Monday, April 14, 2025

Latest Posts

ಜೊತೆಯಾಗಿ ನೇಣಿಗೆ ಶರಣಾಗುವ ವೇಳೆ ಪತಿ ಸಾವು- ಪತ್ನಿ ಬಚಾವ್..!

- Advertisement -

ಹೆಣ್ಣಿಗೆ ಮದುವೆಗೂ ಮುನ್ನ ಅಪ್ಪ ಅಮ್ಮನೇ ಹೇಗೆ ಪ್ರಪಂಚವೋ, ಅದೇ ರೀತಿ ಮದುವೆಯಾದ ಬಳಿಕ ಪತಿಯೇ ಪ್ರಪಂಚ. ಪತಿಯಿಲ್ಲದೇ ಯಾವ ಪತ್ನಿಯೂ ಬದುಕಲು ಇಚ್ಛಿಸುವುದಿಲ್ಲ. ಆದ್ರೆ ಜೀವನದಲ್ಲಿ ತೆಗೆದುಕೊಳ್ಳುವ ಕೆಲ ತಪ್ಪು ನಿರ್ಧಾರಗಳು, ಇಂಥ ದುಸ್ಥಿತಿಗೆ ಈಡು ಮಾಡುತ್ತದೆ. ಉತ್ತರಪ್ರದೇಶದ ಆಗ್ರಾದ ಫತೇಪುರ್ ಸಿಕ್ರಿಯ ಗ್ರಾಮವೊಂದರಲ್ಲಿ, ಮನನೊಂದ ದಂಪತಿ ಆತ್ಮಹತ್ಯೆಗೆ ಶರಣಾಗಲು ನಿರ್ಧರಿಸಿದ್ದಾರೆ. ಆದ್ರೆ ಹಣೆಬರಹ ಕೈಕೊಟ್ಟ ಪರಿಣಾಮ, ಪತ್ನಿ ಬದುಕಿದ್ದಾಳೆ. ಪತಿ ಸಾವನ್ನಪ್ಪಿದ್ದಾನೆ.

ಬಾಲಕರನ್ನು ಬೆನ್ನಟ್ಟಿದ ಬೀದಿ ನಾಯಿಗಳು: ಬಾಲಕರು ಎಸ್ಕೇಪ್ ಆಗಿದ್ದು ಹೇಗೆ..?!

ದಂಪತಿ ನೇಣಿಗೆ ಶರಣಾಗಲು ನಿರ್ಧರಿಸಿ, ಮನೆಯಿಂದ ಸ್ವಲ್ಪ ದೂರವಿದ್ದ ಗದ್ದೆಯಲ್ಲಿದ್ದ ಮರಕ್ಕೆ ನೇಣು ಬಿಗಿದುಕೊಂಡಿದ್ದಾರೆ. ಪತ್ನಿಯ ದೇಹದ ತೂಕ ಹೆಚ್ಚಿದ್ದ ಕಾರಣ, ಆಕೆ ಸುತ್ತಿಕೊಂಡಿದ್ದ ನೇಣು ಕಟ್ ಆಗಿ, ಆಕೆ ಬಚಾವ್ ಆಗಿದ್ದಾಳೆ. ಆದ್ರೆ ಪತಿ ನೇಣು ಬಿಗಿದು ಸಾವನ್ನಪ್ಪಿದ್ದಾನೆ. ಈ ವಿಷಯ ತಿಳಿದ ಗ್ರಾಮಸ್ಥರು, ಸ್ಥಳೀಯ ಪೊಲೀಸರಿಗೆ ಕಂಪ್ಲೇಂಟ್ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಧಾವಿಸಿ, ಪತ್ನಿಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಮತ್ತು ಪತಿಯ ಶವವನ್ನು ಪೋಸ್ಟ್‌ಮಾರ್ಟಂಗೆ ಕಳಿಸಿದ್ದಾರೆ.

ಭಾರೀ ಮೊತ್ತಕ್ಕೆ ಹರಾಜಾಯಿತು ಕುಂಬಳಕಾಯಿ….!

ಮೃತ ವ್ಯಕ್ತಿ 54 ವರ್ಷದ ರೈತ ಮಾನ್‌ ಸಿಂಗ್ ಎನ್ನಲಾಗಿದ್ದು, ಅವನ ಪತ್ನಿ ಸಂತಾ ದೇವಿ(50)ಯಾಗಿದ್ದಾಳೆ. ಇವರಿಗೆ ನಾಲ್ಕು ಮಕ್ಕಳಿದ್ದಾರೆ. ಕೆಲ ದಿನಗಳಲ್ಲಿ ಮಾನ್‌ ಸಿಂಗ್ ಮತ್ತು ಸಂತಾ ದೇವಿ ಪರಸ್ಪರ ಕಿತ್ತಾಡಿಕೊಳ್ಳುತ್ತಿದ್ದರು. ಇಬ್ಬರಲ್ಲೂ ಹೊಂದಾಣಿಕೆ ಇಲ್ಲದ ಕಾರಣ, ಇಬ್ಬರೂ ಆತ್ಮಹತ್ಯೆಗೆ ನಿರ್ಧರಿಸಿದ್ದರು ಎಂದು ಸ್ಥಳೀಯ ಪೊಲೀಸರು ತಿಳಿಸಿದ್ದಾರೆ.

- Advertisement -

Latest Posts

Don't Miss