Thursday, June 19, 2025

Latest Posts

ಪ್ರಪಂಚದಲ್ಲಿರುವ ಬಿಳಿ ಬಣ್ಣದ ಸುಂದರ ಪ್ರಾಣಿಗಳ ಬಗ್ಗೆ ಚಿಕ್ಕ ಮಾಹಿತಿ ಇಲ್ಲಿದೆ ನೋಡಿ..

- Advertisement -

ಬಿಳಿ ಬಣ್ಣ ಅಂದ್ರೆ ಎಲ್ಲರಿಗೂ ಇಷ್ಟದ ಬಣ್ಣವೇ. ಇಂಥ ಸುಂದರ ಬಣ್ಣವನ್ನ ಹೊಂದಿರುವ ಅನೇಕ ಪ್ರಾಣಿ, ಪಕ್ಷಿಗಳು ಈ ಭೂಮಿ ಮೇಲಿದೆ. ಆದ್ರೆ ಈ ಪ್ರಾಣಿ, ಪಕ್ಷಿಗಳೆಲ್ಲ ಅಪರೂಪವಾಗಿದೆ. ಹಾಗಾದ್ರೆ ಭೂಮಿ ಮೇಲೆ ಕಾಣ ಸಿಗುವ ಅಪರೂಪದ, ಸುಂದರವಾದ ಬಿಳಿ ಬಣ್ಣದ ಪಕ್ಷಿ, ಪ್ರಾಣಿಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ..

ಬಿಳಿ ಕಾಗೆ- ನಾವೆಲ್ಲರೂ ಕಪ್ಪು ಬಣ್ಣದ ಕಾಗೆಯನ್ನ ನೋಡಿರ್ತೀವಿ. ಆದ್ರೆ ಬಿಳಿ ಬಣ್ಣದ ಕಾಗೆಯನ್ನ ನೋಡೋದು ಅಪರೂಪ. ಬಿಳಿ ಕಾಗೆ ಇರೋದು ಕೂಡಾ ಅಪರೂಪಾನೆ. ಭಾರತದಲ್ಲಿ ದೆಹಲಿ ಮತ್ತು ಕರ್ನಾಟಕದಲ್ಲಿ ಮಾತ್ರ ಬಿಳಿ ಕಾಗೆ ಇದೆ. ಉಡುಪಿ ಜಿಲ್ಲೆಯ ಸಾಲಿಗ್ರಾಮದಲ್ಲಿ ಬಿಳಿ ಕಾಗೆಯನ್ನ ನಾವು ಕಾಣಬಹುದು.

ಬಿಳಿ ಮೊಸಳೆ. ಬಿಳಿ ಬಣ್ಣದ ಮೊಸಳೆಯನ್ನ ಎಲ್ಫೈನೋ ಎಲಿಗೇಟರ್ ಅಂತಾ ಕರೀತಾರೆ. ಎಲ್ಲ ಮೊಸಳೆಗಳ ಕಣ್ಣು ಕಪ್ಪಾಗಿರುತ್ತದೆ. ಆದ್ರೆ ಬಿಳಿ ಮೊಸಳೆ ದೇಹದ ಜೊತೆಗೆ ಕಣ್ಣೂ ಕೂಡ ಬಿಳಿ ಬಣ್ಣದ್ದಾಗಿರುತ್ತದೆ.  ಇನ್ನು ಬೇರೆ ಮೊಸಳೆಗಳು ಬಿಸಿಲಿನಲ್ಲಿ ಸಂಚರಿಸುತ್ತದೆ. ಆದ್ರೆ ಬಿಳಿ ಮೊಸಳೆ ಬಿಸಿಲಿನಲ್ಲಿ ಓಡಾಡಲು ಸಾಧ್ಯವಿಲ್ಲ. ಹೀಗಾಗಿ ಇದನ್ನ ಸಾಕಬೇಕಾಗುತ್ತದೆ. ಇದಕ್ಕೆ ಕಾಳಜಿ ವಹಿಸುವ ಅವಶ್ಯಕತೆ ಇರುತ್ತದೆ.

