Tuesday, August 5, 2025

Latest Posts

ಈ ಶಾಲೆಯಲ್ಲಿ ಹಾಜರಿ ಹಾಕುವಾಗ ಎಸ್‌ ಮಿಸ್ ಅಲ್ಲಾ, ಜೈಶ್ರೀರಾಮ್ ಹೇಳಬೇಕು..

- Advertisement -

National news: ಮೊದಲಿನ ಕಾಲದಿಂದಲೂ ಶಾಲೆಯಲ್ಲಿ ಶಿಕ್ಷಕರು ಹಾಜರಿ ಹಾಕುವಾಗ, ಮಕ್ಕಳು, ಎಸ್ ಸರ್, ಪ್ರೆಸೆಂಟ್ ಸರ್, ಅಥವಾ ಬಂದಿದ್ದೇನೆ ಸರ್ ಅಂತಾ ಪ್ರತಿಕ್ರಿಯಿಸುತ್ತಿದ್ದರು. ಆದರೆ ಇಲ್ಲೊಂದು ಶಾಲೆಯಲ್ಲಿ ಹಾಜರಿ ಕರೆದಾಗ, ಇದೆಲ್ಲ ಹೇಳುವ ಹಾಗಿಲ್ಲ. ಬದಲಾಗಿ, ಜೈ ಶ್ರೀರಾಮ್ ಎಂದು ಹೇಳಬೇಕು. ಇನ್ನು ಈ ರೂಲ್ಸ್ ಇರುವುದಕ್ಕೆ, ಇಲ್ಲಿನ ಮಕ್ಕಳಿಗೇನನು ಬೇಸರವಿಲ್ಲ. ಅವರು ಜೋಶ್‌ನಿಂದಲೇ, ಜೈ ಶ್ರೀರಾಮ್ ಎನ್ನುತ್ತಾರೆ. ಈ ವೀಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸಖತ್ ಸದ್ದು ಮಾಡುತ್ತಿದೆ.

ಇನ್ನು ಯಾವ ಶಾಲೆಯಲ್ಲಿ ಈ ರೀತಿ ಹಾಜರಿ ಹೇಳುತ್ತಾರೆ ಎಂದರೆ, ಗುಜರಾತ್‌ನ ಶಾಲೆಯೊಂದರಲ್ಲಿ ಈ ರೀತಿ ಹಾಜರಿಗೆ, ಮಕ್ಕಳು ಪ್ರತಿಕ್ರಿಯಿಸುತ್ತಾರೆ. ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಇನ್ನು ಕೆಲವೇ ದಿನಗಳು ಬಾಕಿ ಇದೆ. ಈ ಸಂದರ್ಭದಲ್ಲಿ ದೇಶದೆಲ್ಲೆಡೆ ರಾಮಭಕ್ತರ ಅಬ್ಬರ ಜೋರಾಗಿಯೇ ಇದೆ. ಕೇಸರಿ ಶಾಲು ಧರಿಸಿ, ರಾಮನಾಮ ಜಪಿಸುತ್ತಾ, ಅಯೋಧ್ಯೆಗೆ ಕೆಲವರು ಹೊರಟರೆ, ಇನ್ನು ಕೆಲವರು ಜ.22ರಂದೇ ತಮಗೆ ಮಕ್ಕಳಾಗಬೇಕು ಎಂದು ಕಾದು ಕುಳಿತಿದ್ದಾರೆ. ಮತ್ತೆ ಕೆಲವರು ಈ ರೀತಿ ಜೈ ಶ್ರೀರಾಮ್ ಎಂಬ ಹೆಸರು ಕೂಗುತ್ತ, ಹಾಜರಿಗೆ ಪ್ರತಿಕ್ರಿಯಿಸುತ್ತಿದ್ದಾರೆ. ಒಟ್ಟಾರೆಯಾಗಿ, ಭಾರತದಲ್ಲಿ ರಾಮಭಕ್ತರ ರಾಮನಾಮ ಜಪ ಶುರುವಾಗಿದ್ದು, ಸರ್ವಂ ರಾಮ ಮಯಂ ಎಂಬಂತಾಗಿದೆ.

ಮಾಲ್ಡೀವ್ಸ್‌ನಲ್ಲಿ ಇನ್ನು ಮುಂದೆ ಶೂಟಿಂಗ್ ಮಾಡುವುದಿಲ್ಲ: ಮೋದಿಗೆ ಚಿತ್ರರಂಗ ಸಾಥ್..

‘ದೇಶದ ಜನತೆ ಈ ಬಾರಿ ಇಂಥ ಡೋಂಗಿ ಹಿಂದುತ್ವದ ಜಾಲಕ್ಕೆ ಬಲಿಯಾಗುವುದಿಲ್ಲ ಎಂಬ ವಿಶ್ವಾಸ ನನಗಿದೆ.’

ಪ್ರವಾಸಿಗರನ್ನು ಕಳುಹಿಸಿಕೊಡಿ ಎಂದು ಚೀನಾಗೆ ಗೋಗರೆದ ಮಾಲ್ಡೀವ್ಸ್..

- Advertisement -

Latest Posts

Don't Miss