇ ಲೈಂ*ಗಿಕ ಕಿರುಕುಳ: ವೀಡಿಯೋ ನೋಡಿ ಶಾಕ್ ಆದ ನೆಟ್ಟಿಗರು