ಬಿಳಿ ಆನೆ. ಬಿಳಿ ಆನೆ ಅಂದ ತಕ್ಷಣ ನಮ್ಮ ನೆನಪಿಗೆ ಬರೋದು, ಇಂದ್ರನ ವಾಹನ ಐರಾವತ. ಹಾಗಾಗಿ ಹಿಂದೂಗಳಲ್ಲಿ ಬಿಳಿ ಆನೆಗೆ ಉನ್ನತ ಮಹತ್ವವನ್ನ ಕೊಡಲಾಗಿದೆ. ಥೈಲ್ಯಾಂಡ್‌ನಲ್ಲಿಯೂ ಬಿಳಿ ಆನೆಯನ್ನ ಪೂಜಿಸಲಾಗತ್ತೆ. ಅಲ್ಲಿ ಸಾಂಸ್ಕೃತಿಯ ಕಾರ್ಯಕ್ರಮದಲ್ಲಿ ಬರೀ ಬಿಳಿ ಆನೆಯನ್ನ ಬಳಸಲಾಗತ್ತೆ.

ಬಿಳಿ ಸರ್ಪ. ಬೀಳಿ ಸರ್ಪ ಕನಸ್ಸಿನಲ್ಲಿ ಬಂದು ಕಚ್ಚಿದ್ರೆ, ಶುಕ್ರದೆಸೆ ಶುರುವಾದಂತೆ ಅನ್ನೋ ಬಗ್ಗೆ ನಾವು ಈ ಮೊದಲೇ ಹೇಳಿದ್ದೆವು. ಯಾಕಂದ್ರೆ ಇದಕ್ಕೆ ದೈವಿಕ ಸ್ಥಾನವನ್ನ ನೀಡಲಾಗಿದೆ. ಇನ್ನು ಈ ಸರ್ಪ ಆಸ್ಟ್ರೇಲಿಯಾದಲ್ಲಿ ಕಂಡು ಬರುತ್ತದೆ. ಇದನ್ನ ಮಿಲ್ಕ್ ಸ್ನೇಕ್ ಅಂತಾನೂ ಕರೆಯಲಾಗತ್ತೆ. ಮೊಟ್ಟೆ ಒಡೆದು ಹೊರ ಬಂದಾಗ ಇದು ಬೇರೆ ಬೇರೆ ಬಣ್ಣದಿಂದ ಕೂಡಿರುತ್ತದೆ. ಆದ್ರೆ ಬೆಳೆಯುತ್ತ ಬೆಳೆಯುತ್ತ ಘಾಡ ಬಣ್ಣಕ್ಕೆ ತಿರರುಗುತ್ತದೆ.

ಇನ್ನು ಮುಖ್ಯವಾದ ಸಂಗತಿ ಅಂದ್ರೆ ಪ್ರಾಣಿ ಪಕ್ಷಿಗಳು ದೇಹದಲ್ಲಿ ಕೆಲ ಅಂಶಗಳು ಕಡಿಮೆಯಾದಾಗ ಹೀಗೆ ಬಿಳಿ ಬಣ್ಣವಾಗಿ ಹುಟ್ಟುತ್ತದೆ. ಅದು ಸುಂದರವಾಗಿ ಕಾಣುತ್ತದೆ. ಆದ್ರೆ ಮನುಷ್ಯರಲ್ಲೂ ಈ ಅಂಶ ಕಡಿಮೆಯಾದಾಗ, ಅವರ ಅಂದವನ್ನೇ ಹಾಳು ಮಾಡುತ್ತದೆ. ಕೆಲ ತಪ್ಪು ಆಹಾರಗಳನ್ನು ಸೇರಿಸಿ ತಿನ್ನುವುದೇ ಇದಕ್ಕೆ ಕಾರಣ ಅಂತಾ ಹೇಳಲಾಗುತ್ತದೆ. ಉದಾಹರಣೆಗೆ ಹಾಲಿನ ಜೊತೆ ಮೀನು ತಿನ್ನುವುದರಿಂದ ಈ ಖಾಯಿಲೆ ಬರುತ್ತದೆ ಅಂತಾ ಹೇಳಲಾಗಿದೆ. ಇದೇ ರೀತಿ ತಪ್ಪು ಆಹಾರ ಪದ್ಧತಿಯಿಂದ ಬಿಳಿ ಚರ್ಮ ರೋಗ ಬರುತ್ತದೆ.

- Advertisement -

Latest Posts

Don't Miss